58ನೇ ವರ್ಷದಲ್ಲಿ ಮಗುವಿಗೆ ಜನ್ಮ ನೀಡಿದ ಸಿಧು ಮೂಸೇವಾಲಾ ತಾಯಿಗೆ ಸಂಕಷ್ಟ!

Public TV
1 Min Read
SIDHU MOOSEWALA

ಚಂಡೀಗಢ: ಕೆಲ ದಿನಗಳ ಹಿಂದೆಯಷ್ಟೇ ಗಾಯಕ ದಿ. ಸಿಧು ಮೂಸೇವಲಾ ತಾಯಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದೀಗ ಅವರಿಗೆ ಸಂಕಷ್ಟ ಎದುರಾಗಿದೆ.

ಹೌದು.‌ 21 ರಿಂದ 50 ವರ್ಷದೊಳಗಿನ ಮಹಿಳೆ ಮಾತ್ರ ಐವಿಎಫ್  ಸಹಾಯದಿಂದ ಮಗುವಿಗೆ ಜನ್ಮ ನೀಡಬಹುದಾಗಿದೆ. ಆದರೆ ಚರಣ್ ಕೌರ್ ಅವರಿಗೆ 58 ವರ್ಷ ವರ್ಷ ವಯಸ್ಸಾಗಿತ್ತು. ಹೀಗಾಗಿ ಮಾರ್ಚ್ 14ರಂದು ಪಂಜಾಬ್ ಸರ್ಕಾರಕ್ಕೆ (Punjab Govt) ಕೇಂದ್ರ ಸರ್ಕಾರ ಪತ್ರ ಕಳುಹಿಸಿದ್ದು, ಚರಣ್ ಕೌರ್ ಅವರ ಐವಿಎಫ್ ಚಿಕಿತ್ಸೆ (Charan Kaur’s IVF Treatment) ಕುರಿತು ವರದಿ ಕೇಳಿದೆ.

sidhu moose wala 1 1

ಚರಣ್ ಕೌರ್ ಅವರು ಮಗುವಿಗೆ ಜನ್ಮ ನೀಡಲು IVF ಚಿಕಿತ್ಸೆಯ ಮೊರೆ ಹೋಗಿರುವ ಬಗ್ಗೆ ಫೆಬ್ರವರಿ 27ರ ಪತ್ರಿಕಾ ವರದಿಯನ್ನು ಪರಿಶೀಲಿಸಲಾಗಿದೆ. ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ (ತಡೆ) ಕಾಯ್ದೆ, 2021ರ ಸೆಕ್ಷನ್ 21 (g) (i) ಅಡಿ, ಎಆರ್‌ಟಿ ಸೇವೆಗೆ ಒಳಪಡಲಿರುವ ಮಹಿಳೆಯ ವಯಸ್ಸಿನ ಸೂಚಿತ ಮಿತಿಯು 21- 50 ವರ್ಷಗಳಾಗಿರುತ್ತದೆ ಎಂದು ಆರೋಗ್ಯ ಸಚಿವಾಲಯ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದೆ.

2022ರ ಮೇ 29 ರಂದು ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೇವಾಲಾ (Sidhu Moose Wala) ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಇತ್ತ ಇದ್ದ ತಮ್ಮ ಏಕೈಕ ಮಗನನ್ನು ಕಳೆದುಕೊಂಡ ಸುಮಾರು ಎರಡು ವರ್ಷಗಳ ನಂತರ ದಂಪತಿ ಎರಡನೇ ಮಗುವನು ಪಡೆಯುವ ಸಲುವಾಗಿ IVF ಮೊರೆ ಹೋಗಿದ್ದರು. ಇದನ್ನೂ ಓದಿ: ಸದಾನಂದಗೌಡರು ಬಿಜೆಪಿ ಪಕ್ಷ ಬಿಡ್ತಾರೆ ಅನ್ನೋದು ಸುಳ್ಳು: ಶೋಭಾ ಕರಂದ್ಲಾಜೆ

ಈ ಸಂಬಂಧ ಎಎಪಿ ನೇತೃತ್ವದ ಸರ್ಕಾರವು ಬುಧವಾರ ಟ್ವೀಟ್ ಮಾಡಿದ್ದು, ಚರಣ್ ಕೌರ್‌ ಅವರೇ ಸಿಎಂ ಭಗವಂತ್ ಮಾನ್ ಅವರು ಯಾವಾಗಲೂ ಪಂಜಾಬಿಗಳ ಭಾವನೆಗಳು ಮತ್ತು ಘನತೆಯನ್ನು ಗೌರವಿಸುತ್ತಾರೆ. ಆದರೆ ದೇಶದ ಆಡಳಿತದಲ್ಲಿರುವ ಕೇಂದ್ರ ಸರ್ಕಾರವು ಪಂಜಾಬ್ ಸರ್ಕಾರದಿಂದ ವರದಿಯನ್ನು ಕೇಳಿದೆ. ಸತ್ಯಾಸತ್ಯತೆಗಳನ್ನು ನೋಡುವಂತೆ ಜನರನ್ನು ಒತ್ತಾಯಿಸಿ ಮತ್ತು ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಬರೆದುಕೊಂಡಿದೆ.

Share This Article