ಮಂಗಳೂರು: 2020ರಲ್ಲಿ ಕಲಿತ ಪಾಠಗಳಿಂದ 2021ನೇ ವರ್ಷ ಶುಭವನ್ನು ಕರುಣಿಸಲಿ ಎಂದು ಡಾ ವೀರೇಂದ್ರ ಹೆಗ್ಗಡೆಯವರು ಕರ್ನಾಟಕ ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ.
Advertisement
ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರು ಮಾಧ್ಯಮದವರೊಂದಿಗೆ ಮಾತಾನಾಡಿ, 2020ನೇ ವರ್ಷದಲ್ಲಿ ದೇಶ ಪರಿವರ್ತನೆಯಾಗುತ್ತದೆ ಎಂದು ಎಪಿಜೆ ಅಬ್ದುಲ್ ಕಲಾಂ ಹೇಳಿದ್ದರು. ಆದರೆ ಕೊರೊನಾದಿಂದ ಪ್ರಂಪಚವೇ ಶಾಪಗ್ರಸ್ತದ ರೀತಿ ಆಗಿದೆ. ಆದರೂ ಕೊರೊನಾದಿಂದ ತುಂಬಾ ಪರಿವರ್ತನೆಯನ್ನು ಕಂಡಿದ್ದೇವೆ ಪ್ರಯಾಣ, ದುಂದುವೆಚ್ಚದಂತಹ ಕಾರ್ಯಗಳನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ ಎಂದರು.
Advertisement
Advertisement
ಪ್ರಸ್ತುತ ನಡೆಯುತ್ತಿರುವ ಕಾರ್ಯಕ್ರಮಗಳು ಎಲ್ಲವೂ ಸರಳತೆಯಿಂದ ನಡೆಯುತ್ತಿದೆ. ಈ ವರ್ಷ ಕೊರೊನಾ ಕಲಿಸಿದ ಎಲ್ಲಾ ಪಾಠಗಳಿಂದ ಆತ್ಮವಲೋಕನ ಮಾಡಿಕೊಂಡು ಮುನ್ನಡೆಯೋಣ. 2021ನೇ ವರ್ಷ ಎಲ್ಲರಿಗೂ ಶುಭವನ್ನು ತರಲಿ ಎಂದು ಹೊಸ ವರ್ಷದ ಶುಭ ಹಾರೈಸಿದರು.