2024 ಮೋದಿ ಒನ್ಸ್‌ಮೋರ್‌ – ಜರ್ಮನಿ ಭಾರತೀಯರಿಂದ ಘೋಷಣೆ

Public TV
2 Min Read
NARENDRA MODI

ಬರ್ಲಿನ್: ಜರ್ಮನಿಯ ಬರ್ಲಿನ್‌ಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರಮೋದಿ ಅವರು ಜರ್ಮನಿಯ ಭಾರತೀಯರನ್ನುದ್ದೇಶಿಸಿ ಮಾತನಾಡಿದರು. ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರ ಸಹ-ಅಧ್ಯಕ್ಷತೆಯಲ್ಲಿ ಬರ್ಲಿನ್‌ನಲ್ಲಿ ಕಾರ್ಯಕ್ರಮ ನಡೆಯಿತು.

ಬರ್ಲಿನ್‌ನ ಮುಖ್ಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರಮೋದಿ ಭಾಷಣ ಮಾಡಲು ವೇದಿಕೆಗೆ ಬರುತ್ತಿದ್ದಂತೆ ಅಲ್ಲಿ ನೆಲೆಸಿರುವ ಭಾರತೀಯರು `2024 ಒನ್ಸ್ಮೋರ್ ಮೋದಿ’ (2024ರ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬರಬೇಕು) ಎಂದು ಜಯಘೋಷ ಕೂಗಿದರು. ಇದನ್ನೂ ಓದಿ: ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ: ಹರಿಯಾಣ ಶಾಸಕ ಅಸೀಮ್‌ ಪ್ರತಿಜ್ಞೆ

NARENDRA MODI (2)

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಿಮ್ಮೆಲ್ಲರನ್ನು ನೋಡಿ ತುಂಬಾ ಸಂತೋಷವಾಗುತ್ತಿದೆ. ಯುವಸಮೂಹವೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಇನ್ನಷ್ಟು ಖುಷಿ ನೀಡಿದೆ ಎಂದರು.

ಈ ಹಿಂದೆ ವಿದೇಶಿಯರ ಆಳ್ವಿಕೆಯಿಂದ ದೇಶ ತನ್ನ ಸ್ವಾಭಿಮಾನವನ್ನೇ ಕಳೆದುಕೊಂಡಿತ್ತು. ಇಂದು ಅಭಿವೃದ್ಧಿಯ ಆದಿಯಲ್ಲಿ ಮುನ್ನಡೆಯುತ್ತಿದೆ. ದೇಶದ ಸಂಪನ್ಮೂಲದಲ್ಲಿ ಎಂದಿಗೂ ಕೊರತೆಯಾಗುವುದಿಲ್ಲ ಎಂದೂ ಅವರು ಹೇಳಿದರು. ಇದನ್ನೂ ಓದಿ: ಬಾಬರಿ ಧ್ವಂಸ ವೇಳೆ ಶಿವಸೇನೆ ಎಲ್ಲಿತ್ತು ಎಂದು ನಿಮ್ಮ ನಾಯಕರನ್ನು ಕೇಳಿ: ಬಿಜೆಪಿಗೆ ರಾವತ್ ತಿರುಗೇಟು

ಮುಂದುವರಿದು, ಯಾವುದೇ ಸುಧಾರಣೆಗೆ ರಾಜಕೀಯ ಇಚ್ಛಾಶಕ್ತಿ ಬೇಕು. ಇಂದು ಭಾರತದಲ್ಲಿ ಜೀವನ ಗುಣಮಟ್ಟ, ಶಿಕ್ಷಣದ ಗುಣಮಟ್ಟ ಸೇರಿದಂತೆ ಎಲ್ಲ ಕ್ಷೇತ್ರಗಳೂ ಮುನ್ನಡೆಯುತ್ತಿವೆ. ಅಧಿಕಾರ ಶಾಹಿಯಾಗಿದ್ದ ಕಚೇರಿಗಳು ಉತ್ತಮ ಫಲಿತಾಂಶವನ್ನು ಪಡೆಯುತ್ತಿವೆ. ಸರ್ಕಾರ ತನ್ನ ಸುಧಾರಣೆಗಳ ಮೂಲಕ ದೇಶವನ್ನು ಪರಿವರ್ತಿಸುತ್ತಿದೆ ಎಂದು ತಿಳಿಸಿದರು.

NARENDRA MODI (3)

ಡಿಜಿಟಲ್ ಕ್ಷೇತ್ರದ ಬಗ್ಗೆ ರಾಜಕೀಯ ಇಚ್ಚಾಶಕ್ತಿಯಿದೆ. 2021ರಲ್ಲಿ ಪ್ರಪಂಚದಾದ್ಯಂತ ನಡೆದ ನೈಜ ಪಾವತಿಗಳಲ್ಲಿ ಶೇ.40 ರಷ್ಟು ಭಾರತದಲ್ಲೇ ನಡೆದಿದೆ. ಇದು ಡಿಜಿಟಲ್ ಇಂಡಿಯಾದ ಪೂರಕ ಬೆಳವಣಿಗೆ ಎಂದರು.

ರೈತರ ಪರಿಹಾಧನ, ವಿದ್ಯಾರ್ಥಿವೇತನ ಇತರ ಸರ್ಕಾರದ ನೆರವುಗಳು ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುಮಾರು 10 ಸಾವಿರ ಸೇವೆಗಳು ಆನ್‌ಲೈನ್‌ನಲ್ಲೇ ಲಭ್ಯವಾಗುತ್ತಿದೆ. ಹಾಗಾಗಿ ಯಾರಿಗೂ ವಂಚನೆಯಾಗುವುದಿಲ್ಲ. ಇನ್ನು ಮುಂದೆ `ನಾನು ದೆಹಲಿಯಿಂದ 1 ರೂ. ಕಳುಹಿಸಿದರೆ, ಜನರಿಗೆ 15 ಪೈಸೆ ಮಾತ್ರ ತಲುಪುತ್ತದೆ’ ಎಂದು ಯಾವ ಪ್ರಧಾನಿಯೂ ಹೇಳಬೇಕಾಗಿಲ್ಲ’ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದರು. ಇದನ್ನೂ ಓದಿ: ಜಹಾಂಗೀರ್‌ಪುರಿ ಹಿಂಸಾಚಾರ – ಆರೋಪಿಗಳನ್ನು ಮುಗ್ದರೆಂದ ಜಮಿಯತ್ ನಿಯೋಗ

NARENDRA MODI (3) (1)

ಭಾರತ ಕಳೆದ 3 ದಶಕಗಳಿಂದ ರಾಜಕೀಯ ಅಸ್ಥಿರ ವಾತಾವರಣ ಕಂಡಿತ್ತು. 30 ವರ್ಷಗಳ ನಂತರ 2014 ರಲ್ಲಿ ಪೂರ್ಣ ಬಹುಮತದ ಸರ್ಕಾರ ಸ್ಥಾಪಿತವಾದ ಮೇಲೆ 2019ರಿಂದ ಸರ್ಕಾರವನ್ನು ಬಲಪಡಿಸಲಾಗಿದೆ. ನಾವಿಂದು 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಸಿಕ್ಕಿದ ಬಳಿಕ ಜನಿಸಿದ ಮೊದಲ ಪ್ರಧಾನಿ ನಾನು. 100 ವರ್ಷಗಳ ಸ್ವಾತಂತ್ರ‍್ಯವನ್ನು ಆಚರಿಸುವ ಗುರಿಯತ್ತ ವೇಗವಾಗಿ ಹೆಜ್ಜೆ ಇಡುತ್ತಿದೆ ಭಾರತ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *