– ಈ ವರ್ಷಮೈನಸ್ 7.7% ಜಿಡಿಪಿ
ನವದೆಹಲಿ: 2021-22ರ ಆರ್ಥಿಕ ವರ್ಷದಲ್ಲಿ ʼವಿʼ ಶೇಪ್ ಪ್ರಗತಿ ಸಾಧಿಸಲಿದ್ದು, ಅಂದಾಜು 11%ರಷ್ಟು ಜಿಡಿಪಿ ಬೆಳವಣಿಗೆ ದರ ನಮೂದಾಗಲಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.
ಪ್ರಸಕ್ತ ಆರ್ಥಿಕ ವರ್ಷದ ಬೆಳವಣಿಗೆ ದರ ಮೈನಸ್ 7.7%ಕ್ಕೆ ಇಳಿಕೆಯಾಗಲಿದೆ. ಲಾಕ್‍ಡೌನ್‍ನಿಂದ ಲಕ್ಷ ಲಕ್ಷ ಪ್ರಜೆಗಳ ಪ್ರಾಣ ಉಳಿದಿದೆ. ಬಿಗಿಯಾದ ಲಾಕ್‌ಡೌನ್‌ನಿಂದಾಗಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿಸಿದೆ.
Advertisement
Summary of #EconomicSurvey2021
V-Shaped economic recovery due to mega vaccination drive, Robust recovery in the services sector and robust growth in consumption and investment 1/2
Details: https://t.co/2YykyUHfPZ pic.twitter.com/kINNjVBuim
— PIB India (@PIB_India) January 29, 2021
Advertisement
ಕೋವಿಡ್ ಸಂದರ್ಭದಲ್ಲಿ ಕೃಷಿ ವಲಯ ಮಾತ್ರ ಬೆಳವಣಿಗೆ ಸಾಧಿಸಿದೆ. ನೂತನ ಕೃಷಿ ಕಾಯ್ದೆಗಳಿಂದ ರೈತರಿಗೆ ನೆರವಾಗಲಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.
Advertisement
Indian agriculture contributes to green shoots of the Indian #Economy with a Growth Rate of 3.4 % despite #COVID19 Pandemic
Recent agricultural reforms a remedy, not a malady says #EconomicSurvey
Details: https://t.co/K2uJGl5kGu pic.twitter.com/tH2jUBE4ZI
— PIB India (@PIB_India) January 29, 2021
Advertisement
ಸಂಸತ್‍ನ ಬಜೆಟ್ ಅಧಿವೇಶನ ಆರಂಭಕ್ಕೆ ಮುನ್ನ ಮಾತನಾಡಿದ ಪ್ರಧಾನಿ ಮೋದಿ, ದೇಶದ ಚರಿತ್ರೆಯಲ್ಲೇ ಮೊದಲ ಬಾರಿಗೆ ಕಳೆದ ವರ್ಷ ಆರ್ಥಿಕ ಪ್ಯಾಕೇಜ್‍ಗಳ ರೂಪದಲ್ಲಿ ವಿತ್ತ ಸಚಿವರು ನಾಲ್ಕೈದು ಮಿನಿ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಮಂಡಿಸುವ ಬಜೆಟ್ ಆ ಮಿನಿ ಬಜೆಟ್‍ಗಳ ಒಂದು ಭಾಗವಾಗಿ ಇರಲಿದೆ ಎಂದು ಹೇಳಿದರು.
Monthly Gross Revenue #GST collections Cross 1 Lakh Crore mark for 3 Months in a row
▪️ Capital Expenditure for April to December 2020 stands at 3.14 Lakh Crore which is 24% higher than corresponding period of previous year#EconomicSurvey
Read more: https://t.co/WA2UbWl1GN pic.twitter.com/54OR5YaCHE
— PIB India (@PIB_India) January 29, 2021
ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡಿದ ನಂತರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಆರ್ಥಿಕ ಸಮೀಕ್ಷೆ ಮಂಡಿಸಿದರು. ಆರ್ಥಿಕ ಸಮೀಕ್ಷೆ ರೂಪಿಸಿದ ಮುಖ್ಯ ಆರ್ಥಿಕ ಸಲಹೆಗಾರ ಕೆವಿ ಸುಬ್ರಹ್ಮಣ್ಯಂ ಮಾಧ್ಯಮಗಳ ಜೊತೆ ಮಾತನಾಡಿ. ಕೋವಿಡ್ ಕಾರಣದಿಂದ ಹದಗೆಟ್ಟ ದೇಶದ ಆರ್ಥಿಕತೆ ಮತ್ತೆ ಚೇತರಿಸಿಕೊಳ್ಳಲಿದೆ. ದೇಶದ ಜಿಡಿಪಿ ಮತ್ತೆ ಎರಡಂಕಿಗೆ ಜಿಗಿಯಲಿದೆ ಎಂದು ಭವಿಷ್ಯ ನುಡಿದರು.
There has been a pan India improvement in access to bare necessities, in 2018 vs situation in 2012
For both rural and urban India
– #EconomicSurvey finds, based on data on 26 bare necessities #SavingLivesAndLivelihoods pic.twitter.com/gVl1GQny8R
— PIB India (@PIB_India) January 29, 2021
ಜಿಡಿಪಿ ದಿಢೀರ್ ಕುಸಿದು ದಿಢೀರ್ ಮೇಲಕ್ಕೆ ಏರುವುದನ್ನು ವಿ ಶೇಪ್ ಪ್ರಗತಿ ಎಂದು ಕರೆಯಲಾಗುತ್ತದೆ. ಬೆಳವಣಿಗೆಯ ಗ್ರಾಫ್ ಲೆಕ್ಕಾಚಾರಗಳು ನೋಡುವಾಗ ಇಂಗ್ಲೀಷಿನ ‘V’ ಅಕ್ಷರದಂತೆ ಕಾಣುತ್ತದೆ. ಈ ಕಾರಣಕ್ಕೆ ಈ ಪ್ರಗತಿಯನ್ನು ಅರ್ಥ ಶಾಸ್ತ್ರದಲ್ಲಿ ವಿ ಶೇಪ್‌ಗೆ ಹೋಲಿಸಲಾಗುತ್ತದೆ.
Rich can access private options for public goods, poor rarely have such access
Against this backdrop, along with improvement in overall access to bare necessities, there has been an improvement in equity of access as well
– #EconomicSurvey #SavingLivesAndLivelihoods pic.twitter.com/JcbctdcORE
— PIB India (@PIB_India) January 29, 2021