ಅಹಮದಾಬಾದ್: ಸಿಕ್ಸರ್ ಸಿಡಿಸಿ ವಿಶ್ವ ದಾಖಲೆ ಬರೆದಿರುವ ರೋಹಿತ್ ಶರ್ಮಾ (Rohit Sharma) ಈ ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Cricket) ಬೌಲಿಂಗ್‌ನಲ್ಲೂ ದಾಖಲೆ ಬರೆದಿದ್ದಾರೆ.
ಹೌದು. ಬೌಲರ್‌ಗಳ ಸರಾಸರಿ ಬೌಲಿಂಗ್ ರ‍್ಯಾಂಕ್‌ನಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನ ಪಡೆದಿದ್ದಾರೆ. ರೋಹಿತ್ ಶರ್ಮಾ ಬೆಂಗಳೂರಿನ (Bengaluru) ಚಿನ್ನಸ್ವಾಮಿ ಮೈದಾನದಲ್ಲಿ ನೆದರ್‌ಲ್ಯಾಂರ್ಡ್ಸ್ ವಿರುದ್ಧ 1 ಓವರ್ ಎಸೆದು 7 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದಿದ್ದರು. ಇದನ್ನೂ ಓದಿ: ಇದೇ ಕೊನೆಯಲ್ಲ, ನಾವು ಕಪ್ ಗೆಲ್ಲೋವರೆಗೂ ಇದು ಮುಗಿಯಲ್ಲ – ಗಿಲ್ ಭಾವುಕ
Advertisement
Advertisement
ರೋಹಿತ್ ಶರ್ಮಾ ಸರಾಸರಿ 7.00 ಬೌಲ್ ಮಾಡಿದ ಪರಿಣಾಮ ಮೊದಲ ಸ್ಥಾನ ಪಡೆದರೆ ನಂತರದ ಎರಡು ಸ್ಥಾನಗಳನ್ನು ಶಮಿ (Mohammad Shami) ಮತ್ತು ಕೊಹ್ಲಿ (Virat Kohli) ಪಡೆದಿದ್ದಾರೆ. ಮೊಹಮ್ಮದ್ ಶಮಿ ಅವರ ಬೌಲಿಂಗ್ ಸರಾಸರಿ 10.70 ಇದ್ದು ಎರಡನೇ ಸ್ಥಾನ ಪಡೆದಿದ್ದರೆ ವಿರಾಟ್ ಕೊಹ್ಲಿ 15.00 ಇದ್ದು ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಅಪ್ಪಿಕೊಂಡು ಸಮಾಧಾನ ಹೇಳಿದ ಮೋದಿ – ಮತ್ತೆ ನಾವು ಪುಟಿದೇಳುತ್ತೇವೆ ಎಂದ ಶಮಿ
Advertisement
ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ವಿರಾಟ್ ಕೊಹ್ಲಿ 765 ರನ್ ಹೊಡೆದು ಮೊದಲ ಸ್ಥಾನ ಪಡೆದರೆ 597 ರನ್ ಹೊಡೆಯುವ ಮೂಲಕ ರೋಹಿತ್ ಶರ್ಮಾ ಎರಡನೇ ಸ್ಥಾನ ಪಡೆದಿದ್ದಾರೆ.
Advertisement