ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳ ಬಿಡುಗಡೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಕ್ರಮೇಣ ವಿವಾದ ತಣ್ಣಗಾಗಿ ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ಬಗೊಂಡು ಅದೃಷ್ಟ ಪರೀಕ್ಷೆಯನ್ನು ಎದುರಿಸಿದವು. ಅವುಗಳ ಪಟ್ಟಿ ಈ ಕೆಳಗಿನಂತಿದೆ.
1. ಓರು ಅಡಾರ್ ಲವ್: ಫೆಬ್ರವರಿ 14ರಂದು ಕಣ್ಣ ಸನ್ನೆಯ ಮೂಲಕ ದೇಶದ ಗಮನ ಸೆಳೆದಿದ್ದ ಮಲಯಾಳಂ ಭಾಷೆಯ ಓರು ಅಡಾರ್ ಲವ್ ಕನ್ನಡಕ್ಕೆ ಡಬ್ಬ ಮಾಡಲಾಗಿತ್ತು. ಕಿರಿಕ್ ಲವ್ ಸ್ಟೋರಿ ಟೈಟಲ್ ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಓರು ಅಡಾರ್ ಲವ್ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಚಿತ್ರದಲ್ಲಿ ರೋಶನ್ ಅಬ್ದುಲ್ ಮತ್ತು ಪ್ರಿಯಾ ಪ್ರಕಾಶ್ ವಾರಿಯರ್ ಜೊತೆಯಾಗಿ ನಟಿಸಿದ್ದಾರೆ.
Advertisement
2. ವಿಶ್ವಾಸಂ: ಅಜಿತ್ ಕುಮರ್ ಮತ್ತು ನಯನತಾರಾ ನಟನೆಯ ತಮಿಳು ಸಿನಿಮಾ ‘ವಿಶ್ವಾಸಂ’ ಕನ್ನಡದಲ್ಲಿ ‘ಜಗಮಲ್ಲಾ’ ಟೈಟಲ್ ನಲ್ಲಿ ರಿಲೀಸ್ ಆಯ್ತು. ಮಾರ್ಚ್ 8ರಂದು ಈ ಸಿನಿಮಾ ತೆರೆಕಂಡಿತ್ತು.
Advertisement
Advertisement
3. ಕಾಂಚಣಾ-3: ಈ ವರ್ಷ ದಕ್ಷಿಣ ಭಾರತದಲ್ಲಿ ಸದ್ದು ಮಾಡಿದ್ದ ಚಿತ್ರಗಳಲ್ಲಿ ‘ಕಾಂಚಣಾ-3’ ಸಹ ಒಂದಾಗಿದೆ. ವಿಭಿನ್ನ ಮತ್ತು ವಿಶೇಷ ಕಥಾ ಹಂದರವುಳ್ಳ ಕಾಂಚಾಣ-3 ತಮಿಳುನಾಡಿನಲ್ಲಿ ತನ್ನ ಮುದ್ರೆಯನ್ನು ಒತ್ತಿತ್ತು. ಅದೇ ಟೈಟಲ್ ನಲ್ಲಿಯೇ ಕನ್ನಡ ಭಾಷೆಗೆ ಡಬ್ಬಗೊಂಡ ಕಾಂಚಾಣ-3, ಮೇ 1ರಂದು ರಿಲೀಸ್ ಆಗಿತ್ತು. ರಾಘವ್ ಲಾರೆನ್ಸ್, ವೇದಿಕಾ ನಟನೆ ಸಿನಿಮಾದಲ್ಲಿ ನಟಿಸಿದ್ದರು.
Advertisement
4. ರಂಗಸ್ಥಳಂ: ರಾಮಚರಣ್ ನಟನೆಯ ರಂಗಸ್ಥಳಂ ಜೂನ್ 12ರಂದು ಕನ್ನಡದಲ್ಲಿ ಕರ್ನಾಟಕ ಚಿತ್ರಮಂದಿರವನ್ನ ಪ್ರವೇಶಿಸಿತು. ಚಿತ್ರದಲ್ಲಿ ರಾಮಚರಣ್ ತೇಜ, ಸಮಂತ ಅಕ್ಕಿನೇನಿ, ಆದಿ ಪಿನಿಶೆಟ್ಟಿ, ಪ್ರಕಾಶ್ ರೈ, ಅನಸೂಯ ಭಾರಧ್ವಜ್ ಸೇರಿದಂತೆ ರಂಗಸ್ಥಲಂ ದೊಡ್ಡ ತಾರಾಗಣವನ್ನೇ ಹೊಂದಿತ್ತು.
5. ಡಿಯರ್ ಕಾಮ್ರೆಡ್: ಕನ್ನಡದ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಅಭಿನಯದ ತೆಲುಗಿನ ಡಿಯರ್ ಕಾಮ್ರೆಡ್ ಸಿನಿಮಾ ಕನ್ನಡಕ್ಕೆ ಡಬ್ಬ ಆಗಿತ್ತು. ಗೀತಾಗೋವಿಂದಂ ಯಶಸ್ಸಿನ ಬಳಿಕ ರಶ್ಮಿಕಾ ಮಂದಣ್ಣ ಮತ್ತು ವಿಜಯದೇವರಕೊಂಡ ಜೋಡಿ ಎರಡನೇ ಬಾರಿ ತೆರೆಯ ಮೇಲೆ ಒಂದಾಗಿತ್ತು. ಜುಲೈ 26 ರಂದು ಈ ಸಿನಿಮಾ ಅದೇ ಟೈಟಲ್ ಮೇಲೆ ಕನ್ನಡದಲ್ಲಿ ತೆರೆ ಕಂಡಿತ್ತು.
6. ಸೈರಾ ನರಸಿಂಹ ರೆಡ್ಡಿ: ಈ ವರ್ಷ ತೆರೆಕಂಡಿರುವ ದಕ್ಷಿಣ ಭಾರತದ ದೊಡ್ಡ ಬಜೆಟ್ ಸಿನಿಮಾ ತೆಲುಗಿನ ಸೈರಾ ನರಸಿಂಹ ರೆಡ್ಡಿ ಅಕ್ಟೋಬರ್ 2ರಂದು ಬಿಡುಗಡೆಯಾಗಿತ್ತು. ದಕ್ಷಿಣ ಭಾರತದ ಎಲ್ಲ ಭಾಷೆಗಳ ಸ್ಟಾರ್ ಗಳ ಸಂಗಮಕ್ಕೆ ಸೈರಾ ನರಸಿಂಹ ರೆಡ್ಡಿ ಸಾಕ್ಷಿಯಾಗಿತ್ತು. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್, ಕನ್ನಡದ ಮಾಣಿಕ್ಯ ಸುದೀಪ್ ಸೇರಿದಂತೆ ದೊಡ್ಡ ಕಲಾಬಳಗವನ್ನ ಚಿತ್ರ ಹೊಂದಿತ್ತು.
7. ಟರ್ಮಿನೇಟರ್ ಡಾರ್ಕ್ ಫೇಟ್: ಹಾಲಿವುಡ್ ಸಿನಿಮಾವೊಂದು ಇದೇ ಮೊದಲ ಬಾರಿಗೆ ಕನ್ನಡಕ್ಕೆ ಡಬ್ಬಗೊಂಡು ಕಿಚ್ಚ ಸುದೀಪ್ ಸಾರಥ್ಯದಲ್ಲಿ ಬಿಡುಗಡೆಗೊಂಡಿತ್ತು. ನವೆಂಬರ್ 1ರಂದು ಇಂಗ್ಲಿಷ್ ನ ‘ಟರ್ಮಿನೇಟರ್ ಡಾರ್ಕ್ ಫೇಟ್’ ರಿಲೀಸ್ ಆಗಿತ್ತು.
7. ದಬಾಂಗ್ 3: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ನಟನೆಯ ದಬಾಂಗ್-3 ಸಿನಿಮಾ ಈ ಬಾರಿ ಕನ್ನಡದಲ್ಲಿಯೂ ಡಿಸೆಂಬರ್ 21ರಂದು ರಿಲೀಸ್ ಆಗಿದೆ. ಮೊದಲ ಬಾರಿಗೆ ಕಿಚ್ಚ ಸುದೀಪ್ ಮತ್ತು ಸಲ್ಮಾನ್ ತೆರೆಯ ಮೇಲೆ ಒಂದಾಗಿದ್ದು, ಅಭಿಮಾನಿಗಳನ್ನು ಮೋಡಿ ಮಾಡುತ್ತಿದೆ. ಸುದೀಪ್ ಖಳನಾಯಕನಾಗಿ ಸಿನಿಮಾದಲ್ಲಿ ನಟಿಸಿದ್ದಾರೆ.