2021ರ ಬಜೆಟ್ ನಂತರ ಸಿಗಲಿದೆ ರೈಲಿನಲ್ಲಿಯೂ ಆಹಾರ ಸೇವೆ

Public TV
1 Min Read
railway

ನವದೆಹಲಿ: ಮುಂಬರುವ 2021-2022 ಕೇಂದ್ರ ಬಜೆಟ್‍ನಲ್ಲಿ ರೈಲ್ವೆ ಸಚಿವಾಲಯವು ಐಆರ್ ಸಿಟಿಸಿ ಮೂಲಕ ಆದಾಯವನ್ನು ಮತ್ತಷ್ಟು ಕೆಲವು ವಿಚಾರಗಳನ್ನು ಪ್ರಸ್ತಾಪಿಸಬಹುದು. ಈ ಬಾರಿ ಭಾರತೀಯ ರೈಲ್ವೆಯು ಪ್ರವಾಸೋದ್ಯಮ ಮತ್ತು ಅಡುಗೆ ವಿಭಾಗವನ್ನು ಯೋಜಿಸುವುದರ ಮೂಲಕ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಮತ್ತೊಂದು ಹೆಜ್ಜೆ ಮುಂದಿಡಲು ಸಜ್ಜಾಗಿದೆ.

vlcsnap 2020 04 07 07h54m51s930

ನೂತನ ಯೋಜನೆಯು ವಿಮಾನಯಾನದಲ್ಲಿ ದೊರೆಯುವ ಆಹಾರ ಸೇವೆಯ ರೀತಿ ರೈಲ್ವೆಯಲ್ಲಿಯೂ ಪ್ರಯಾಣಿಕರಿಗೆ ಸೇವಿಸಲು ಆಹಾರ ಸೇವೆ ಕಲ್ಪಸಿಕೊಡಲಾಗಿದೆ. ಈ ಯೋಜನೆಯನ್ನು ಕಾರ್ಯಗತಗೊಳಿಸಲು ಐಆರ್ ಸಿಟಿಸಿಯು, ಹಲ್ದಿರಾಮ್, ಐಟಿಸಿ, ಎಂಟಿಆರ್, ವಾಘ್ ಬಕ್ರಿ ಮತ್ತು ದೊಡ್ಡ ದೊಡ್ಡ ಆಹಾರ ಬ್ರಾಂಡ್ ಗಳ ಜೊತೆ ಕೈ ಜೋಡಿಸಲಿದೆ. ಒಮ್ಮೆ ಈ ಯೋಜನೆ ಕಾರ್ಯಗತಕ್ಕೆ ಬಂದರೆ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಹಲ್ದಿರಾಮ್, ಐಟಿಸಿ, ಎಂಟಿಆರ್, ವಾಘ್ ಬಕ್ರಿ ದೊಡ್ಡ ಆಹಾರ ಬ್ರಾಂಡ್ ಗಳನ್ನು ಸವಿದು ಆನಂದಿಸಬಹುದು.

Railway Station

ಈಗಾಗಲೇ ಕೋವಿಡ್-19 ನಿಂದ ಆಗಿರುವ ನಷ್ಟವನ್ನು ಸರಿದೂಗಿಸಲು ಭಾರತೀಯ ರೈಲ್ವೆ ಪ್ರವಾಸೋದ್ಯಮ ಮತ್ತು ಅಡುಗೆ ವ್ಯಾಪಾರವನ್ನು ಮಾಡುವ ಈ ಹೊಸ ಯೋಜನೆಯನ್ನು ಜಾರಿ ತರಲು ಮುಂದಾಗುತ್ತಿದೆ. ವಿಮಾನಯಾನದಲ್ಲಿ ಈಗಾಗಲೇ ಆಹಾರ ಸೇವೆ ಯೋಜನೆ ಯಶಸ್ವಿಯಾದ ಹಿನ್ನೆಲೆ ರೈಲ್ವೆಯಲ್ಲಿಯೂ ಈ ಮಾರ್ಗವನ್ನು ಅನುಸರಿಸಲು ಸರ್ಕಾರ ಜಾರಿಗೆ ತರಲಿದೆ. ಈ ಯೋಜನೆಯನ್ನು ಶೀಘ್ರದಲ್ಲಿ ರೈಲ್ವೆ ಸಚಿವರು ಜಾರಿಗೆ ತರಲಿದ್ದಾರೆ ಎಂದು ವರದಿಯಾಗಿದೆ.

railway station 1

ಈ ಯೋಜನೆಯನ್ನು ಅನುಷ್ಠಾನಗೊಳಿಸಿದ ಬಳಿಕ ಒಪ್ಪಂದದ ಮೂಲಕ ಪ್ಯಾಂಟ್ರಿ ವ್ಯವಸ್ಥೆಯನ್ನು ಹೊಂದಿರುವ ರೈಲುಗಳಲ್ಲಿ ಪ್ರಯಾಣಿಕರಿಗೆ ಸುರಕ್ಷಿತ ಆಹಾರ ಸೇವೆ ಒದಗಿಸುವ ಸಂಪೂರ್ಣ ಜವಾಬ್ದಾರಿಯನ್ನು ಐಆರ್ ಸಿಟಿಸಿ ವಹಿಸಿದೆ.

Share This Article