2020ರ ಐಪಿಎಲ್ ಆವೃತ್ತಿಗೆ ಕೌಂಟ್‍ಡೌನ್ ಶುರು

Public TV
2 Min Read
IPL 2020 copy

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಆವೃತ್ತಿಗೆ ಕೌಂಟ್‍ಡೌನ್ ಶುರುವಾಗಿದ್ದು, ಸುದೀರ್ಘ ನಿರೀಕ್ಷೆಯ ಬಳಿಕ ಟೂರ್ನಿ ಆರಂಭವಾಗುತ್ತಿರುವುದು ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ipl 2020 a

ಐಪಿಎಲ್ ಈಗಲೂ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‍ನಲ್ಲಿದ್ದು, ಯುಎಇನಲ್ಲಿ ಶನಿವಾರದಿಂದ ಟೂರ್ನಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ದುಬೈನಲ್ಲೂ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಜರುಗಲಿದೆ.

666853 bcci logo afp

ಇತ್ತ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಈ ಬಾರಿಯ ಟೂರ್ನಿಗಾಗಿ ಯುಎಇ ತಂಡದ ನಾಯಕ ಅಹ್ಮದ್ ರಾಝ್, ಯುವ ಆಟಗಾರ ಕಾರ್ತಿಕ್ ಮೇಯಪ್ಪನ್‍ರೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂಬ ಮಾಹಿತಿ ಲಭಿಸಿದೆ. ಸದ್ಯ ಈ ಇಬ್ಬರೂ ಆಟಗಾರರು ಆರ್ ಸಿಬಿ ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ರಾಝಗೆ ಯುಎಇನಲ್ಲಿರುವ ಎಲ್ಲಾ ಫಿಚ್‍ಗಳ ಕುರಿತ ಅನುಭವವನ್ನು ಹೊಂದಿದ್ದು, ಇವರ ಅನುಭವ ಆರ್ ಸಿಬಿ ಪ್ಲಸ್ ಆಗುವ ಅವಕಾಶವಿದೆ.

2009 ಮತ್ತು 2014ರ ಬಳಿಕ ಐಪಿಎಲ್ ಟೂರ್ನಿ ಯುಎಇನಲ್ಲಿ ನಡೆಯುತ್ತಿದೆ. ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ಅವಕಾಶವಿಲ್ಲದಿರುವುದರಿಂದ ಟಿವಿಯಲ್ಲಷ್ಟೇ ಪಂದ್ಯಗಳನ್ನು ನೋಡಬೇಕಿದೆ. ಅಲ್ಲದೇ ಪ್ರೇಕ್ಷಕರಿಲ್ಲದ ಟೂರ್ನಿ ಹೇಗಿರಲಿದೆ ಎಂಬ ಕುತೂಹಲವೂ ಮೂಡಿದೆ. ಕೋವಿಡ್ ಕಾರಣದಿಂದ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಬಿಸಿಸಿಐ ಕೈಗೊಂಡಿದ್ದು, ಸಂಪೂರ್ಣ ಟೂರ್ನಿ ಬಯೋ ಸೆಕ್ಯೂಲರ್ ವಾತಾವರಣದಲ್ಲಿ ನಡೆಯಲಿದೆ.

ಯುಎಇನ ಅಬುಧಾಬಿ, ದುಬೈ, ಶಾರ್ಜಾ ನಗರಗಳ ಕ್ರೀಡಾಂಗಣಗಳಲ್ಲಿ ಪಂದ್ಯ ನಡೆಯಲಿದ್ದು, ಈ ಪಿಚ್‍ಗಳು ಹೆಚ್ಚು ಸ್ಪಿನ್ನರ್ ಗಳಿಗೆ ನೆರವಾಗಲಿದೆ. ಕ್ರೀಡಾಂಣದಲ್ಲಿ 150-160 ರನ್ ಗಳಿಸಿದರೂ ತಂಡಕ್ಕೆ ಗೆಲ್ಲುವ ಅವಕಾಶವಿದೆ. ಈಗಾಗಲೇ ಯುಎಇನಲ್ಲಿ ವಾಸ್ತವ್ಯ ಹೂಡಿರುವ ಆಟಗಾರರು 3 ವಾರಗಳ ಅಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ಕೊರೊನಾ ಸಂಕಷ್ಟದ ನಡುವೆಯೇ 53 ದಿನಗಳ ಸುದೀರ್ಘ ಹಾಗೂ 60 ಪಂದ್ಯಗಳ ಬೃಹತ್ ಟೂರ್ನಿ ಆರಂಭವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *