ಸಿಡ್ನಿ: ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್ ತಂಡದಲ್ಲಿ ಮಿಚೆಲ್ ಸ್ಟಾರ್ಕ್ ಮಿಂಚುಹರಿಸಿದರೆ, ಮಹಿಳಾ ವಿಭಾಗದಲ್ಲಿ ಅಲಿಸ್ಸಾ ಹೀಲಿ ಸಾಧನೆಯ ಶಿಖರವನ್ನೇರಿ ಈ ದಂಪತಿಗಳಿಬ್ಬರು ನೂತನ ದಾಖಲೆಯೊಂದನ್ನು ಬರೆದಿದ್ದಾರೆ.
Advertisement
ಹೌದು ದಂಪತಿಗಳಿಬ್ಬರೂ ಕೂಡ ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಶ್ರೇಷ್ಠ ಕ್ರೀಡಾಪಟುಗಳಾಗಿ ತಂಡಕ್ಕೆ ಕೊಡುಗೆ ನೀಡಿದ್ದಾರೆ. ಈ ಹಿಂದೆ 2019ರ ಪುರುಷರ ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಮಿಚೆಲ್ ಸ್ಟಾರ್ಕ್ ಬೌಲಿಂಗ್ ಮೂಲಕ ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲಲು ಸಹಕಾರಿಯಾಗಿದ್ದರು. ಇದೀಗ ಮಹಿಳಾ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಮಹಿಳಾ ತಂಡದಲ್ಲಿ ಅಲಿಸ್ಸಾ ಹೀಲಿ ಭರ್ಜರಿ ಬ್ಯಾಟಿಂಗ್ ಮೂಲಕ ತಂಡ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿ ಗಮನಸೆಳೆದಿದ್ದಾರೆ. ಇದನ್ನೂ ಓದಿ: ದಾಖಲೆಯ 7ನೇ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡ ಆಸೀಸ್ ಮಹಿಳೆಯರು
Advertisement
Advertisement
2019ರ ಪುರುಷರ ವಿಶ್ವಕಪ್ ಟೂರ್ನಿಯ 10 ಪಂದ್ಯಗಳಲ್ಲಿ ಒಟ್ಟು 27 ವಿಕೆಟ್ ಕಿತ್ತು ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದೀಗ 2022ರ ಮಹಿಳಾ ವಿಶ್ವಕಪ್‍ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಅಲಿಸ್ಸಾ ಹೀಲಿ 2 ಶತಕ ಮತ್ತು 2 ಅರ್ಧಶತಕ ಸಹಿತ 509 ರನ್ ಸಿಡಿಸಿ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ್ತಿಯಾಗಿ ಮೂಡಿಬಂದಿದ್ದಾರೆ. ಈ ಮೂಲಕ ದಂಪತಿ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಧೋನಿ ಸಿಕ್ಸರ್ ಬಾರಿಸಿದ ಬ್ಯಾಟ್
Advertisement
ಆಸ್ಟ್ರೇಲಿಯಾ ತಂಡಕ್ಕೆ ದಂಪತಿಗಳಿಬ್ಬರೂ ಕೂಡ ಹಲವು ವರ್ಷಗಳಿಂದ ಶ್ರೇಷ್ಟಮಟ್ಟದ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ಇವರಿಬ್ಬರ ಆಟ ಹೀಗೆ ಮುಂದುವರಿಯಲಿ ಇನ್ನಷ್ಟು ಉತ್ತಮ ಪ್ರದರ್ಶನದ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ನೆರವಾಗಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ.