ಎಲ್ಲರ ಜೀವನದಲ್ಲಿ ಸಂಕಷ್ಟ ತಂದ 2020ಕ್ಕೆ ವಿದಾಯ ಹೇಳುವ ಕಾಲ ಸನೀಹ ಬಂದಿದೆ. ಕೊರೊನಾ ಹಿನ್ನೆಲೆ ಇಡೀ ಚಿತ್ರರಂಗ ಸುಮಾರು 30 ವರ್ಷಗಳ ಹಿಂದೆ ಹೋಗಿದೆ. ಈ ವರ್ಷ ಸುಮಾರು 71 ಚಿತ್ರಗಳಷ್ಟೇ ರಿಲೀಸ್ ಆಗಿವೆ. ಈ ನಡುವೆ 2020ರಲ್ಲಿ ನಮ್ಮಿಂದ ಅನೇಕ ಚಂದನವನ, ಬಾಲಿವುಡ್ ಕಣ್ಮಣಿಗಳು ನಮ್ಮಿಂದ ಮರೆಯಾಗಿವೆ. 2020ರಲ್ಲಿ ಚಂದನವನದಿಂದ ಮರೆಯಾದ ತಾರೆಗಳ ಮಾಹಿತಿ ಇಲ್ಲಿದೆ
ಮೇಕಪ್ ಕೃಷ್ಣ, ಸಂಜೀವ್ ಕುಲಕರ್ಣಿ, ಸುಶ್ಮಿತಾ:
ಡಾ.ರಾಜ್ಕುಮಾರ್, ವಿಷ್ಣುವರ್ದಧನ್ ಅಂತಹ ಮೇರು ನಟರಿಗೆ ಬಣ್ಣ ಹಚ್ಚಿದ್ದ ಕಲಾವಿದ ಮೇಕಪ್ ಕೃಷ್ಣ (56) ಜನವರಿ 13 ಹೃದಯಾಘಾತದಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ, ರಂಗಭೂಮಿ ಕಲಾವಿದ ಸಂಜೀವ್ ಕುಲಕರ್ಣಿ ಜನವರಿ 26ರಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ಫೆಬ್ರವರಿಯಲ್ಲಿ ಪತಿ ಕಿರುಕುಳ ಗಾಯಕಿ ಸುಶ್ಮಿತಾ ಆತ್ಮಹತ್ಯೆ, ಮಾರ್ಚ್ 1ರಂದು ಪತಿ ಸೇರಿದಂತೆ ಮೂವರ ಬಂಧನವಾಗಿತ್ತು.
Advertisement
Advertisement
ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಚಿಕಿತ್ಸೆ ಫಲಕಾರಿಯಾಗದೇ ಫೆಬ್ರವರಿ 18ರಂದು ನಿಧನರಾಗಿದ್ದರು. ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮುಕ್ತ ಮುಕ್ತ ಧಾರಾವಾಹಿಯ ನಟ ಆನಂದ್ ವಿಧಿವಶ, ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ನಟ ಆನಂದ್ ,ಮಾರ್ಚ್ 8ರಂದು ಬೆಂಗಳೂರಿನ ರಂಗದೊರೆ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಟಿ.ಎನ್ ಸೀತಾರಾಮ್ ನಿರ್ದೇಶನದ ಮುಕ್ತ ಮುಕ್ತ ಧಾರವಾಹಿಯಲ್ಲಿ ಆನಂದ್ ಎಸ್.ಪಿ. ವರ್ಣೀಕರ್ ಪಾತ್ರದಲ್ಲಿ ನಟಿಸಿದ್ದರು. ಡಾ. ರಾಜ್ಕುಮಾರ್ ಕುಟುಂಬದ ಆಪ್ತ ಕಪಾಲಿ ಮೋಹನ್ ಮಾರ್ಚ್ 30ರಂದು ತಮ್ಮದೇ ಒಡೆತನದ ಸುಪ್ರಿಮೋ ಹೋಟೆಲ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
Advertisement
Advertisement
ಮಲಯಾಳಂ ರಂಗಭೂಮಿ ಮತ್ತು ಸಿನಿಮಾಗಳಲ್ಲಿ ಖ್ಯಾತಿಗಳಿಸಿದ್ದ ನಟ ರವಿ ವಲ್ಲತೊಲ್ಲ ಬಹು ಅಂಗಾಂಗ ವೈಫಲ್ಯದಿಂದ ಏಪ್ರಿಲ್ 25ರಂದು ನಿಧನರಾಗಿದ್ದರು. ಖ್ಯಾತ ರಂಗಭೂಮಿ ನಟರಾಗಿದ್ದ ಟಿ.ಎನ್. ಗೋಪಿನಾಥನ್ ಪುತ್ರರಾಗಿದ್ದ ಅವರು, ಮಾಲೆಯಾಳಂನ ಖ್ಯಾತ ಕವಿ ವಲ್ಲತೋಲ್ ನಾರಾಯಣ ಮೆನನ್ ಅವರ ಮೊಮ್ಮಗ ಸಹ ಆಗಿದ್ದರು.
ಇರ್ಫಾನ್ ಖಾನ್, ರಿಷಿ ಕಪೂರ್, ಬುಲೆಟ್ ಪ್ರಕಾಶ್:
ನೈಸರ್ಗಿಕ ಅಭಿನಯದ ಮೂಲಕವೇ ಬಾಲಿವುಡ್ನಲ್ಲಿ ಪ್ರಖ್ಯಾತಗೊಂಡಿದ್ದ ನಟ ಇರ್ಫಾನ್ ಖಾನ್ ನಿಧನರಾಗಿದ್ದರು. 2018ರಲ್ಲಿ ನ್ಯೂರೋ ಎಂಡೋಕ್ರೈನ್ ಕ್ಯಾನ್ಸರ್ಗೆ ತುತ್ತಾಗಿ ಚೇತರಿಸಿಕೊಂಡ ಇರ್ಫಾನ್ ಸೋಂಕಿನಿಂದ 2020 ಎಪ್ರಿಲ್ 29ರಂದು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಬಾಲಿವುಡ್ನ 80 ಚಿತ್ರಗಳಲ್ಲಿ ಅಭಿನಯಿಸಿದ್ದ ಇರ್ಫಾನ್ ಹಾಲಿವುಡ್ ಚಿತ್ರದಲ್ಲಿಯೂ ನಟಿಸಿದ್ದರು. ಬಾಲಿವುಡ್ ಹಿರಿಯ ನಟ ರಿಷಿ ಕಪೂರ್(67) ವಿಧಿವಶ. 2018ರಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಮುಂಬೈನ ಕಾಸಗಿ ಆಸ್ಪತ್ರೆಯಲ್ಲಿ ಏಪ್ರಿಲ್ 30ರಂದು ಕೊನೆಯುಸಿರೆಳೆದಿದ್ದರು.
ಏಪ್ರಿಲ್ 6ರಂದು 44 ವರ್ಷದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಲಿವರ್, ಕಿಡ್ನಿ ವೈಫಲ್ಯದಿಂದಾಗಿ ಚಿಕಿತ್ಸೆ ಫಲಿಸದೆ ಸೋಮವಾರ ಮಧ್ಯಾಹ್ನ ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಸುಮಾರು 325ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಬುಲೆಟ್ ಪ್ರಕಾಶ್, ಸ್ಯಾಂಡಲ್ವುಡ್ ಎಲ್ಲಾ ಸ್ಟಾರ್ ನಟರ ಜೊತೆಯಲ್ಲಿ ಕಾಣಿಸಿಕೊಂಡಿದ್ದರು.
ಮೈಕೆಲ್ ಮಧು, ವಾಜಿದ್ ಖಾನ್:
ಸ್ಯಾಂಡಲ್ವುಡ್ನ ಜನಪ್ರಿಯ ಹಾಸ್ಯ ನಟ ಮೈಕೆಲ್ ಮಧು ನಿಧನರಾಗಿದ್ದರು. ಮಧ್ಯಾಹ್ನ ಊಟದ ನಂತರ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಅವರನ್ನು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಹಾಸನದ ಬೇಲೂರು ಮೂಲದವರಾದ ನಟಿ, ನಿರೂಪಕಿ ಚಂದನಾ(29) ಆತ್ಮಹತ್ಯೆಗೆ ಶರಣಾದರು. ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ. ಸೆಲ್ಫಿ ವಿಡಿಯೋ ಮೂಲಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್(42) ಜೂನ್ 4ರಂದು ನಿಧನರಾಗಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಾಜಿದ್ ಕೆಲವು ತಿಂಗಳ ಹಿಂದೆ ಕಿಡ್ನಿ ಕಸಿ ಮಾಡಿಕೊಂಡಿದ್ದರು ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಈ ಹೊತ್ತಿನಲ್ಲಿಯೇ ಕೊರೊನಾ ವೈರಸ್ ಸೋಂಕು ತಗುಲಿ ಸಾವನ್ನಪ್ಪಿದ್ದರು.
ಚಿರಂಜೀವಿ ಸರ್ಜಾ, ಸುಶಾಂತ್ ಸಿಂಗ್ ರಜಪೂತ್:
ಸ್ಯಾಂಡಲ್ವುಡ್ ಸ್ಟಾರ್ ನಟ ಚಿರಂಜೀವಿ ಸರ್ಜಾ(39) ಜೂನ್ 7 ರಂದು ನಿಧನರಾಗಿದ್ದರು. ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಚಿರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಬಾಲಿವುಡ್ ಯಂಗ್ ಸ್ಟಾರ್ ಸುಶಾಂತ್ ಸಿಂಗ್ ರಜಪೂತ್(34) ನಿಧನ. ಮುಂಬೈನ ಬಾಂದ್ರ ನಿವಾಸದಲ್ಲಿ ಸುಶಾಂತ್ ದೇಹ ನೇಣು ಬಿಗಿದುಕೊಂಡ ರೀತಿಯಲ್ಲಿ ಸಿಕ್ಕಿತ್ತು. ಸದ್ಯ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುವುದರ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.
ಉಪೇಂದ್ರ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ಓಂ ಸಿನಿಮಾದಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದ ರಿಯಲ್ ರೌಡಿ ಕೊರಂಗು ಕೃಷ್ಣ ಮೃತಪಟ್ಟಿದ್ದರು. ಕರಳುಬೇನೆಯಿಂದ ಬಳಲುತ್ತಿದ್ದ ಕೊರಂಗು ಚಿಕಿತ್ಸೆ ಫಲಕಾರಿಯಾಗದೆ ಜೂನ್ 20ರಂದು ಸಾವನ್ನಪ್ಪಿದ್ದರು. ಕನ್ನಡದ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳು ಹಾಗೂ ಮಿಮಿಕ್ರಿ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದ್ದ ಮಿಮಿಕ್ರಿ ರಾಜಗೋಪಾಲ್(64) ನಿಧನರಾಗಿದ್ದರು. ಅಸ್ತಮಾ ಹಾಗೂ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ರಾಜಗೋಪಾಲ್ ಬೆಂಗಳೂರಿನ ಕೆಂಗೇರಿ ಸಮೀಪದಲ್ಲಿರುವ ಅವರ ನಿವಾಸದಲ್ಲಿ ವಿಧಿವಶರಾಗಿದರು.
ಜೀವನದಲ್ಲಿ ಜಿಗುಪ್ಸೆಗೊಂಡು ಸ್ಯಾಂಡಲ್ವುಡ್ನ ಉದಯನ್ಮೋಖ ನಟ ಸುಶೀಲ್ ಕುಮಾರ್(30) ಜುಲೈ 8ರಂದು ಮಂಡ್ಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಮೃತ ಸುಶೀಲ್ ಕುಮಾರ್ ಸಲಗ ಮತ್ತು ಕಮರೊಟ್ಟು ಚೆಕ್ ಪೋಸ್ಟ್ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಕೊರೊನಾ ವೈರಸ್ ಹಾಗೂ ಲಾಕ್ಡೌನ್ ಸಮಯದಲ್ಲಿ ಕನ್ನಡದ ಹಿರಿಯ ನಟ ಹುಲಿವನ್ ಗಂಗಧಾರ್(70) ಜುಲೈ 18ರಂದು ಸಾವಪ್ಪಿದ್ದರು. ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು
ಪ್ರೇಮ್ ತಾಯಿ ನಿಧನ, ಹಿರಿಯ ನಟಿ ಶಾಂತಮ್ಮ:
ನಿರ್ದೇಶಕ ಜೋಗಿ ಪ್ರೇಮ್ ತಾಯಿ ಭಾಗ್ಯಮ್ಮ ಜುಲೈ 17ರಂದು ವಿಧಿವಶರಾಗಿದ್ದರು. ಕ್ಯಾನ್ಸರ್ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಜೋಗಿ ಪ್ರೇಮ್ ತಾಯಿ ಜಯನಗರದ ಶಾಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದರು. ಕನ್ನಡ ಚಿತ್ರ ರಂಗದ ಹಿರಿಯ ನಟಿ ಶಾಂತಮ್ಮ(95) ಜುಲೈ 19ರಂದು ಮೃತಪಟ್ಟಿದ್ದರು. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶಾಂತಮ್ಮ ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. 1956ರಲ್ಲಿ ಚಿತ್ರರಂಗ ಪ್ರವೇಶಿಸಿದ್ದ ಅವರು ಈವರೆಗೂ 160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ರಾಕ್ಲೈನ್ ಸುಧಾಕರ್, ಎಸ್ಪಿಬಿ: ಬಣ್ಣ ಹಚ್ಚಿದಾಗಲೇ ಹಾಸ್ಯ ನಟ ರಾಕ್ಲೈನ್ ಸುಧಾಕರ್ ಸೆಪ್ಟೆಂಬರ್ 24ರಂದು ನಿಧನರಾದ್ರು. ತಮ್ಮ ವಿಭಿನ್ನ ಧ್ವನಿಯೇ ಮೂಲಕ ರಾಕ್ಲೈನ್ ಸುಧಾಕರ್ ಗುರುತಿಸಿಕೊಂಡಿದ್ದರು. ಇನ್ನು ಕೊರೊನಾ ಸೋಂಕು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಗಾನ ಸಾಮ್ರಾಟ್ ಸೆಪ್ಟೆಂಬರ್ 25 ಎಸ್.ಪಿ.ಬಾಲಸುಬ್ರಹ್ಮಣಂ ನಿಧನರಾದರು. ಕೊರೊನಾ ನೆಗೆಟಿವ್ ಬಂದ ಮೇಲೆ ಎಸ್ಪಿಬಿ ಬಹುಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದರು.
ಅಕ್ಟೋಬರ್ 6ರಂದು ಕನ್ನಡ, ತೆಲಗು ಸೇರಿದಂತೆ ನೂರಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ರಂಗಕರ್ಮಿ ಕೊಡಗನೂರು ಜಯಕುಮಾರ್ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಜಯಕುಮಾರ್ ಬಾಪೂಜಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಜನ್ ನಾಗೇಂದ್ರ ಖ್ಯಾತಿಯ ಸಂಗೀತ ಸಂಯೋಜಕ ರಾಜನ್ ಅಕ್ಟೋಬರ್ 12ರಂದು ನಿಧನರಾದ್ರು. ಸುಮಾರು 375ಕ್ಕೂ ಅಧಿಕ ಸಿನಿಮಾಗಳಿಗೆ ಸಂಯೋಜನೆ ಮಾಡಿದ್ದರು. ರಾಜನ್ ಅವರಿಗೆ 75 ವರ್ಷ ವಯಸ್ಸಾಗಿತ್ತು. ನಟ, ನಿರ್ಮಾಪಕ ದಿನೇಶ್ ಗಾಂಧಿ ಹೃದಯಾಘಾತದಿಂದ ಅಕ್ಟೋಬರ್ 31ರಂದು ನಿಧನ ಹೊಂದಿದ್ರು. ರವಿಚಂದ್ರನ್ ನಟನೆ ಹೂ ಮತ್ತು ಸುದೀಪ್ ಅಭಿನಯದ ವೀರ ಮದಕರಿ ಸಿನಿಮಾಗಳನ್ನ ದಿನೇಶ್ ಗಾಂಧಿ ನಿರ್ಮಾಣ ಮಾಡಿದ್ದರು.
ನವೆಂಬರ್ 4ರಂದು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಕಲಾವಿದ ಎಚ್.ಜಿ.ಸೋಮಶೇಖರ್ ರಾವ್ ನವೆಂಬರ್ 4ರಂದು ನಿಧನರಾದರು. ಸೋಮಶೇಖರ್ ರಾವ್ ಹಿರಿಯ ನಟ ದತ್ತಣ್ಣ ಅವರ ಸೋದರರು. ಡಿಸೆಂಬರ್ 19 ರಂದು ಎರಡು ದಂಡೆಯ ಮೇಲೆ, ಒಲವಿನ ಕಾಣಿಕೆ, ಶುಭಲಗ್ನ, ಲಂಚ ಸಾಮ್ರಾಜ್ಯ ಸಿನಿಮಾ ನಿರ್ದೇಶಿಸಿದ್ದ ಬೂದಾಳ್ ಕೃಷ್ಣಮೂರ್ತಿ ಡಿಸೆಂಬರ್ 19ರಂದು ನಿಧನರಾದರು, ಅವರಿಗೆ 71 ವರ್ಷ ವಯಸ್ಸಾಗಿತ್ತು.