ಬೀದರ್ : ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಕಚೇರಿಯಿಂದ ಪಾಸ್ ಪಡೆದಿದ್ದ ರೀತಿಯಲ್ಲಿಯೇ 22 ವರ್ಷದ ಹಿಂದೆ ಅಂದು ಬೀದರ್ ಬಿಜೆಪಿ ಸಂಸದ (Bidar BJP MP) ರಾಮಚಂದ್ರ ವೀರಪ್ಪ (Ramachandrappa Veerappa) ಕಚೇರಿಯಿಂದ ಉಗ್ರರು ಪಾಸ್ ಪಡೆದು ಸಂಸತ್ ಮೇಲೆ ದಾಳಿ (Parliament Attack) ಮಾಡಿದ್ದರು.
ರಾಮಚಂದ್ರ ವೀರಪ್ಪ ಅವರ ಲೆಟರ್ ಹೆಡ್ ಮತ್ತು ನಕಲಿ ಸಹಿ ಬಳಸಿದ್ದ ಉಗ್ರರು ದೆಹಲಿಯಲ್ಲಿದ್ದ ಸಂಸದರ ಸಹಾಯಕರಿಗೆ ಪತ್ರ ತೋರಿಸಿದ್ದರು. ಈ ಪತ್ರದ ಆಧಾರದ ಮೇಲೆ ರಾಮಚಂದ್ರಪ್ಪ ವೀರಪ್ಪ ಅವರ ಕಚೇರಿಯಿಂದ ಸಂಸತ್ ಪ್ರವೇಶಕ್ಕೆ ಪಾಸ್ ನೀಡಲಾಗಿತ್ತು. ಈ ಕಾರ್ ಪಾಸ್ ಮೂಲಕ ಉಗ್ರರು ಸಂಸತ್ ಆವರಣ ಪ್ರವೇಶಿಸಿದ್ದರು. ಇದನ್ನೂ ಓದಿ: ಅಶಿಸ್ತಿನ ವರ್ತನೆ – ಲೋಕಸಭೆಯ 14 ಸಂಸದರು ಸಸ್ಪೆಂಡ್
Advertisement
Advertisement
2001ರಲ್ಲಿ ಏನಾಯ್ತು?
ಡಿಸೆಂಬರ್ 13ರ ಬೆಳಗ್ಗೆ ಐವರು ಭಯೋತ್ಪಾದಕರು ಗೃಹ ಸಚಿವಾಲಯದ ಸ್ಟಿಕ್ಕರ್ ಅಂಟಿಸಿರುವ ಕೆಂಪು ದೀಪ ಇರುವ ಅಂಬಾಸಿಡರ್ ಕಾರಿನಲ್ಲಿ ಆಗಮಿಸಿದ್ದರು. ಬೆಳಗ್ಗೆ 11:40ಕ್ಕೆ ಸಂಸತ್ ಭವನದ ಸಂಕೀರ್ಣವನ್ನು ಪ್ರವೇಶಿಸಿದರು.
Advertisement
ಉಗ್ರರಿದ್ದ ಕಾರು ಸಂಸತ್ ಭವನದ ಗೇಟ್ ಸಂಖ್ಯೆ 12ರ ಕಡೆಗೆ ಸಾಗುತ್ತಿದ್ದಂತೆ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಾರ್ಡ್ ಸಿಬ್ಬಂದಿಗೆ ಅನುಮಾನ ಬಂದಿತ್ತು. ವಾಹನವನ್ನು ಹಿಂದಕ್ಕೆ ತಿರುಗಿಸಲು ಸಿಬ್ಬಂದಿ ಸೂಚಿಸಿದರು. ಈ ವೇಳೆ ಕಾರು ಕ್ರಿಶನ್ ಕಾಂತ್ ಅವರ ವಾಹನಕ್ಕೆ ಅಪ್ಪಳಿಸಿತ್ತು. ಹೊರಬಂದ ಉಗ್ರರು ಗುಂಡಿನ ದಾಳಿ ಆರಂಭಿಸಿದರು.
Advertisement
ದಾಳಿ ನಡೆಯುತ್ತಿದ್ದಂತೆ ಸೈರನ್ ಮೊಳಗಿಸಲಾಯಿತು. ಸುಮಾರು 30 ನಿಮಿಷಗಳ ಕಾಲ ನಡೆದ ಗುಂಡಿನ ಚಕಮಕಿ ಎಂಟು ಭದ್ರತಾ ಸಿಬ್ಬಂದಿ ಹುತಾತ್ಮರಾದರು. ದಾಳಿಗೈದ ಐವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ದಾಳಿಯ ವೇಳೆ ಸಂಸತ್‌ನಲ್ಲಿ ನೂರಕ್ಕೂ ಹೆಚ್ಚು ಸಂಸದರು ಇದ್ದರು.