ಬೆಂಗಳೂರು: ಬಿರು ಬೇಸಿಗೆ ಹೊತ್ತಲ್ಲೇ ಲೋಕಸಭಾ ಚುನಾವಣಾ (Lok Sabha Election) ಕಾವು ದಿನೇ ದಿನೆ ಏರುತ್ತಿದೆ. ಈಗಾಗಲೇ ರಾಜ್ಯದ 28 ಕ್ಷೇತ್ರಗಳಿಗೆ ಮೂರು ಪಕ್ಷಗಳು ಹುರಿಯಾಳುಗಳನ್ನು ಘೋಷಿಸಿವೆ. ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆಯೂ ಜೋರಾಗಿ ನಡೆಯಿತು. ಬಿಜೆಪಿ-ಜೆಡಿಎಸ್ ಮೈತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಮೂರು ಪಕ್ಷಗಳು ಹಲವು ಬದಲಾವಣೆಯೊಂದಿಗೆ ಈ ಬಾರಿ ಚುನಾವಣಾ ಕಣಕ್ಕಿಳಿದಿವೆ. ಮೈತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಗಮನಿಸಿದರೆ ಇದು ತಿಳಿಯುತ್ತದೆ. ಹಲವೆಡೆ ಹಿರಿಯರು, ಕಿರಿಯರೆನ್ನದೆ ಬದಲಾವಣೆ ಮಾಡಲಾಗಿದೆ. ಕೆಲವು ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಮಣೆ ಹಾಕಲಾಗಿದೆ. ಕಳೆದ ಲೋಕಸಭಾ ಚುನಾವಣಾ ಫಲಿತಾಂಶ ಗಮನದಲ್ಲಿಟ್ಟುಕೊಂಡು ಇಂತಹ ಮಾರ್ಪಾಡನ್ನು ಪಕ್ಷಗಳು ಮಾಡಿವೆ. ಇದನ್ನೂ ಓದಿ: ಬೆಳಗ್ಗೆದ್ದು ಸೆಲ್ ಕ್ಲೀನ್, ಯೋಗ ನಂತ್ರ 2 ಪೀಸ್ ಬ್ರೆಡ್- ಜೈಲಲ್ಲಿರೋ ಕೇಜ್ರಿವಾಲ್ ದಿನಚರಿ ಹೇಗಿದೆ?
Advertisement
Advertisement
2019 ರ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದವರು ಈ ಸಲವೂ ಅದೇ ಹುರುಪಿನಿಂದ ಅಖಾಡಕ್ಕಿಳಿದಿದ್ದಾರೆ. ಅತಿ ಕಡಿಮೆ ಮತಗಳ ಅಂತರದಿಂದ ಸೋತವರು ಒಂದೆಡೆ ಈ ಬಾರಿ ಏನಾಗುತ್ತೋ ಎಂಬ ಆತಂಕ ಮತ್ತೊಂದೆಡೆ ಇನ್ನೂ ಹೆಚ್ಚಿನ ಶ್ರಮ ಹಾಕಿ ಹೇಗಾದರು ಗೆಲ್ಲಲೇ ಬೇಕು ಎಂಬ ಭರವಸೆಯೊಂದಿಗೆ ಕಣದಲ್ಲಿದ್ದಾರೆ. ಇತ್ತ ಅತಿ ಕಡಿಮೆ ಅಂತರದಿಂದ ಸೋತವರು ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಹಠದಿಂದ ತಯಾರಿ ನಡೆಸುತ್ತಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದವರನ್ನೇ ಬದಲಾಯಿಸಿ ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಿರುವುದು ಕುತೂಹಲ ಮೂಡಿಸಿದೆ.
Advertisement
ಹೆಚ್ಚು ಮತಗಳ ಅಂತರದಿಂದ ಗೆದ್ದವರು (2019)
ಉತ್ತರ ಕನ್ನಡ – ಅನಂತ್‌ಕುಮಾರ್ ಹೆಗಡೆ (ಬಿಜೆಪಿ): 4,79,649
ಬೆಳಗಾವಿ – ಸುರೇಶ್ ಅಂಗಡಿ (ಬಿಜೆಪಿ): 3,91,304
ಉಡುಪಿ-ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ (ಬಿಜೆಪಿ): 3,49,599
ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ (ಬಿಜೆಪಿ): 3,31,192
ದಕ್ಷಿಣ ಕನ್ನಡ – ನಳಿನ್ ಕುಮಾರ್ ಕಟೀಲ್ (ಬಿಜೆಪಿ): 2,74,621
ವಿಜಯಪುರ – ರಮೇಶ್ ಜಿಗಜಿಣಗಿ (ಬಿಜೆಪಿ): 2,58,038
ಶಿವಮೊಗ್ಗ – ಬಿ.ವೈ.ರಾಘವೇಂದ್ರ (ಬಿಜೆಪಿ): 2,23,360
ಕೋಲಾರ – ಎಸ್.ಮುನಿಸ್ವಾಮಿ (ಬಿಜೆಪಿ): 2,10,021
ಬೆಂಗಳೂರು ಗ್ರಾಮಾಂತರ – ಡಿ.ಕೆ.ಸುರೇಶ್ (ಕಾಂಗ್ರೆಸ್): 2,06,870
ಧಾರವಾಡ – ಪ್ರಹ್ಲಾದ್ ಜೋಶಿ (ಬಿಜೆಪಿ): 2,05,072
Advertisement
ಕಡಿಮೆ ಮತಗಳ ಅಂತರದಿಂದ ಗೆದ್ದವರು
ಚಾಮರಾಜನಗರ – ವಿ.ಶ್ರೀನಿವಾಸ ಪ್ರಸಾದ್ (ಬಿಜೆಪಿ): 1,817
ತುಮಕೂರು – ಜಿ.ಎಸ್.ಬಸವರಾಜ್ (ಬಿಜೆಪಿ): 13,339
ಕೊಪ್ಪಳ – ಸಂಗಣ್ಣ ಕರಡಿ (ಬಿಜೆಪಿ): 38,397
ಬಳ್ಳಾರಿ – ವೈ.ದೇವೇಂದ್ರಪ್ಪ (ಬಿಜೆಪಿ): 55,707
ಬೆಂಗಳೂರು ಕೇಂದ್ರ – ಪಿ.ಸಿ.ಮೋಹನ್ (ಬಿಜೆಪಿ): 70,968
ಚಿತ್ರದುರ್ಗ – ಎ.ನಾರಾಯಣಸ್ವಾಮಿ (ಬಿಜೆಪಿ): 80,178
ಕಲಬುರಗಿ – ಡಾ. ಉಮೇಶ್ ಜಾದವ್ (ಬಿಜೆಪಿ): 95,452
ಬೀದರ್ – ಭಗವಂತ್ ಖೂಬಾ (ಬಿಜೆಪಿ): 1,16,834
ರಾಯಚೂರು – ರಾಜಾ ಅಮರೇಶ್ವರ ನಾಯಕ್ (ಬಿಜೆಪಿ): 1,17,716
ಚಿಕ್ಕೋಡಿ – ಅಣ್ಣಾಸಾಹೇಬ್ ಜೊಲ್ಲೆ (ಬಿಜೆಪಿ): 1,18,877
ಈ ಬಾರಿ ಆದ ಪ್ರಮುಖ ಬದಲಾವಣೆಗಳೇನು?
ಉತ್ತರ ಕನ್ನಡ: ಲೋಕಸಭಾ ಕ್ಷೇತ್ರದಲ್ಲಿ ಆರು ಬಾರಿ ಗೆದ್ದು ತನ್ನದೇ ವರ್ಚಸ್ಸು ಹೊಂದಿದ್ದ ಅನಂತ್‌ಕುಮಾರ್ ಹೆಗಡೆಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡದೇ ಅಚ್ಚರಿ ಮೂಡಿಸಿದೆ. 2019 ರಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ಬಳಿಕ ಕ್ಷೇತ್ರದಿಂದ ನಾಪತ್ತೆಯಾಗಿ ಚುನಾವಣೆ ಸಂದರ್ಭದಲ್ಲಿ ಹೆಗಡೆ ಕ್ಷೇತ್ರದಲ್ಲಿ ಪ್ರತ್ಯಕ್ಷರಾಗಿದ್ದಾರೆ ಎಂದು ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದರು. ಇದೇ ಹೊತ್ತಿನಲ್ಲಿ ಸಂವಿಧಾನ ಬದಲಾವಣೆ ಕುರಿತು ಸಂಸದ ಆಡಿದ ಮಾತುಗಳು ಪಕ್ಷ ಮುಜುಗರಕ್ಕೀಡಾಗುವಂತೆ ಮಾಡಿತು. ಈ ಎಲ್ಲದರ ಪರಿಣಾಮವಾಗಿ ಹೆಗಡೆಗೆ ಕೊಕ್ ಕೊಟ್ಟು ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬಿಜೆಪಿ ಮಣೆ ಹಾಕಿದೆ. ಇದನ್ನೂ ಓದಿ: ಬಿಎಸ್‌ವೈ ಸಮ್ಮುಖದಲ್ಲಿ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ
ದಕ್ಷಿಣ ಕನ್ನಡ: ಅತ್ತ ರಾಜ್ಯಾಧ್ಯಕ್ಷ ಸ್ಥಾನವೂ ಹೋಯ್ತು ಇತ್ತ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಕೂಡ ನಳಿನ್ ಕುಮಾರ್ ಕಟೀಲ್‌ಗೆ ಮಿಸ್ ಆಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಪ್ರತಿಫಲ ಇದು ಎಂದು ವಿಶ್ಲೇಷಿಸಲಾಗಿದೆ. 2024 ರ ಚುನಾವಣೆಗೆ ಕಟೀಲ್ ಬದಲಿಗೆ ಕ್ಯಾಪ್ಟನ್ ಬ್ರಿಜೇಶ್ ಚೌಟರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ.
ಉಡುಪಿ-ಚಿಕ್ಕಮಗಳೂರು: 2019 ರ ಚುನಾವಣೆಯಲ್ಲಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಕೇಂದ್ರ ಮಂತ್ರಿಯಾಗಿದ್ದರೂ ಶೋಭಾ ಕರಂದ್ಲಾಜೆ ಅವರ ಸ್ಪರ್ಧೆಗೆ ಕ್ಷೇತ್ರದಲ್ಲಿ ವಿರೋಧ ವ್ಯಕ್ತವಾಯಿತು. ಪರಿಣಾಮವಾಗಿ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಶಿಫ್ಟ್ ಮಾಡಲಾಯಿತು. ಉಡುಪಿ ಕ್ಷೇತ್ರದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಇದನ್ನೂ ಓದಿ: ಮೋದಿಯನ್ನು ಅಧಿಕಾರದಿಂದ ಇಳಿಸುವುದೇ ನಮ್ಮ ಮುಂದಿನ ಗುರಿ: ಮಲ್ಲಿಕಾರ್ಜುನ ಖರ್ಗೆ
ಚಾಮರಾಜನಗರ: ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ಬಿಜೆಪಿ ಸೇರಿದ್ದ ವಿ.ಶ್ರೀನಿವಾಸ್ ಪ್ರಸಾದ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ್ದರು. ಆದರೆ ಕಾಂಗ್ರೆಸ್‌ನ ಆರ್.ಧ್ರುವನಾರಾಯಣ್ ವಿರುದ್ಧ ಅತಿ ಕಡಿಮೆ ಮತಗಳ ಅಂತರದ ಪ್ರಾಯಾಸದ ಗೆಲುವು ಕಂಡಿದ್ದರು. ಅನಾರೋಗ್ಯ, ವಯಸ್ಸಿನ ಕಾರಣ ಈ ಸಲ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರ ಬದಲಾಗಿ ಎಸ್.ಬಾಲರಾಜ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕಾಂಗ್ರೆಸ್‌ನ ಸುನೀಲ್ ಬೋಸ್ ವಿರುದ್ಧ ಬಾಲರಾಜ್ ಕಣಕ್ಕಿಳಿದಿದ್ದಾರೆ.
ತುಮಕೂರು ಕ್ಷೇತ್ರದಲ್ಲಿ ಬಸವರಾಜ್ ಬದಲಿಗೆ ವಿ.ಸೋಮಣ್ಣ ಹಾಗೂ ಕೊಪ್ಪಳದಲ್ಲಿ ಸಂಗಣ್ಣ ಕರಡಿ ಬದಲಿಗೆ ಡಾ. ಬಸವರಾಜ್ ಕ್ಯಾವಟರ್‌ಗೆ ಬಿಜೆಪಿ ಟಿಕೆಟ್ ನೀಡಿದೆ.