ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಸ್ಪರ್ಧಿಸಬೇಕೆಂದು ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಧೋನಿ ಶನಿವಾರ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿಯ ನಂತರ ಧೋನಿ ಏನು ಮಾಡುತ್ತಾರೆ ಎಂಬ ಕುತೂಹಲ ಎದ್ದಿದೆ.
Advertisement
Advertisement
ಈ ಕುತೂಹಲದ ಬೆನ್ನಲ್ಲೇ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿ, ಎಂ.ಎಸ್. ಧೋನಿ ಕ್ರಿಕೆಟ್ನಿಂದ ನಿವೃತ್ತರಾಗುತ್ತಿದ್ದಾರೆ ಹೊರತು ಬೇರೆ ಯಾವುದರಿಂದಲೂ ಅಲ್ಲ. ಅವರ ಪ್ರತಿಭೆ ಸಮಸ್ಯೆಗಳ ವಿರುದ್ಧ ಹೋರಾಡಲು ನೆರವಾಗಬೇಕು. ಕ್ರಿಕೆಟ್ನಲ್ಲಿ ಅವರು ಪ್ರದರ್ಶಿಸಿದ ಸ್ಪೂರ್ತಿದಾಯಕ ನಾಯಕತ್ವ ಸಾರ್ವಜನಿಕ ಜೀವನಕ್ಕೆ ಅಗತ್ಯವಿದೆ. ಅವರು 2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement
M. S. Dhoni is retiring from Cricket but not from anything else. His talent-to be able to fight against odds and his inspiring leadership of a team that he has demonstrated in cricket is needed in public life. He should fight in LS General Elections in 2024.
— Subramanian Swamy (@Swamy39) August 16, 2020
Advertisement
2019ರ ವಿಶ್ವಕಪ್ ಕ್ರಿಕೆಟ್ ಬಳಿಕ ಯಾವುದೇ ಪಂದ್ಯವಾಡದ ಧೋನಿ ನಿವೃತ್ತಿ ಹೇಳಲಿದ್ದಾರೆ ಎಂಬ ಸುದ್ದಿ ಹಲವು ತಿಂಗಳಿನಿಂದ ಹರಿದಾಡುತ್ತಿತ್ತು. ಆದರೆ ಎಲ್ಲಿಯೂ ಅಧಿಕೃತವಾಗಿ ಧೋನಿ ತಿಳಿಸಿರಲಿಲ್ಲ. ಆದರೆ ಶನಿವಾರ ಎಲ್ಲ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳುತ್ತಿರುವುದಾಗಿ ತಿಳಿಸಿದ್ದರು.
I join millions of cricket fans across the globe to thank @msdhoni for his unparalleled contributions to Indian Cricket. His cool temperament has turned several hot encounters in India’s favour. Under his captaincy India was crowned World Champions twice in different formats.
— Amit Shah (@AmitShah) August 15, 2020
ಎರಡು ವರ್ಷದ ಹಿಂದೆ ಆಗಿನ ಬಿಜೆಪಿ ಅಧ್ಯಕ್ಷ ಹಾಲಿ ಗೃಹ ಸಚಿವ ಅಮಿತ್ ಶಾ ಧೋನಿ ಅವರನ್ನು ಸರ್ಕಾರದ ಅಭಿಯಾನದ ಭಾಗವಾಗಿ ಭೇಟಿಯಾಗಿದ್ದರು. ಶನಿವಾರ ಅಮಿತ್ ಶಾ ಧೋನಿ ಭವಿಷ್ಯಕ್ಕೆ ಶುಭವಾಗಲಿ ಎಂದು ಟ್ವೀಟ್ ಮಾಡಿದ್ದರು.
.@msdhoni has mesmerized millions through his unique style of cricket. I hope he will continue to contribute towards strengthening Indian cricket in the times to come. Best wishes for his future endeavours.
World cricket will miss the helicopter shots, Mahi!
— Amit Shah (@AmitShah) August 15, 2020