ಜಪಾನ್ ಮೂಲದ ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ‘ಕವಾಸಕಿ’ (Kawasaki) ದುಬಾರಿ ಬೆಲೆಯ ಬೈಕ್‌ಗಳನ್ನು ತಯಾರಿಸುವ ಮೂಲಕ ಜನಪ್ರಿಯವಾಗಿದೆ. ಇದೀಗ 2023ರಲ್ಲಿ ನವೀಕರಿಸಿದ ಹೊಸ ಬೈಕ್ (Bike) ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಧೂಳೆಬ್ಬಿಸಿದೆ. ಬಹುತೇಕರು ಬೈಕ್ ಲುಕ್ ನೋಡಿಯೇ ಫಿದಾ ಆಗಿದ್ದಾರೆ.
ಕವಾಸಕಿ ಇಂಡಿಯಾ ನವೀಕರಿಸಿದ ವರ್ಸಿಸ್ 1000 (Kawasaki Versys 1000) ಬೈಕ್ ಅನ್ನು ಬಿಡುಗಡೆ ಮಾಡಿದ್ದು, 12.19 ಲಕ್ಷ ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಈಗಾಗಲೇ ದೆಹಲಿಯಲ್ಲಿ ಶೋರೂಮ್‌ಗಳಿಗೆ ವಿತರಣೆ ಮಾಡಲಾಗಿದ್ದು, ಬುಕ್ಕಿಂಗ್ ಸಹ ಪ್ರಾರಂಭವಾಗಿದೆ. ಇದನ್ನೂ ಓದಿ: ಕಾರುಗಳಿಗೂ ಚಾಟ್‌ಜಿಪಿಟಿ ಅಳವಡಿಸಲು General Motors ಚಿಂತನೆ
Advertisement
Advertisement
ಕವಾಸಕಿ ಬೈಕ್ ವಿಶೇಷತೆ ಏನು?
ಎಂವೈ23 ಮಾದರಿಗಳ ಭಾಗವಾಗಿ ನವೀಕರಿಸಿರುವ ವರ್ಸಿಸ್ 1000 ಆಕರ್ಷಕ ಡ್ಯುಯಲ್ ಟೋನ್ ಅಂದ್ರೆ ಮೆಟಾಲಿಕ್ ಮ್ಯಾಟ್, ಗ್ರ್ಯಾಫೀನ್ ಸ್ಟೀಲ್ ಗ್ರೇ ಜೊತೆಗೆ ಬ್ಲ್ಯಾಕ್ ಬಣ್ಣದ ಆಯ್ಕೆ ಹೊಂದಿದೆ. ಎಲ್‌ಇಡಿಯ ಹೆಡ್‌ಲ್ಯಾಂಪ್ (ಹೆಡ್‌ಲೈಟ್) ಹಾಗೂ ಹೊಂದಾಣಿಕೆಯಾಗುವ ವಿಂಡ್ ಸ್ಕ್ರೀನ್ ಒಳಗೊಂಡಿದ್ದು, ಯುವಕರಿಗೆ ಸ್ಟೈಲಿಶ್ ಲುಕ್ ನೀಡುತ್ತದೆ.
Advertisement
ಅಷ್ಟೇ ಅಲ್ಲದೇ ಡಿಜಿಟಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಅನಲಾಗ್ ಟ್ಯಾಕೋಮೀಟರ್ ಹೊಂದಿದ್ದು, ಇದರೊಂದಿಗೆ ರೇಡಿಯಲ್ ಮೌಂಟ್ ಫ್ರಂಟ್ ಬ್ರೇಕ್ ಕ್ಯಾಲಿಪರ್ಸ್, ಟ್ರಾಕ್ಷನ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಎಬಿಸಿ (ಆ್ಯಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಇದೆ. ಜೊತೆಗೆ 17 ಇಂಚಿನ ಬಲಿಷ್ಠ ಚಕ್ರಗಳು ಹಾಗೂ ಫ್ರಂಟ್ 43ಎಂಎಂ ಅಪ್-ಸೈಡ್ ಫೋರ್ಕ್, ರೇರ್ ಮೊನೊ-ಶಾಕ್ ಸೆಟಪ್ ಸಹ ಹೊಂದಿದೆ. ಇದನ್ನೂ ಓದಿ: ಅತ್ಯಾಕರ್ಷಕ ಹೋಂಡಾ H’ness CB350, CB350RS ಬೈಕ್ ಭಾರತದಲ್ಲಿ ಬಿಡುಗಡೆ
Advertisement
ಇನ್ನೂ ಈ ಬೈಕ್‌ನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ 1043 ಸಿಸಿ ಲಿಕ್ವಿಡ್ ಕೂಲ್ಡ್ ಇನ್‌ಲೈನ್ ಫೋರ್ ಎಂಜಿನ್, 9,000 RPM (ರೆವೊಲ್ಯೂಷನ್ಸ್ ಪರ್ ಮಿನಿಟ್) ನಲ್ಲಿ 118.2 ಬಿಹೆಚ್‌ಪಿ ಶಕ್ತಿ ಸಾಮರ್ಥ್ಯದ್ದಾಗಿದೆ. 7,500 ಆರ್‌ಪಿಎಂನಲ್ಲಿ 102 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಇದೆ. 6 ಸ್ವೀಡ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಜೊತೆಗೆ ಸ್ಲಿಪ್ಪರ್ ಕ್ಲಚ್ ಸಿಸ್ಟಮ್ ಸಹ ಈ ಬೈಕ್ ಹೊಂದಿದೆ.
ಒಟ್ಟಿನಲ್ಲಿ ಗ್ಲಾಮರಸ್ ಲುಕ್‌ನಲ್ಲಿ ಮಾರುಕಟ್ಟೆಗೆ ಬಂದಿರುವ ಈ ಬೈಕ್ ಸ್ಟೈಲಿಶ್ ಆಗಿರಲು ಬಯಸುವವರಿಗೆ ಹೆಚ್ಚಿ ಪ್ರಿಯವಾಗಲಿದೆ. ಆದರೆ ಇದು ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತದೆ ಎನ್ನೋದನ್ನ ಕಾದು ನೋಡಬೇಕಿದೆ.