ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರರಾದ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರು ಸ್ಮರಣೀಯ ಜೊತೆಯಾಟವನ್ನು 1999ರ ಮೇ 26ರಂದು ದಾಖಲಿಸಿದ್ದರು. ಅವರ ಈ ಸಾಧನೆ ಇಂದಿಗೂ ಅಭಿಮಾನಿಗಳ ನೆನಪಿನಲ್ಲಿದೆ.
1999ರ ವಿಶ್ವಕಪ್ ಟೂರ್ನಿಯ ಭಾಗವಾಗಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಇಂಗ್ಲೆಂಡ್‍ನ ಟೌಂಟನ್‍ನಲ್ಲಿ ಪಂದ್ಯ ನಡೆದಿತ್ತು. ಆಗ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ 318 ರನ್‍ಗಳ ಜೊತೆಯಾಟದ ದಾಖಲೆ ಬರೆದಿದ್ದರು. ಈ ದಾಖಲೆಗೆ ಇಂದಿಗೆ ಸರಿಯಾಗಿ 21 ವರ್ಷದ ಸಂಭ್ರಮ.
Advertisement
Sourav Ganguly (183) and Rahul Dravid (145) registered a mammoth 318-run partnership for the 2nd wicket against SL in the 1999 World Cup at Taunton. This was the first time that a 300-run partnership was witnessed in ODIs. pic.twitter.com/MoX47EZUsw
— BCCI (@BCCI) May 26, 2020
Advertisement
ಟಾಸ್ ಗೆದ್ದ ಶ್ರೀಲಂಕಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಘಾತವನ್ನು ಅನುಭವಿಸಿತು. ಕೇವಲ 6 ರನ್ ಗಳಿಸಿದ್ದಾಗ ಆರಂಭಿಕ ಬ್ಯಾಟ್ಸ್‍ಮನ್ ಎಸ್.ರಮೇಶ್ ಚಾಮಿಂಡ ವಾಸ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ದರು. ಆದರೆ ಅದಾದ ಬಳಿಕ ಲಂಕಾದ ಬೌಲರ್ ಗಳಿಗೆ ಮುಂದಿನ ವಿಕೆಟ್ ಪಡೆಯಲು ಹೆಚ್ಚು ಸಮಯವೇ ಬೇಕಾಯಿತು.
Advertisement
ಎರಡನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ರಾಹುಲ್ ದ್ರಾವಿಡ್ ಕ್ರೀಸ್‍ನಲ್ಲಿದ್ದ ದಾದಾ ಖ್ಯಾತಿ ಗಂಗೂಲಿಗೆ ಸಾಥ್ ನೀಡಿದರು. ಈ ಜೋಡಿಯು ಎರಡನೇ ವಿಕೆಟ್‍ಗೆ ದಾಖಲೆಯ 318 ರನ್‍ಗಳ ಗಳಿಸಿತು. ಈ ಜೊತೆಯಾಟದಲ್ಲಿ ಗಂಗೂಲಿ 183 ರನ್ ಮತ್ತು ರಾಹುಲ್ ದ್ರಾವಿಡ್ 145 ರನ್ ಗಳಿಸಿದ್ದರು.
Advertisement
145 ರನ್ (129 ಎಸೆತ, 17 ಬೌಂಡರಿ, 1 ಸಿಕ್ಸ್) ಗಳಿಸಿದ್ದ ರಾಹುಲ್ ದ್ರಾವಿಡ್ 46ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದ್ದರು. ಬ್ಯಾಟಿಂಗ್ ಮುಂದುವರಿಸಿದ ಗಂಗೂಲಿ ಇನ್ನಿಂಗ್ಸ್ ನ ಕೊನೆಯ ಓವರಿನಲ್ಲಿ ವಿಕೆಟ್ ನೀಡಿದರು. ಈ ಪಂದ್ಯದಲ್ಲಿ ದಾದಾ ತಮ್ಮ ಏಕದಿನ ವೃತ್ತಿ ಜೀವನ ಅತ್ಯಧಿಕ ರನ್ 183 (158 ಎಸೆತ, 17 ಬೌಂಡರಿ, 7 ಸಿಕ್ಸ್) ಸಿಡಿಸಿದರು.
ದಾದಾ- ದ್ರಾವಿಡ್ ಜೋಡಿಯ ಸಹಾಯದಿಂದ ಭಾರತ 6 ವಿಕೆಟ್‍ಗಳಿಗೆ 373 ರನ್‍ಗಳ ಬೃಹತ್ ಸ್ಕೋರ್ ಗಳಿಸಿತ್ತು. ಟೀಂ ಇಂಡಿಯಾ ನೀಡಿದ್ದ ಗುರಿಯನ್ನು ಹಿಂದಿಕ್ಕುವಲ್ಲಿ ಶ್ರೀಲಂಕಾ ವಿಫಲವಾಯಿತು. 43ನೇ ಓವರ್ ನಲ್ಲಿ 216 ರನ್ ಗಳಿಸಿದ್ದ ಶ್ರೀಲಂಕಾ ಸರ್ವಪತನ ಕಂಡಿತ್ತು. ಈ ಮೂಲಕ ಪಂದ್ಯವನ್ನು ಭಾರತವು 157 ರನ್‍ಗಳಿಂದ ಗೆದ್ದುಕೊಂಡಿತ್ತು. ರಾಬಿನ್ ಸಿಂಗ್ ಭಾರತ ಪರ ಐದು ವಿಕೆಟ್ ಪಡೆದು ಮಿಂಚಿದ್ದರು.
ದ್ರಾವಿಡ್ ಮತ್ತು ಗಂಗೂಲಿ ನಡುವಿನ 312 ರನ್ ಗಳ ಜೊತೆಯಾಟವು ಏಕದಿನ ಪಂದ್ಯಗಳಲ್ಲಿ ನಾಲ್ಕನೇ ಅತಿದೊಡ್ಡ ಜೊತೆಯಾಟವಾಗಿದೆ. 1999ರ ವಿಶ್ವಕಪ್‍ನಲ್ಲಿ ಭಾರತದ ಪ್ರಯಾಣವು ಸೂಪರ್ ಸಿಕ್ಸ್ ನಲ್ಲಿ ಕೊನೆಗೊಂಡಿತ್ತು. ಹೀಗಾಗಿ ತಂಡವು ಸೆಮಿಫೈನಲ್‍ಗೆ ಪ್ರವೇಶಿಸಲಿಲ್ಲ.
312 ರನ್ ಜೊತೆಯಾಟ ವಿಶ್ವದಾಖಲೆಯನ್ನು ಕೆಲವೇ ತಿಂಗಳ ಅಂತರದಲ್ಲಿ ಭಾರತೀಯ ಜೋಡಿಯೇ ಮುರಿದಿತ್ತು. ಅದರಲ್ಲೂ ರಾಹುಲ್ ದ್ರಾವಿಡ್ ಇದ್ದರು ಎಂಬುದು ಮತ್ತೊಂದು ವಿಶೇಷ. ಸಚಿನ್ ತೆಂಡೂಲ್ಕರ್ (ಔಟಾಗದೆ 186 ರನ್) ಹಾಗೂ ರಾಹುಲ್ ದ್ರಾವಿಡ್ (153 ರನ್) ಎರಡನೇ ವಿಕೆಟ್‍ಗೆ 331 ರನ್‍ಗಳನ್ನು ಚಚ್ಚಿತ್ತು. ಈ ದಾಖಲೆ ಮಾತ್ರ ಸುಮಾರು 14 ವರ್ಷಗಳ ಕಾಲ ಮುರಿಯದೆ ಉಳಿದಿತ್ತು.
Sourav Ganguly:
???? 183 runs
???? 158 balls
???? 17 fours, seven sixes
Rahul Dravid:
???? 145 runs
???? 129 balls
???? 17 fours, one six#OnThisDay in 1999, the India duo added 318 runs for the second wicket in an ICC @cricketworldcup encounter against Sri Lanka ???? pic.twitter.com/o86DaCOsW7
— ICC (@ICC) May 26, 2020