2019ರಲ್ಲಿ ರಾತ್ರೋರಾತ್ರಿ ಸ್ಟಾರ್ ಆದವರು

Public TV
3 Min Read
2019 STARS

ಪ್ರತಿಭೆಯಿದ್ದರೆ ಒಂದಲ್ಲ ಒಂದು ದಿನ ಸ್ಟಾರ್ ಆಗುತ್ತಾರೆ. ಆದರೆ ಅದೃಷ್ಟ ಇದ್ದರೆ ಒಂದೇ ರಾತ್ರಿಯಲ್ಲೂ ಸ್ಟಾರ್ ಆಗಿ ಮಿಂಚಬಹುದು. ಅದೇ ರೀತಿ 2019ರಲ್ಲಿ ಅನೇಕರು ಒಂದು ರಾತ್ರಿಯಲ್ಲೇ ಸ್ಟಾರ್ ಆಗಿ ಮಿಂಚಿದ್ದಾರೆ. ಉದಾಹರಣೆಗೆ ಹಳ್ಳಿಯಲ್ಲಿ ಕುರಿ ಕಾಯುತ್ತಿದ್ದ ಹುಡುಗ ಇಂದು ಕರ್ನಾಟಕದಾದ್ಯಂತ ಫೇಮಸ್ ಆಗಿದ್ದಾರೆ. ಇನ್ನೂ ರೈಲ್ವೆ ಸ್ಟೇಷನ್‍ನಲ್ಲಿ ಕುಳಿತು ಹಾಡು ಹಾಡುತ್ತಿದ್ದವರು ನ್ಯಾಷನಲ್ ಸ್ಟಾರ್ ಆಗಿ ಮಿಂಚಿದ್ದಾರೆ. ಹೀಗಾಗಿ 2019ರಲ್ಲಿ ಯಾರೆಲ್ಲಾ ರಾತ್ರೋರಾತ್ರಿ ಸ್ಟಾರ್ ಆಗಿ ಮಿಂಚಿದ್ದಾರೆ ಎಂಬುದನ್ನು ಒಮ್ಮೆ ನೋಡಿ

ಕೊಪ್ಪಳದ ಗಂಗಮ್ಮ:
ಅಂಬೇಡ್ಕರ್ ನಗರದ ನಿವಾಸಿ ಗಂಗಮ್ಮ ಗದ್ದೆಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಇವರು 20 ವರ್ಷದಿಂದಲೂ ಹಾಡುತ್ತಿದ್ದರೂ ಆದರೆ ಫೇಸ್‍ಬುಕ್ ಮೂಲಕ ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ. ಇಂದು ಗಾಯಕಿ ಕೊಪ್ಪಳದ ಗಂಗಮ್ಮ ನಾಡಿನಾದ್ಯಂತ ಚಿರಪರಿಚಿತರಾಗಿದ್ದು, ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿದ್ದಾರೆ. ಇವರನ್ನು ಮಾದರಿಯಾಗಿಟ್ಟುಕೊಂಡು ಅನೇಕ ಗ್ರಾಮೀಣ ಪ್ರತಿಭೆಗಳು ಬೆಳಕಿಗೆ ಬರುವ ಪ್ರಯತ್ನ ಮಾಡುತ್ತಿವೆ.

Gangamma

ಕೊಪ್ಪಳದ ಅರ್ಜುನ್ ಇಟಗಿ:
ಅರ್ಜುನ್ ಇಟಗಿ ಏಳರ ಬಾಲಕ. ಆದರೆ ಖಾಸಗಿ ವಾಹಿನಿಯ ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಸಣ್ಣ ವಯಸ್ಸಿನಲ್ಲೇ ದೊಡ್ಡ ಯಶಸ್ಸು ಗಳಿಸಿಕೊಂಡಿದ್ದಾರೆ. ಈಗ ಛೋಟಾ ಸಿಂಗರ್ ಎಂತಲೇ ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಿರುವ ಪ್ರತಿಭೆ. ಅರ್ಜುನ್ ಇಟಗಿ ಅದ್ಭುತ ಗಾಯನದ ಜೊತೆ ತನ್ನ ಸ್ಟೈಲ್‍ನಿಂದಲೂ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ಪ್ರೈಜ್ ಟ್ಯಾಗ್ ತೆಗೆಯದೇ ಕನ್ನಡಕ ಹಾಕಿಕೊಳ್ಳುವ ಅರ್ಜುನ್ ಸ್ಟೈಲ್ ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು. ಈ ವರ್ಷ ಕೊಪ್ಪಳದ ಪುಟಾಣಿ ಅರ್ಜುನ್ ಇಟಗಿ, ರಾಜ್ಯದ ಮೂಲೆ ಮೂಲೆಯಲ್ಲೂ ಫೇಮಸ್ ಆಗಿದ್ದಾನೆ.

Arjun Itagi

ಸರಿಗಮಪ ಹನುಮಂತ್:
ಯಾವುದೇ ಸಂಗೀತ ತರಬೇತಿಯನ್ನು ಪಡೆಯದೆ, ಕುರಿ ಮೇಯಿಸುತ್ತಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ ಸೀಸನ್ 15’ ಕಾರ್ಯಕ್ರಮದಲ್ಲಿ ಹಾವೇರಿ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ತಾಂಡಾದ ನಿವಾಸಿ ಹನುಮಂತ ಭಾಗವಹಿಸಿದ್ದರು. ಇಂದು ಹಾಡು ಹೇಳುವ ಮೂಲಕ ಹನುಮಂತ ಪ್ರಸಿದ್ಧಿಯಾಗಿದ್ದಾರೆ. ಬಾಲ್ಯದಿಂದಲೂ ಹನುಮಂತ ಕುರಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಓದಿದ್ದು ಕೇವಲ ಐದನೇ ತರಗತಿ. ಸಂಗೀತ ಕಲಿಯಲು ಯಾವುದೇ ಸಂಗೀತ ಶಾಲೆಗೂ ಹೋಗಿಲ್ಲ. ಕುರಿಗಳನ್ನ ಮೇಯಿಸುತ್ತಾ ಮೊಬೈಲಿನಲ್ಲಿ ಹಾಡು ಕೇಳುತ್ತಾ ಇಂಪಾಗಿ ಹಾಡುಗಳನ್ನ ಹಾಡುವುದನ್ನು ಕಲಿಯುತ್ತಿದ್ದಾರೆ. ಇಂದು ಡ್ಯಾನ್ಸ್ ಮಾಡುವ ಮೂಲಕವೂ ಕರ್ನಾಟಕದ ಜನತೆಗೆ ಅಚ್ಚುಮೆಚ್ಚಾಗಿದ್ದಾರೆ.

hvr hanumantha 3

ರಾನು ಮೊಂಡಲ್:
ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ರಾನು 1972ರಲ್ಲಿ ಬಿಡುಗಡೆಯಾದ `ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋವನ್ನು ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆದ ಬೆನ್ನಲೇ ರಾನು ಅವರಿಗೆ ರಿಯಾಲಿಟಿ ಶೋನಲ್ಲಿ ಹಾಡುವ ಅವಕಾಶ ಸಿಕ್ಕಿತ್ತು. ಬಳಿಕ ಗಾಯಕ ಹಿಮೇಶ್ ರೇಶ್ಮಿಯಾ ಅವರು ತಮ್ಮ ಚಿತ್ರದಲ್ಲಿ ಹಾಡಲು ರಾನು ಅವರಿಗೆ ಅವಕಾಶ ಕೊಟ್ಟಿದ್ದರು. ಹೀಗೆ ರಾನು ಮೊಂಡಲ್ ರಾತ್ರೋರಾತ್ರಿ ಸ್ಟಾರ್ ಆಗಿ ಮಿಂಚಿದ್ದಾರೆ.

ranu mondal 1

ಹೌದು ಹುಲಿಯ -ಪೀರಪ್ಪ:
ಉಪಚುನಾವಣೆ ಪ್ರಚಾರದ ವೇಳೆ ಪಕೀರಪ್ಪ (ಪೀರಪ್ಪ) ಕಟ್ಟಿಮನಿ ಎಂಬವರು ಕುಡಿದ ಮತ್ತಿನಲ್ಲಿ ಹೌದು ಹುಲಿಯಾ ಎಂದು ಹೇಳಿದ್ದರು. ಈ ಡೈಲಾಗ್ ರಾಜ್ಯಾದ್ಯಂತ ಫೇಮಸ್ ಆಗಿ ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗಿತ್ತು. ಸಿದ್ದರಾಮಯ್ಯನವರು ಪ್ರಚಾರದ ಭಾಷಣ ಮಾಡುವ ವೇಳೆ ಇಂದಿರಾಗಾಂಧಿ ದೇಶಕ್ಕೋಸ್ಕರ ಪ್ರಾಣ ತೆತ್ತರು ಅಂದಾಗ ವೇದಿಕೆ ಮುಂದೆ ಕುಳಿತಿದ್ದ ಪಕೀರಪ್ಪ ಕಟ್ಟಿಮನಿ ‘ಹೌದು ಹುಲಿಯಾ’ ಅಂತಾ ಜೋರಾಗಿ ಕೂಗಿ ಹೇಳಿದ್ದರು. ಟಿಕ್‍ಟಾಕ್‍ಗಳಲ್ಲಿ ಎಲ್ಲಾ ಫುಲ್ ಬಳಕೆ ಮಾಡಿಕೊಂಡು ಡಬ್ ಸ್ಮ್ಯಾಶ್ ಮಾಡಿದ್ರು. ಇದಾದ ಬಳಿಕ ಡೈಲಾಗ್ ಹೇಳಿದ ಪಕೀರಪ್ಪ ಕಟ್ಟಿಮನಿ ಕೂಡ ಫುಲ್ ಫೇಮಸ್ ಆದರು.

Howdu Huliya Siddu

ಗದಗ ಹನುಮಂತಪ್ಪ(ಕುರಿ ಕಾಯುವ):
ಗದಗ ಜಿಲ್ಲೆ ಶಿರಹಟ್ಟಿಯ ಕುರಿಗಾಹಿ ಹನುಮಂತ ಬಟ್ಟೂರ ಕುರಿ ಕಾಯುತ್ತಿರುವಾಗ ಶಿವರಾಜ್‍ಕುಮಾರ್ ಸಿನಿಮಾದ ‘ಸಾಗರಿಯೇ ಸಾಗರಿಯೇ’ ಹಾಡನ್ನು ಹಾಡುತ್ತಾ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದರು. ಆತ ಹಾಡಿರುವ ಹಾಡು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ರಾತ್ರೋರಾತ್ರಿ ಫೇಮಸ್ ಆಗಿದ್ದನು. ಹನುಮಂತ ಹೈಸ್ಕೂಲ್‍ವರೆಗೂ ಮಾತ್ರ ವಿದ್ಯಾಭ್ಯಾಸ ಮಾಡಿದ್ದಾನೆ. ಈತನ ಹಾಡನ್ನು ಕೇಳಿ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.

GADAG HANUMANTHAPPA 2

ಕೋಟೆ ಡ್ಯಾನ್ಸರ್ ಪ್ರದೀಪ್: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಹಿಂಡಸಕಟ್ಟೆ ಗ್ರಾಮದ ರಂಗಸ್ವಾಮಿ ಹಾಗೂ ತಿಪ್ಪಮ್ಮ ದಂಪತಿಯ ಮೂರನೇ ಮಗ ಪ್ರದೀಪ್. ಹಲವು ಬಾರಿ ಪರೀಕ್ಷೆಗಳಲ್ಲಿ ಫೇಲ್ ಆಗಿದ್ದ ಪ್ರದೀಪ್ ವ್ಯವಸಾಯದ ಕೆಲಸಕ್ಕೆ ಸೀಮಿತನಾಗಿದ್ದನು. ಮನೆಯಲ್ಲಿ ಮೈಕಲ್ ಜಾಕ್ಸನ್ ಹಾಡು, ಡ್ಯಾನ್ಸ್ ಕೇಳುತ್ತಾ ಅವರಂತ ಸಾಧಿಸಲು ಮುಂದಾದ. ಒಮ್ಮೆ ಜಮೀನಿನಲ್ಲಿ ಇಂಗ್ಲಿಷ್ ಹಾಡನ್ನು ಹೇಳುತ್ತಾ, ಮೈಕಲ್ ಜಾಕ್ಸನ್ ಮಾದರಿಯಲ್ಲಿ ನೃತ್ಯ ಮಾಡುವ ದೃಶ್ಯ ಸಾಮಾಜಿಕ ಜಾಲಾತಾಣಕ್ಕೆ ಅಪ್ಲೋಡ್ ಆಯ್ತು. ಸೋಶಿಯಲ್ ಮೀಡಿಯಾದಲ್ಲಿ ಪ್ರದೀಪ್ ಡ್ಯಾನ್ಸ್ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾತ್ರೋ ರಾತ್ರಿ ಸ್ಟಾರ್ ಆಗಿದ್ದಾನೆ.

Pradeep 2

Share This Article
Leave a Comment

Leave a Reply

Your email address will not be published. Required fields are marked *