18ನೇ ಆವೃತ್ತಿಯ ಐಪಿಎಲ್ (IPL 2025) ಶುರುವಿಗೆ ದಿನಗಣನೆ ಶುರುವಾಗಿದೆ. ಇದೇ ಮಾ.22ರಂದು ಐಪಿಎಲ್ 2025ರ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್ (Bollywood) ಸ್ಟಾರ್ಸ್ ಸಾಕ್ಷಿಯಾಗಲಿದ್ದಾರೆ. ಶಾರುಖ್ ಖಾನ್, ದಿಶಾ ಪಟಾನಿ, ಗಾಯಕಿ ಶ್ರೇಯಾ ಘೋಷಾಲ್ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ.
Brace yourself for a symphony of magic like never before as the soulful Shreya Ghoshal takes the stage at the #TATAIPL 18 Opening Ceremony! 😍
Celebrate 18 glorious years with a voice that has revolutionised melody🎶@shreyaghoshal pic.twitter.com/mJB9T5EdEe
— IndianPremierLeague (@IPL) March 19, 2025
ಐಪಿಎಲ್ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಆರ್‌ಸಿಬಿ (RCB) ಮುಖಾಮುಖಿ ಆಗಲಿದೆ. ಕೋಲ್ಕತ್ತ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರೇಯಾ ಘೋಷಲ್ ಗಾಯನ, ದಿಶಾ ಪಟಾನಿ (Disha Patani) ಡ್ಯಾನ್ಸ್ ಸೇರಿದಂತೆ ಇತರೆ ಸ್ಟಾರ್‌ಗಳು ಹೆಜ್ಜೆ ಹಾಕಲಿದ್ದಾರೆ.
When it’s 18 years of IPL, it calls for a dazzling celebration like never before! 🥳
Who better than the sensational Disha Patani to set the stage ablaze? 💃
Don’t miss the electrifying Opening Ceremony of the #TATAIPL 18! 🤩 @DishPatani pic.twitter.com/3TeHjOdz67
— IndianPremierLeague (@IPL) March 19, 2025
ಅದಷ್ಟೇ ಅಲ್ಲ, ಕತ್ರಿನಾ ಕೈಫ್, ವರುಣ್ ಧವನ್, ಸಲ್ಮಾನ್ ಖಾನ್, ತೃಪ್ತಿ ದಿಮ್ರಿ, ಅನನ್ಯಾ ಪಾಂಡೆ, ಮಾಧುರಿ ದೀಕ್ಷಿತ್, ಜಾನ್ವಿ ಕಪೂರ್, ವಿಕ್ಕಿ ಕೌಶಲ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಒಟ್ಟು 23 ಕಡೆಗಳಲ್ಲಿ 74 ಮ್ಯಾಚ್‌ಗಳು ನಡೆಯಲಿದ್ದು, ಮೇ 25ರಂದು ಫಿನಾಲೆ ನಡೆಯಲಿದೆ. ಐಪಿಎಲ್ ಶುರುವಿಗೆ ಫ್ಯಾನ್ಸ್ ಎದುರು ನೋಡ್ತಿದ್ದಾರೆ.