ಪಾಕ್‌ ಮುಂದಿರುವ ಘೋರ ಸವಾಲು ಯಾವುದು? – ಎಷ್ಟು ರನ್‌ ಅಂತರದಲ್ಲಿ ಗೆದ್ದರೆ ಸೆಮಿಸ್‌ ತಲುಪಬಹುದು?

Public TV
2 Min Read
Pak 2

ಬೆಂಗಳೂರು: ಭಾರತದ ಆತಿಥ್ಯದಲ್ಲಿ ಆಯೋಜನೆಗೊಂಡಿರುವ ಏಕದಿನ ವಿಶ್ವಕಪ್‌ (World Cup 2023) ಟೂರ್ನಿಯು ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಭಾರತ (India), ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ (Australia) ತಂಡಗಳು ಸೆಮಿಫೈನಲ್‌ ಪ್ರವೇಶಿಸಿದ್ದು, ಇನ್ನೊಂದು ತಂಡಕ್ಕೆ ಅವಕಾಶವಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ (Sri Lanka) ವಿರುದ್ಧ ಆಡಿದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ (New Zealand) 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಪಾಕಿಸ್ತಾನ ತಂಡ ಎದುರಿಸಲು ಸಾಧ್ಯವಾಗದ ಸವಾಲನ್ನೇ ಮುಂದಿಟ್ಟಿದೆ. ಒಂದು ವೇಳೆ ಕಿವೀಸ್‌ ಹಿಂದಿಕ್ಕೆ ಪಾಕ್‌ ಸೆಮಿಸ್‌ ಪ್ರವೇಶಿಸಲೇಬೇಕಾದರೆ ಪಾಕ್‌ ತಂಡ ಊಹಿಸಲು ಸಾಧ್ಯವಾಗಷ್ಟು ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಬೇಕಿದೆ.

ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್‌ ಮಾಡಿ ಕನಿಷ್ಠ 300 ರನ್‌ ಗಳಿಸಿದರೆ, ಇಂಗ್ಲೆಂಡ್‌ (England) ತಂಡವನ್ನು 13 ರನ್‌ಗಳಿಗೆ ಕಟ್ಟಿಹಾಕಬೇಕು. 400 ರನ್‌ ಗಳಿಸಿದ್ರೆ 112 ರನ್‌ಗಳಿಗೆ, 450 ರನ್‌ ಗಳಿಸಿದ್ರೆ 162 ರನ್‌ಗಳಿಗೆ, 500 ರನ್‌ ಗಳಿಸಿದ್ರೆ 211 ರನ್‌ಗಳಿಗೆ ಹಾಲಿ ಚಾಂಪಿಯನ್ಸ್‌ಗಳನ್ನ ಕಟ್ಟಿಹಾಕಬೇಕಾಗುತ್ತದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: World Cup 2023: ಲಂಕಾ ವಿರುದ್ಧ ಕಿವೀಸ್‌ಗೆ 5 ವಿಕೆಟ್‌ಗಳ ಜಯ – ಪಾಕ್‌ ಮುಂದಿದೆ ಅಸಾಧ್ಯ ಸವಾಲು

ಒಂದು ವೇಳೆ ಇಂಗ್ಲೆಂಡ್‌ ತಂಡ ಮೊದಲು ಬ್ಯಾಟಿಂಗ್‌ ಮಾಡಿದ್ರೆ, ಆಂಗ್ಲರ ಗುರಿಯನ್ನು ಪಾಕಿಸ್ತಾನ ತಂಡ 3 ಓವರ್‌ಗಳ ಒಳಗೆ ಪೂರೈಸಬೇಕಾಗುತ್ತದೆ. ಇದು ಪಾಕ್‌ಗೆ ಅತ್ಯಂತ ಕಠಿಣ ಗುರಿಯಾಗಿದೆ. ಕೋಲ್ಕತ್ತಾದ ಈಡನ್‌ ಗಾರ್ಡನ್‌ ಮೊದಲು ಬ್ಯಾಟಿಂಗ್‌ ಮಾಡುವ ತಂಡಕ್ಕೆ ಅನುಕೂಲಕರ ಪಿಚ್‌ ಆಗಿದೆ. ಪಾಕಿಸ್ತಾನ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡರೆ 350 ರನ್‌ ಗಳಿಸುವ ಅವಕಾಶವೂ ಇದೆ. ಆದ್ರೆ ಇಂಗ್ಲೆಂಡ್‌ ತಂಡವನ್ನು ಎಷ್ಟು ರನ್‌ಗಳಿಗೆ ಕಟ್ಟಿಹಾಕುತ್ತದೆ ಎಂಬುದರ ಮೇಲೆ ಸಮಿಸ್‌ ಕನಸು ನಿರ್ಧಾರವಾಗುತ್ತದೆ. ಇದನ್ನೂ ಓದಿ: ಆಸ್ಟ್ರೇಲಿಯಾ ಮುಡಿಗೆ 7 ವಿಶ್ವಕಪ್ ಏರಿಸಿದ್ದ ನಾಯಕಿ ಮೆಗ್ ಲ್ಯಾನಿಂಗ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ

ಈಗಾಗಲೇ ಟೀಂ ಇಂಡಿಯಾ +2.456, ದಕ್ಷಿಣ ಆಫ್ರಿಕಾ +1.376, ಆಸ್ಟ್ರೇಲಿಯಾ +0.861 ರನ್‌ ರೇಟ್‌ನೊಂದಿಗೆ ಸೆಮಿಸ್‌ ಹಾದಿಯನ್ನು ಖಚಿತಪಡಿಸಿಕೊಂಡಿವೆ. ಆದ್ರೆ ನ್ಯೂಜಿಲೆಂಡ್‌ 9 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ಸಾಧಿಸಿ +0.743 ರನ್‌ರೇಟ್‌ನೊಂದಿಗೆ 4ನೇ ಸ್ಥಾನದಲ್ಲಿದ್ದರೆ, 8ರಲ್ಲಿ 4 ಪಂದ್ಯ ಗೆದ್ದಿರುವ ಪಾಕಿಸ್ತಾನ +0.036 ರನ್‌ರೇಟ್‌ನೊಂದಿಗೆ 5ನೇ ಸ್ಥಾನದಲ್ಲಿದೆ. ಪಾಕಿಸ್ತಾನ ತಂಡ ಸೆಮಿಸ್‌ಗೆ ಪ್ರವೇಶಿಸಲೇಬೇಕೆಂದರೆ ಅತ್ಯಧಿಕ ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಬೇಕಾಗುತ್ತದೆ. ಇಲ್ಲದಿದ್ದರೆ, ಸೋಲು/ಗೆಲುವಿನೊಂದಿಗೆ 2023ರ ವಿಶ್ವಕಪ್‌ ಟೂರ್ನಿಗೆ ವಿದಾಯ ಹೇಳಲಿದೆ. ಇದನ್ನೂ ಓದಿ: ಕ್ರಿಕೆಟಿಗ ಮೊಹಮ್ಮದ್ ಶಮಿ ಒಪ್ಪಿದರೆ ಮದುವೆಗೆ ರೆಡಿ: ನಟಿ ಪಾಯಲ್ ಘೋಷ್

Share This Article