– 5ಜಿಗೆ ಸ್ವದೇಶಿ ತಂತ್ರಜ್ಞಾನ ಬಳಕೆ
– ಕೈಗೆಟುಕುವ ದರದಲ್ಲಿ ಸಿಗಬೇಕು
ನವದೆಹಲಿ: ಭಾರತದಲ್ಲಿ 5ಜಿ ಸೇವೆ ಯಾವಾಗ ಬರುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. 2020ರ ದ್ವಿತೀಯಾರ್ಧದ ವೇಳೆಗೆ ಜಿಯೋ ದೇಶದಲ್ಲಿ 5ಜಿ ಮೊಬೈಲ್ ತಂತ್ರಜ್ಞಾನವನ್ನು ಪರಿಚಯಿಸಲಿದೆ ಎಂದು ರಿಲಯನ್ಸ್ ಇಂಡಸ್ಟೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪ್ರಕಟಿಸಿದ್ದಾರೆ.
ಇಂಡಿಯನ್ ಮೊಬೈಲ್ ಕಾಂಗ್ರೆಸ್(ಐಎಂಸಿ) ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಂಬಾನಿ, ಭಾರತವು ಇಂದು ಡಿಜಿಟಲ್ ಸಂಪರ್ಕ ಹೊಂದಿದ ಅತ್ಯುತ್ತಮ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ಮುನ್ನಡೆಯನ್ನು ಉಳಿಸಿಕೊಳ್ಳಬೇಕಾದರೆ 5ಜಿ ಜಾರಿಗೆ ಅಗತ್ಯವಾದ ನೀತಿಗಳನ್ನು ವೇಗವಾಗಿ ಜಾರಿಗೊಳಿಸಬೇಕು ಮತ್ತು ಕೈಗೆಟುಕುವ ದರದಲ್ಲಿ ಎಲ್ಲೆಡೆ ಸಿಗಬೇಕು. 2021 ರ ದ್ವಿತೀಯಾರ್ಧದಲ್ಲಿ ಜಿಯೋ ಭಾರತದಲ್ಲಿ 5ಜಿ ಕ್ರಾಂತಿಯ ಹರಿಕಾರನಾಗಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದರು.
Advertisement
Advertisement
ಆತ್ಮನಿರ್ಭರ ಭಾರತದ ದೂರದೃಷ್ಟಿತ್ವದಲ್ಲಿ ಜಿಯೋ 5ಜಿ ಸೇವೆಗೆ ಪೂರಕವಾದ ಅಗತ್ಯವಾದ ಹಾರ್ಡ್‌ವೇರ್, ನೆಟ್‌ವರ್ಕ್ ಮತ್ತು ಇತರೆ ಎಲ್ಲಾ ತಂತ್ರಜ್ಞಾನ ಉಪಕರಣಗಳು ಕೂಡಾ ದೇಶೀಯವಾಗಿ ತಯಾರಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೆಲವರ ಹಿತಾಸಕ್ತಿಗೆ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ವಿಳಂಬ – ಕೇಂದ್ರಕ್ಕೆ ಜಿಯೋ ಪತ್ರ
Advertisement
ಜಿಯೋ ಈಗಾಗಲೇ 5ಜಿ ಜಾರಿ ಸಂಬಂಧ ವಿವಿಧ ಕಂಪನಿಗಳ ಜೊತೆ ಕೆಲಸ ಮಾಡುತ್ತಿದೆ. 5ಜಿ ಅಲ್ಲದೇ ಗೂಗಲ್ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ನೀಡುವ ಸಂಬಂಧ ಗೂಗಲ್ ಜೊತೆ ಕೆಲಸ ಮಾಡುತ್ತಿದೆ. ಮುಂದಿನ ವರ್ಷ ಈ ಫೋನ್ ಬಿಡುಗಡೆಯಾಗುವ ಸಾಧ್ಯತೆಯಿದ್ದು 4 ಸಾವಿರ ರೂ. ದರ ನಿಗದಿಯಾಗುವ ಸಾಧ್ಯತೆಯಿದೆ.
Advertisement
ಕೋವಿಡ್ 19 ಸಮಯದಲ್ಲಿ ಜಿಯೋದಲ್ಲಿ ಗೂಗಲ್, ಫೇಸ್‌ಬುಕ್, ಇಂಟೆಲ್, ಕ್ವಾಲ್‌ಕಾಮ್, ಸಿಲ್ವರ್ ಲೇಕ್ ಸೇರಿದಂತೆ ಹಲವು ಕಂಪನಿಗಳು ಹಣವನ್ನು ಹೂಡಿವೆ. ತನ್ನ ಶೇ.32.97 ಪಾಲನ್ನು ಮಾರಾಟ ಮಾಡುವ ಮೂಲಕ ಜಿಯೋ 1,52,056 ಕೋಟಿ ರೂ. ಬಂಡವಾಳವನ್ನು ಸಂಗ್ರಹಿಸಿದೆ.
5ಜಿ ಪರೀಕ್ಷೆಯಲ್ಲಿ 1 ಜಿಬಿಪಿಎಸ್(ಗಿಗಾ ಬೈಟ್ ಪರ್ ಸೆಕೆಂಡ್) ಮೈಲಿಗಲ್ಲನ್ನು ದಾಟಿರುವುದಾಗಿಯೂ ಕ್ವಾಲ್‌ಕಾಮ್ ಟೆಕ್ನಾಲಜೀಸ್ ಮತ್ತು ಜಿಯೋ ಅಕ್ಟೋಬರ್‌ನಲ್ಲಿ ಪ್ರಕಟಿಸಿತ್ತು.
2020ರ ವೇಳೆಗೆ ದೇಶದಲ್ಲಿ 5ಜಿ ತಂತ್ರಜ್ಞಾನ ಸೇವೆ ಆರಂಭಗೊಳ್ಳಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2017ರಲ್ಲಿ ಸಮಿತಿ ರಚಿಸಿತ್ತು. 3ಜಿ ಮತ್ತು 4ಜಿ ಮಾನದಂಡವನ್ನು ನಿರ್ಧರಿಸುವ ಸಂದರ್ಭದಲ್ಲಿ ನಾವು ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದೇವು. ಆದರೆ ವಿಶ್ವದಲ್ಲಿ 5ಜಿ ಮಾನದಂಡ ಸಿದ್ಧತೆ ಮಾಡುವ ಸಂದರ್ಭದಲ್ಲಿ ಭಾರತವೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತದೆ. ಯಾವುದೇ ಕಾರಣಕ್ಕೂ ಈ ಅವಕಾಶವನ್ನು ಕೈತಪ್ಪಲು ಬಿಡುವುದಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿದ್ದರು. ಇದನ್ನೂ ಓದಿ: 5ಜಿ ನೆಟ್ ಸ್ಪೀಡ್ ಎಷ್ಟು ಗೊತ್ತಾ?
ಕೇಂದ್ರ ಸರ್ಕಾರ 5ಜಿ ಸೇವೆ ಆರಂಭಿಸಲು ಉತ್ಸುಕವಾಗಿದ್ದರೂ ಭಾರತೀಯ ಟೆಲಿಕಾಂ ಕಂಪೆನಿಗಳು ಹಣಕಾಸು ಸಮಸ್ಯೆ ಎದುರಿಸುತ್ತಿರುವ ಕಾರಣ ಸರ್ಕಾರ ಈ ವರ್ಷದ ಡೆಡ್‌ಲೈನ್ ಮಿಸ್ ಆಗಿದೆ.