ಬೆಂಗಳೂರು: ದೇಶದಲ್ಲಿ ಕಾಂಗ್ರೆಸ್ (Congress) ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ರಾಹುಲ್‌ಗಾಂಧಿ (Rahul Gandhi) ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ (Bharath Jodo Yatra) ನಡೆಯುತ್ತಿದೆ.
#BharatJodoYatra resumes from Chikkanayakahalli.
People from all walks of life are coming together to be a part of this historic movement. pic.twitter.com/bvSazhqvJ0
— Nitin Agarwal (@nitinagarwalINC) October 10, 2022
Advertisement
ರಾಜ್ಯದಲ್ಲೂ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 14ರ ವರೆಗೆ ರಾಹುಲ್ ಪಾದಯಾತ್ರೆ ನಡೆಯುತ್ತಿದೆ. ಫುಲ್‌ಜೋಶ್‌ನಲ್ಲಿರೋ ರಾಹುಲ್‌ಗಾಂಧಿ ಧಾರಾಕಾರ ಮಳೆಯಲ್ಲೂ ಉತ್ಸಾಹ ಕಳೆದುಕೊಳ್ಳದೇ ಮುನ್ನುಗ್ಗುತ್ತಿದ್ದಾರೆ. ರಾಹುಲ್ ಹೋದ ಕಡೆಯಲೆಲ್ಲಾ ಬಿಜೆಪಿ (BJP), ಜೆಡಿಎಸ್ (JDS) ಪಕ್ಷದ ಶಕ್ತಿ ಮಾಯವಾಗುತ್ತಿದೆ ಅನ್ನೋದು ಕಾಂಗ್ರೆಸ್ ಮಾತಾದರೆ, ಜೋಡೋ ಯಾತ್ರೆಯಿಂದ ಬಿಜೆಪಿಗೆ ಹೆಚ್ಚಿನ ಲಾಭವಾಗಿದೆ ಅನ್ನೋದು ಬಿಜೆಪಿ ನಾಯಕರ ವಾದ. ಈ ಬೆನ್ನಲ್ಲೇ ಕಾಂಗ್ರೆಸ್ ಮುಂದೆ ಪಾದಯಾತ್ರೆ ಕೈಗೊಂಡು ಹಿಂದೆ ಚುನಾವಣಾ ಸರ್ವೇಯನ್ನೂ (Election Servey) ನಡೆಸುತ್ತಿದೆ ಎನ್ನುವ ಬಗ್ಗೆ ಬಿಜೆಪಿ ವಿಶ್ಲೇಷಣೆ ಮಾಡಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ನಡುವೆ ಪೋಸ್ಟರ್ ವಾರ್ – ರಾರಾಜಿಸುತ್ತಿದೆ ರಾಜು, ಕುಟ್ಟಪ್ಪನ ಸ್ವಾಗತ ಪೋಸ್ಟರ್
Advertisement
Advertisement
ಈಗಾಗಲೇ ಚಾಮರಾಜನಗರ, ಮೈಸೂರು (Mysuru), ಮಂಡ್ಯ (Mandya) ಜಿಲ್ಲೆಯಲ್ಲಿ ಸರ್ವೇ ಕಾರ್ಯ ನಡೆಯುತ್ತಿದ್ದು, 2ನೇ ಹಂತದಲ್ಲಿ ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳನ್ನು ಟಾರ್ಗೆಟ್ ಮಾಡಲಾಗಿದೆ. ಇದನ್ನೂ ಓದಿ: ರಾಹುಲ್‌ಗಾಂಧಿ ಪೋಸ್ಟರ್‌ಗೆ `ಚಪ್ಪಲಿ ಎಸೆಯಿರಿ’ ಆಂದೋಲನಕ್ಕೆ ಕರೆ ಕೊಟ್ಟ ಬಿಜೆಪಿ ನಾಯಕ
Advertisement
ಸರ್ವೆ ಮುಖ್ಯಾಂಶಗಳೇನು?
5 ಪ್ರಮುಖ ಅಂಶಗಳನ್ನ ಮುಂದಿಟ್ಟುಕೊಂಡು ಸರ್ವೆ ನಡೆಸುತ್ತಿರುವ ಕಾಂಗ್ರೆಸ್ (Congress), ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ಗೆ ಏನು ಲಾಭ? ಈ ಹಿಂದಿನ ಪರಿಸ್ಥಿತಿ, ಭಾರತ್ ಜೋಡೋ ಬಳಿಕ ಪರಿಸ್ಥಿತಿ ಹೇಗಿದೆ? ಸಿದ್ದು-ಡಿಕೆಶಿ(Siddaramaiah, Dk Shivakumar) ನಡುವಿನ ಒಳ ರಾಜಕೀಯ ವ್ಯತ್ಯಾಸಗಳು, ಪರಿಣಾಮಗಳು, ಭಾರತ್ ಜೋಡೋ ಹಾದು ಹೋಗುವ ಮಾರ್ಗದಲ್ಲಿ ಬಿಜೆಪಿಗೆ ನಷ್ಟ ಏನಾಗಬಹುದು? ಜೆಡಿಎಸ್ ಭದ್ರಕೋಟೆಯಲ್ಲಿ ಯಾತ್ರೆಯಿಂದ ಕಾಂಗ್ರೆಸ್‌ಗೆ ಶಕ್ತಿ ಸಿಗುತ್ತಿದೆಯಾ? ಇಲ್ಲವಾ? ಎನ್ನುವ ಬಗ್ಗೆ ಎಲ್ಲ ಆಯಾಮಗಳಲ್ಲೂ ಸರ್ವೆ ಕಾರ್ಯ ನಡೆಸಲಾಗುತ್ತಿದೆ.
Have something to say?
We’re all ears. #BharatJodoYatra pic.twitter.com/1U6MxckeaZ
— Bharat Jodo (@bharatjodo) October 9, 2022
ಇದಲ್ಲದೇ ಸಿದ್ದು-ಡಿಕೆಶಿ ನಡುವಿನ ಗೊಂದಲಗಳು ಯಾರಿಗೆ ಲಾಭ? ಯಾರಿಗೆ ನಷ್ಟ? ಜೆಡಿಎಸ್ ವೀಕ್ ಆಗುತ್ತೋ? ಸ್ಟ್ರಾಂಗ್ ಆಗುತ್ತೋ? ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ಹೆಚ್ಚಿದೆಯಾ? ಕುಗ್ಗುತ್ತಿದೆಯಾ ಎನ್ನುವ ಬಗ್ಗೆಯೂ ಸಹ ಸಮೀಕ್ಷೆ ನಡೆಸುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.