ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಳಿಕೆ ಆಗ್ತಿದ್ರೂ ಸಾವಿನ ಸಂಖ್ಯೆ ಕಡಿಮೆ ಅಗ್ತಿಲ್ಲ. ಕಳೆದ 10 ದಿನದಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಂದು 20,505 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 81 ಮರಣ ಪ್ರಕರಣ ಪತ್ತೆಯಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬೆಳಗಾವಿಯಲ್ಲಿ 2 ತಿಂಗಳ ಮಗು ಬಲಿಯಾಗಿದೆ. ಪಾಸಿಟಿವಿಟಿ ರೇಟ್ 12.55%ಕ್ಕೆ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಒಟ್ಟು 8,850 ಹೊಸ ಕೇಸ್ ಪತ್ತೆಯಾಗಿದ್ದು, 13 ಮರಣ ಪ್ರಕರಣ ವರದಿಯಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 40,903 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 38,44,338 ಮಂದಿಗೆ ಕೊರೊನಾ ಬಂದಿದೆ. ಒಟ್ಟು 36,27,925 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.0.39% ರಷ್ಟಿದೆ. ಇದನ್ನೂ ಓದಿ: ಹಿಜಬ್ ಕೈಬಿಡಲು ಒಪ್ಪದ ಪೋಷಕರು – ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು!
ಕಳೆದ 10 ದಿನದಲ್ಲಿ 461 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಜ.22ರಿಂದ 31ರವರೆಗೆ 461 ಮಂದಿ ಕೊರೊನಾಗೆ ಮರಣಹೊಂದಿದ್ದು, ಇದರಲ್ಲಿ 39 ಮಂದಿ ಚಿಕಿತ್ಸೆಗೆ ಮುನ್ನವೇ ಸಾವನ್ನಪ್ಪಿದ್ದಾರೆ. 39 ಸಾವಿನ ಪೈಕಿ, 32 ಮಂದಿ ಮನೆಯಲ್ಲೇ ಸಾವನ್ನಪ್ಪಿದ್ದು, 7 ಮಂದಿ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಬಲಿ ಆಗಿದ್ದಾರೆ. ಅಂಕಿ ಅಂಶದ ಪ್ರಕಾರ 100 ಕೊರೊನಾ ಸಾವಿನ ಪೈಕಿ 8 ಮಂದಿ ಮನೆಯಲ್ಲೇ ನಿಧನ ಹೊಂದಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ಕೋವಿಡ್ ಪಾಸಿಟಿವ್
ರಾಜ್ಯದಲ್ಲಿ ಇಂದು ಒಟ್ಟು 3,37,947 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,63,320 ಸ್ಯಾಂಪಲ್ (ಆರ್‌ಟಿಪಿಸಿಆರ್ 1,25,442 + 37,878 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಇಂದು ಬೆಂಗಳೂರನ್ನು ಹೊರತು ಪಡಿಸಿ ಮೈಸೂರಲ್ಲಿ ಅತೀ ಹೆಚ್ಚು, 1,209 ಕೇಸ್ ದಾಖಲಾಗಿದೆ. ಮರಣ ಪ್ರಕರಣದಲ್ಲಿ ಬೆಂಗಳೂರಿನ ಬಳಿಕ ದಕ್ಷಿಣ ಕನ್ನಡದಲ್ಲಿ 10 ಮರಣ ಪ್ರಕರಣ ದಾಖಲಾಗಿದೆ. ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 303, ಬಳ್ಳಾರಿ 390, ಬೆಳಗಾವಿ 1,060, ಬೆಂಗಳೂರು ಗ್ರಾಮಾಂತರ 195, ಬೆಂಗಳೂರು ನಗರ 8,850, ಬೀದರ್ 190, ಚಾಮರಾಜನಗರ 364, ಚಿಕ್ಕಬಳ್ಳಾಪುರ 311, ಚಿಕ್ಕಮಗಳೂರು 89, ಚಿತ್ರದುರ್ಗ 208, ದಕ್ಷಿಣ ಕನ್ನಡ 412, ದಾವಣಗೆರೆ 160, ಧಾರವಾಡ 633, ಗದಗ 131, ಹಾಸನ 590, ಹಾವೇರಿ 411, ಕಲಬುರಗಿ 337, ಕೊಡಗು 543, ಕೋಲಾರ 300, ಕೊಪ್ಪಳ 220, ಮಂಡ್ಯ 579, ಮೈಸೂರು 1,209, ರಾಯಚೂರು 165, ರಾಮನಗರ 79, ಶಿವಮೊಗ್ಗ 715, ತುಮಕೂರು 762, ಉಡುಪಿ 542, ಉತ್ತರ ಕನ್ನಡ 595, ವಿಜಯಪುರ 92 ಮತ್ತು ಯಾದಗಿರಿಯಲ್ಲಿ 70 ಪಾಸಿಟಿವ್ ಪ್ರಕರಣ ದಾಖಲಾಗಿದೆ.