ಬೆಂಗಳೂರು: ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಏ. 18 ರಂದು ಮೊದಲ ಹಂತದ ಚುನಾವಣೆ ನಡೆದರೆ ಏ.23 ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.
ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಜೀವ್ ಕುಮಾರ್ ಅವರು ಸುದ್ದಿಗೋಷ್ಠಿಯನ್ನು ನಡೆಸಿ ಮಾಹಿತಿಯನ್ನು ನೀಡಿದರು. ಕಳೆದ ಬಾರಿ ಏಪ್ರಿಲ್ 17 ರಂದು ಒಂದೇ ಹಂತದಲ್ಲಿ ನಡೆದಿತ್ತು.
ಏಪ್ರಿಲ್ 18ಕ್ಕೆ ಎಲ್ಲಿ?
ಉಡುಪಿ ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ.
ಏಪ್ರಿಲ್ 23ಕ್ಕೆ ಎಲ್ಲಿ?
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ,ಶಿವಮೊಗ್ಗ
ರಾಜ್ಯದ ಮತದಾರರ ಮಾಹಿತಿ
* ಒಟ್ಟು ಮತದಾರರು – 5.03 ಕೋಟಿ
* ಪುರುಷ ಮತದಾರರು – 2.54 ಕೋಟಿ
* ಮಹಿಳಾ ಮತದಾರರು – 2.98 ಕೋಟಿ
* ಇತರೆ ಮತದಾರರು – 4,718
* 8.25 ಲಕ್ಷ ಹೊಸ ಮತದಾರರು
* 58,186 ಮತಗಟ್ಟೆಗಳು
* 600 ಮಹಿಳಾ ಮತಗಟ್ಟೆಗಳು
* ವಿಶೇಷ ಚೇತನರಿಗೆ 28 ಮತಗಟ್ಟೆಗಳು
* 28 ಕ್ಷೇತ್ರಗಳ ಪೈಕಿ 7 ಮೀಸಲು ಕ್ಷೇತ್ರ (ಎಸ್‍ಸಿ – ವಿಜಯಪುರ, ಕಲಬುರಗಿ, ಚಿತ್ರದುರ್ಗ, ಚಾಮರಾಜನಗರ, ಕೋಲಾರ * ಎಸ್‍ಟಿ- ರಾಯಚೂರು, ಬಳ್ಳಾರಿ )
* ಅಭ್ಯರ್ಥಿ ತಲಾ ಅಭ್ಯರ್ಥಿಗೆ 70 ಲಕ್ಷ ವೆಚ್ಚಕ್ಕೆ ಅವಕಾಶ
ಚುನಾವಣಾ ಹಂತಗಳು
ಮೊದಲ ಹಂತ ಚುನಾವಣೆ – ಏಪ್ರಿಲ್ 11
ಎರಡನೇ ಹಂತದ ಚುನಾವಣೆ – ಏಪ್ರಿಲ್ 18
ಮೂರನೇ ಹಂತದ ಚುನಾವಣೆ – ಏಪ್ರಿಲ್ 23
ನಾಲ್ಕನೇ ಹಂತದ ಚುನಾವಣೆ – ಏಪ್ರಿಲ್ 29
ಐದನೇ ಹಂತದ ಚುನಾವಣೆ – ಮೇ 6
ಆರನೇ ಹಂತದ ಚುನಾವಣೆ – ಮೇ 16
ಏಳನೇ ಹಂತಚ ಚುನಾವಣೆ – ಮೇ 19
2014ರ ಚುನಾವಣೆಯ ಸಮಯದಲ್ಲಿ ಮಾರ್ಚ್ 5 ರಂದು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿತ್ತು. 9 ಹಂತದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿತ್ತು. ಮೊದಲ ಹಂತದ ಮತದಾನ ಏಪ್ರಿಲ್ 7 ರಂದು ನಡೆದಿದ್ದರೆ, ಕೊನೆಯ ಹಂತದ ಚುನಾವಣೆ ಮೇ 12 ರಂದು ನಡೆದಿತ್ತು. ಮಾರ್ಚ್ 16 ರಂದು ಫಲಿತಾಂಶ ಪ್ರಕಟವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv