ಬೆಂಗಳೂರು: ರಾಜ್ಯದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳು ಮಾತ್ರ ತಲೆ ಕೆಡಿಸಿಕೊಳ್ಳಬೇಕಷ್ಟೇ. ಯಾವೊಬ್ಬ ಜನಪ್ರತಿನಿಧಿಯಾಗ್ಲಿ, ಯಾವೊಬ್ಬ ಅಧಿಕಾರಿಯಾಗ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ನಿವಾರಣೆ ಮಾಡೋದು ಇರಲಿ. ಎಲ್ಲರಿಗೂ ಈಗ ಪಟ್ಟದ ಚಿಂತೆ. ಅದರಲ್ಲೂ ಈ ಬಾರಿ ಸಂಪುಟ ರಚನೆ ವೇಳೆ ಹತ್ತರಿಂದ 12 ಮಂದಿ ಹಿರಿಯರನ್ನು ಪರಿಗಣಿಸಲ್ಲ.
Advertisement
ವಿವಾದವೀರರನ್ನು ಕೈಬಿಟ್ಟು ಕ್ಲೀನ್ ಅಂಡ್ ಯಂಗ್ ಕ್ಯಾಬಿನೆಟ್ ರಚನೆಗೆ ಹೈಕಮಾಂಡ್ ಚಿಂತನೆ ನಡೆಸಿದೆ ಎಂಬ ಸುದ್ದಿ ಕಿವಿಗೆ ಬಿದ್ದ ಕ್ಷಣದಿಂದ ಕೇಸರಿ ಪಡೆಯ ಕೆಲ ಘಟಾನುಘಟಿ ನಾಯಕರು ನಿದ್ದೆ ಕೂಡ ಮಾಡಿಲ್ಲ. ರಾತ್ರೋರಾತ್ರಿ ದೆಹಲಿ ದಂಡಯಾತ್ರೆ ನಡೆಸಿದ್ದಾರೆ. ಕೆಲವರು ಹೊಸ ಸಿಎಂ ಬೊಮ್ಮಾಯಿಯ ಹಿಂದೆ ಮುಂದೆ ಸುತ್ತಿದ್ರೇ, ಇನ್ನೂ ಕೆಲವರು ತಮಗೆ ಹತ್ತಿರವಿರುವ ನಾಯಕರ ಮೂಲಕ ಹೈಕಮಾಂಡ್ ಕೃಪೆಗೆ ಪಾತ್ರರಾಗಲು ಪ್ರಯತ್ನ ನಡೆಸಿದ್ದಾರೆ.
Advertisement
Advertisement
ಕೆಲವರು ಹೊರಗೆಲ್ಲೂ ಕಾಣಿಸಿಕೊಳ್ಳದೇ ದೆಹಲಿಯ ರಹಸ್ಯ ಸ್ಥಳದಲ್ಲಿ ಬೀಡುಬಿಟ್ಟು ಲಾಬಿ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಮಾತನಾಡಿ, ಎಲ್ರಿಗೂ ಆಕಾಂಕ್ಷೆ ಇರುತ್ತೆ. ನಮ್ಮದು ರಾಷ್ಟ್ರೀಯ ಪಕ್ಷ, ಎಲ್ಲವನ್ನು ನಿಭಾಯಿಸಲಾಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿಗಿದೆ ದೊಡ್ಡ ಸವಾಲು – ಅತಿವೃಷ್ಠಿ, ಪ್ರವಾಹ, 3ನೇ ಅಲೆಯೇ ಟ್ರಬಲ್
Advertisement
ದೆಹಲಿ ಯಾತ್ರೆ ಕೈಗೊಂಡ ದಂಡನಾಯಕರು..!
* ಮಾಜಿ ಮಂತ್ರಿ ಉಮೇಶ್ ಕತ್ತಿಯವರು ಹುಕ್ಕೇರಿಯ 23 ಹಳ್ಳಿಗಳಲ್ಲಿ ಪ್ರವಾಹ ಸಮಸ್ಯೆ. ಉಮೇಶ್ ಅವರ ಕ್ಷೇತ್ರ ಹುಕ್ಕೇರಿ ಸೇರಿದಂತೆ ಇಡೀ ಬೆಳಗಾವಿ ಜಿಲ್ಲೆಯಲ್ಲಿ ಈಗಲೂ ಪ್ರವಾಹ ಪರಿಸ್ಥಿತಿ ಇದೆ. ಆದರೆ ಇದರ ಗೊಡವೆ ಉಮೇಶ್ ಕತ್ತಿಗೆ ಇದ್ದಂತಿಲ್ಲ.
* ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರು ಅಥಣಿಯ 22 ಹಳ್ಳಿಗಳಲ್ಲಿ ಪ್ರವಾಹ ಸಮಸ್ಯೆ. ಲಕ್ಷ್ಮಣ ಸವದಿ ಈ ಹಿಂದೆ ಪ್ರತಿನಿಧಿಸ್ತಿದ್ದ ಅಥಣಿಯ 22 ಹಳ್ಳಿಗಳಲ್ಲಿ ಪ್ರವಾಹ ಸಮಸ್ಯೆ ಇದೆ. ಇಡೀ ಬೆಳಗಾವಿ ಜಿಲ್ಲೆಗೆ ಜಲಕಂಟಕ ಎದುರಾಗಿದೆ. ಆದರೆ ಲಕ್ಷ್ಮಣ ಸವದಿಗೆ ಇದರ ಕಡೆ ಗಮನ ಇಲ್ಲ.
* ಮಾಜಿ ಮುಖ್ಯಮಂತ್ರಿ ಆರ್ ಅಶೋಕ್ ಅವರು ಬಿಎಸ್‍ವೈ ಸರ್ಕಾರದಲ್ಲಿ ಕಂದಾಯ ಮಂತ್ರಿಗಳಾಗಿದ್ದವರು. ನಿಕಟಪೂರ್ವ ಕಂದಾಯ ಮಂತ್ರಿಗಳಾಗಿರುವ ಕಾರಣ ಇವರಿಗೆ ಹೆಚ್ಚಿನ ಜವಾಬ್ದಾರಿ ಇರಬೇಕಿತ್ತು. ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಹಲವು ಸಲಹೆ ಸೂಚನೆ ನೀಡಬಹುದಿತ್ತು. ಆದರೆ ಇವರಿಗೆ ಪುರುಸೊತ್ತಿಲ್ಲ.
* ಮಾಜಿ ಮಂತ್ರಿ ಯೋಗೇಶ್ವರ್ ಅವರು ಈ ಹಿಂದಿನ ಸರ್ಕಾರದಲ್ಲಿ ಪ್ರವಾಸೋದ್ಯಮ ಮಂತ್ರಿಗಳು.. ಈಗಲೂ ಎಂದಿನಂತೆ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇನ್ನು ಅರವಿಂದ್ ಬೆಲ್ಲದ್, ಎಂಪಿ ಕುಮಾರಸ್ವಾಮಿ, ಸೋಮಲಿಂಗಪ್ಪ, ಎಂಎಲ್‍ಸಿಗಳಾದ ತೇಜಸ್ವಿನಿಗೌಡ, ನಾರಾಯಣಸ್ವಾಮಿ ಸೇರಿ ಹತ್ತಾರು ಜನಪ್ರತಿನಿಧಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.