ಭೋಪಾಲ್: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದ ಪರಿಣಾಮ 21 ಜನ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿರುವ ಭೀಕರ ಅಪಘಾತ ಮಧ್ಯಪ್ರದೇಶದಲ್ಲಿ ನಡೆದಿದೆ.
ಸೀಧೀ ಜಿಲ್ಲೆಯ ಅಮೇಲಿಯಾ ಗ್ರಾಮದಲ್ಲಿ ಸೋನ್ ನದಿಗೆ ನಿರ್ಮಿಸಲಾಗಿದ್ದ ಸೇತುವೆಯಲ್ಲಿ ಟ್ರಕ್ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ 100 ಮೀಟರ್ ಎತ್ತರದಿಂದ ನದಿಗೆ ಬಿದ್ದಿದೆ. ಘಟನೆಯಲ್ಲಿ ಒಟ್ಟು 21 ಜನ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Advertisement
Advertisement
ಆಗಿದ್ದೇನು? ಸಿಂಗ್ರೌಲಿ ಜಿಲ್ಲೆಯ ನಿವಾಸಿಗಳಾದ 45 ಜನರು ಟ್ರಕ್ ನಲ್ಲಿ ಸೀಧೀ ಜಿಲ್ಲೆಯ ಹರ್‍ಬಿರ್ಜಿ ಗ್ರಾಮದಲ್ಲಿಯ ಮದುವೆಗೆ ಆಗಮಿಸಿದ್ರು. ಮದುವೆಯ ಹಿಂದಿರುಗುವ ವೇಳೆ ರಾತ್ರಿ ಸುಮಾರು 9.30ಕ್ಕೆ ಸೇತುವೆಯ ಮೇಲೆ ಚಾಲಕ ನಿಯಂತ್ರಣ ತಪ್ಪಿದ ಟ್ರಕ್ ನದಿಗೆ ಬಿದ್ದಿದೆ.
Advertisement
ಘಟನೆಯಲ್ಲಿ ಒಟ್ಟು 21 ಜನ ಸಾವನ್ನಪ್ಪಿದ್ದು, 20 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮನೋಜ್ ಶ್ರೀವಾತ್ಸವ್ ತಿಳಿಸಿದ್ದಾರೆ.
Advertisement
ಘಟನೆಯ ಬಳಿಕ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ. ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂ., ಉಳಿದ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
https://www.youtube.com/watch?v=OTc7ncX_X1w
#SpotVisuals from site of accident in which 21 people died after a truck fell into Son river last night, in Madhya Pradesh's Sidhi pic.twitter.com/cM4FujOHS3
— ANI (@ANI) April 18, 2018
21 people have died in the accident & many have been injured. The injured have been taken to the hospital for treatment: Dilip Kumar, Collector on the accident that took place in Sidhi, #MadhyaPradesh where a truck fell into river Son. pic.twitter.com/f1Ouc8iXzM
— ANI (@ANI) April 17, 2018
सीधी जिले में सोन नदी के जोगदहा पुल पर हुआ दर्दनाक सड़क हादसा अत्यंत दुखद है। ईश्वर से प्रार्थना है कि दिवंगत आत्माओं को शांति प्रदान करें और घायलों को शीघ्र स्वास्थ्य लाभ मिले। जिन परिवारों ने अपनों को खो दिया है उन्हें संबल प्रदान करें।
— Shivraj Singh Chouhan (@ChouhanShivraj) April 17, 2018