Bengaluru CityDistrictsKarnatakaLatestLeading NewsMain Post

SSLC ಪ್ರಶ್ನೆ ಪತ್ರಿಕೆ ಸೋರಿಕೆ – 8 ಮಂದಿ ಅರೆಸ್ಟ್‌

ರಾಮನಗರ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ವಿಜ್ಞಾನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಮಾಗಡಿ ಡಿಡಿಪಿಐ ನೀಡಿದ ದೂರಿನ ಆಧಾರದ ಮೇಲೆ ಖಾಸಗಿ ಶಾಲೆಯೊಂದರ ಪ್ರಾಂಶುಪಾಲ ಶ್ರೀನಿವಾಸ್, ಐವರು ಶಿಕ್ಷಕರು, ಕ್ಲರ್ಕ್ ರಂಗೇಗೌಡ, ಓರ್ವ ಸ್ಥಳೀಯ ಪತ್ರಕರ್ತ ಸೇರಿದಂತೆ ಒಟ್ಟು 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್ ಸಿಗುತ್ತಿಲ್ಲ, ಎಟಿಎಮ್‍ನಲ್ಲಿ ಹಣವಿಲ್ಲ – ಪಾಕ್ ದುಸ್ಥಿತಿ ಬಿಚ್ಚಿಟ್ಟ ಹಫೀಜ್

SSLC

ಪರೀಕ್ಷಾ ಕೇಂದ್ರವಾಗಿದ್ದ ಮಾಗಡಿಯ ರಂಗನಾಥ ಶಾಲೆಯ ಶಿಕ್ಷಕ ಕೃಷ್ಣಮೂರ್ತಿ ವಿಜ್ಞಾನ ಪ್ರಶ್ನೆ ಪತ್ರಿಕೆಯನ್ನು ಕ್ಲರ್ಕ್ ರಂಗೇಗೌಡನಿಗೆ ರವಾನಿಸಿದ್ದ. ಇದನ್ನು ಕ್ಲರ್ಕ್ ರಂಗೇಗೌಡ, ಪರೀಕ್ಷೆ ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ಶಿಕ್ಷಕರ ವಾಟ್ಸಪ್ ಗ್ರೂಪ್‍ನಲ್ಲಿ ಶೇರ್ ಮಾಡಿದ್ದರು. ಅಲ್ಲದೇ, ಪ್ರಿನ್ಸಿಪಾಲ್ ಶ್ರೀನಿವಾಸ್ ಅವರ ಶಾಲೆಯಲ್ಲಿ ಉತ್ತಮ ಫಲಿತಾಂಶ ಬಂದಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published.

Back to top button