ICC ಮಾಸ್ಟರ್ ಪ್ಲ್ಯಾನ್‌ – ಹೊಸ ಮಾದರಿಯಲ್ಲಿ 2024ರ T20 ವಿಶ್ವಕಪ್

Public TV
2 Min Read
T20 Worldcup

ದುಬೈ: ಆಸ್ಟ್ರೇಲಿಯಾ (Australia) ಆತಿಥ್ಯದಲ್ಲಿ ನಡೆದ 2022ರ ಐಸಿಸಿ 20 ವಿಶ್ವಕಪ್ (T20 WorldCup) ಟೂರ್ನಿ ಭರ್ಜರಿ ಯಶಸ್ಸಿನೊಂದಿಗೆ ತೆರೆ ಕಂಡಿದ್ದು, ಇಂಗ್ಲೆಂಡ್ (England) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

T20 World Cup 2022 Winner England

ಈ ಬೆನ್ನಲ್ಲೇ ಇದೀಗ 2024ರ ಟಿ20 ವಿಶ್ವಕಪ್ (T20 Worldcup 2024) ಟೂರ್ನಿಯನ್ನ ಮತ್ತಷ್ಟು ವಿಶೇಷ ರೀತಿಯಲ್ಲಿ ನಡೆಸಲು ಐಸಿಸಿ ಭರ್ಜರಿ ತಯಾರಿ ನಡೆಸುತ್ತಿದೆ. 2024ರ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯು ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯಲಿದ್ದು, ಹೊಸ ಸ್ವರೂಪದಲ್ಲಿ ವಿಶ್ವಕಪ್ ಟೂರ್ನಿ ಆಯೋಜಿಸಲು ಮುಂದಾಗಿದೆ. ಅದಕ್ಕಾಗಿ ತಂಡಗಳ ಸಂಖ್ಯೆಯಲ್ಲೂ ಗಣನೀಯವಾಗಿ ಬದಲಾವಣೆ ತರಲಾಗಿದೆ. ಮುಂದಿನ ವಿಶ್ವಕಪ್‌ನಲ್ಲಿ ಭಾಗವಹಿಸುವ 20 ದೇಶಗಳು ತಲಾ 5 ತಂಡಗಳ ನಾಲ್ಕು ಗುಂಪುಗಳಾಗಿ ವಿಗಂಡಣೆಯಾಗಲಿದೆ. ಇದನ್ನೂ ಓದಿ: 

T20 World cup Table

2022ರ ಟಿ20 ವಿಶ್ವಕಪ್‌ನಲ್ಲಿ ಗ್ರೂಪ್-ಎ ಮತ್ತು ಬಿ ತಂಡದಲ್ಲಿ ನಾಲ್ಕು ತಂಡಗಳ 2 ಗುಂಪು ಹಾಗೂ ಸೂಪರ್-2 ನಲ್ಲಿ 6 ತಂಡಗಳ 2 ಗುಂಪುಗಳಾಗಿ ವಿಂಗಡಿಸಲಾಗಿತ್ತು. ಗ್ರೂಪ್-ಎ ಮತ್ತು ಬಿ.ನಲ್ಲಿ ಅರ್ಹತೆ ಪಡೆದ ತಂಡಗಳು ಸೂಪರ್-12 ಹಂತದಲ್ಲಿ ಪಾಲ್ಗೊಂಡಿದ್ದವು. 2024ರ ಟಿ20 (T20 WorldCup) ವಿಶ್ವಕಪ್‌ನಲ್ಲಿ ಈ ಕ್ರಮ ಬದಲಾಗಲಿದೆ. ಇದನ್ನೂ ಓದಿ: ಫೈನಲ್‍ನಲ್ಲಿ ಪಾಕ್‍ಗೆ ಸೋಲು – 12 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್

T20 WORLD CUP 1

ವಿಂಗಡನೆ ಹೇಗೆ?
2021 ಮತ್ತು 2022 ರ ಆವೃತ್ತಿಗಳಲ್ಲಿ ಮೊದಲ ಸುತ್ತನ್ನು ಸೂಪರ್ 12 ಎಂದು ಕರೆಯಲಾಗುತ್ತಿತ್ತು. ಆದರೆ ಮುಂದಿನ ಪಂದ್ಯಾವಳಿಯಲ್ಲಿ ನಾಲ್ಕು ಗುಂಪುಗಳಾಗಿ ವಿಂಗಡಿಸಿದ್ದು ಇದರಲ್ಲಿ 5 ತಂಡಗಳು ಇರಲಿವೆ. ಅಗ್ರ ಎರಡು ತಂಡಗಳು ಸೂಪರ್ ಎಂಟು ಹಂತಕ್ಕೆ ಬಡ್ತಿ ಹೊಂದುತ್ತವೆ. ಅಲ್ಲಿ ಅವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಎರಡು ಗುಂಪುಗಳ ಟಾಪ್ 2 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ.

England Vs Pakistan

ಆರಂಭದಲ್ಲಿ ಐಪಿಎಲ್ (IPL) ಮಾದರಿ ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ ಪಂದ್ಯಗಳನ್ನು ನಡೆಸುವ ಬಗ್ಗೆ ಐಸಿಸಿ ಚರ್ಚೆ ನಡೆಸಿತ್ತು. ಆದರೆ ಈ ಮಾದರಿಯನ್ನು ಕೊನೆಗೆ ಕೈಬಿಡಲಾಗಿದ್ದು ಈ ಹಿಂದಿನಂತೆ ಸೆಮಿಫೈನಲ್ ಮತ್ತು ಫೈನಲ್ ಮಾದರಿಯನ್ನೇ ಕಾಯ್ದುಕೊಂಡಿದೆ. 2024ರ ಆವೃತ್ತಿಯಲ್ಲಿ ಒಟ್ಟಾರೆ 55 ಪಂದ್ಯಗಳು ನಡೆಯಲಿವೆ. ಮೂರಲ್ಲಿ ಒಂದು ಭಾಗದಷ್ಟು ಪಂದ್ಯಗಳು ಅಮೆರಿಕದ ಆತಿಥ್ಯದಲ್ಲಿ ನಡೆಯಲಿವೆ. ಬಹುಪಾಲು ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ಜರುಗಲಿದೆ. 2030ರ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಸ್ವರೂಪದಲ್ಲಿ ಬಹುಪಾಲು ಬದಲಾವಣೆ ಆಗಲಿದೆ ಎಂದು ಐಸಿಸಿ (ICC) ಹೇಳಿದೆ.

England Vs Pakistan 5

ಈಗಾಗಲೇ ಐಸಿಸಿ ಖಾತ್ರಿ ಪಡಿಸಿರುವಂತೆ 2022ರ ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದ 2 ಗುಂಪುಗಳಲ್ಲಿ ಅಗ್ರ 4ರಲ್ಲಿ ಸ್ಥಾನ ಪಡೆದ 8 ತಂಡಗಳು ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಖಚಿತ ಪಡಿಸಿಕೊಂಡಿವೆ. ಇದರ ಜೊತೆಗೆ ಶ್ರೇಯಾಂಕ ಆಧಾರಿತವಾಗಿ ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ತಂಡಗಳು ಅರ್ಹತೆ ಪಡೆಯುವ ಸಾಧ್ಯತೆ ಇದೆ. ಇನ್ನು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ತಂಡಗಳು ಆತಿಥ್ಯ ವಹಿಸಿರುವ ಸಲುವಾಗಿ ನೇರ ಅರ್ಹತೆ ಪಡೆಯಲಿವೆ. ಆದ್ದರಿಂದ ಒಟ್ಟಾರೆ 12 ತಂಡಗಳ ಸ್ಥಾನ ಈಗಾಗಗಲೇ ಖಾತ್ರಿಯಾಗಿದೆ. ಈಗ ಟೂರ್ನಿಯಲ್ಲಿ ಖಾಲಿ ಇರುವ ಸ್ಥಾನಕ್ಕೆ 8 ತಂಡಗಳ ಆಯ್ಕೆ ಸಲುವಾಗಿ ಐಸಿಸಿ ಹೊಸ ಕ್ರಮ ತರಲು ಮುಂದಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *