ನವದೆಹಲಿ: 2019 ಲೋಕಸಭಾ ಚುನಾವಣೆಯ ಫಲಿತಾಂಶದ ಮುನ್ಸೂಚನೆ ಎಂದೇ ಕರೆಯಲಾಗುತ್ತಿರುವ ಪಂಚರಾಜ್ಯಗಳ ಚುನಾವಣೆಯಲ್ಲಿ ಈ ಬಾರಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ.
ಟೈಮ್ಸ್ ನೌ ವಾಹಿನಿ ಸಮೀಕ್ಷೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆದ್ದರೆ, ಮಧ್ಯ ಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದೆ.
Advertisement
Advertisement
ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ರಾಜಸ್ಥಾನ: 200 ವಿಧಾನಸಭಾ ಸ್ಥಾನಗಳ ಪೈಕಿ 75ರಲ್ಲಿ ಮಾತ್ರ ಬಿಜೆಪಿ ಗೆಲ್ಲಲಿದ್ದು, ಕಾಂಗ್ರೆಸ್ 115 ಹಾಗೂ ಇತರೇ 10 ಸ್ಥಾನಗಳು ಸಿಗಲಿದೆ. 2013 ರ ರಾಜಸ್ಥಾನ ವಿಧಾನಸಭೆಯಲ್ಲಿ 163 ಸ್ಥಾನಗಳನ್ನು ಪಡೆದು ಬಿಜೆಪಿ ಗೆದ್ದು ಬೀಗಿತ್ತು. ಉಳಿದಂತೆ 21 ಕಾಂಗ್ರೆಸ್, 15 ಸ್ಥಾನಗಳು ಇತರೆ ಪಡೆದುಕೊಂಡಿತ್ತು.
Advertisement
ಮಧ್ಯಪ್ರದೇಶ: ಕಳೆದ 15 ವರ್ಷಗಳಿಂದ ಮಧ್ಯಪ್ರದೇಶದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ವಿಧಾನಸಭೆಯ 230 ಸ್ಥಾನಗಳ ಪೈಕಿ ಸಿಎಂ ಶಿವರಾಜ್ ಸಿಂಗ್ ಚೌಹಣ್ ಮುಂದಾಳತ್ವದಲ್ಲಿ ಬಿಜೆಪಿ 142 ಸ್ಥಾನ ಪಡೆದು ಮತ್ತೆ ಸರ್ಕಾರ ರಚಿಸಲಿದೆ. ಕಾಂಗ್ರೆಸ್ 77, ಇತರೆ 11 ಸ್ಥಾನಗಳು ಲಭಿಸಲಿದೆ.
Advertisement
ಕಳೆದ ಬಾರಿ ಮಧ್ಯಪ್ರದೇಶದಲ್ಲಿ 165 ಸ್ಥಾನಗಳನ್ನು ಪಡೆದು ಭಾರೀ ಗೆಲುವು ಪಡೆದಿದ್ದ ಬಿಜೆಪಿ ಈ ಬಾರಿ ಕೆಲ ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಇದರ ಅಲ್ಪ ಲಾಭವನ್ನು ಕಾಂಗ್ರೆಸ್ ಪಡೆಯಲಿದೆ. 2013 ರ ಚುನಾವಣೆಯಲ್ಲಿ ಕೈ 58 ಹಾಗೂ ಇತರೇ 7 ಸ್ಥಾನಗಳು ಪಡೆದಿತ್ತು.
ಛತ್ತೀಸ್ಗಡ: ರಾಜ್ಯದಲ್ಲಿ ಒಟ್ಟು 90 ವಿಧಾನಸಭಾ ಸ್ಥಾನಗಳಿದ್ದು, 47 ರಲ್ಲಿ ಬಿಜೆಪಿ ಗೆದ್ದು ರಮಣ್ ಸಿಂಗ್ ನೇತೃತ್ವದಲ್ಲಿ ಅಧಿಕಾರ ಪಡೆಯಲಿದ್ದು, ಕಾಂಗ್ರೆಸ್ 33 ಗಳಿಸಿ ಮತ್ತೆ ಪ್ರತಿಪಕ್ಷ ಸ್ಥಾನದಲ್ಲಿ ಕೂರಲಿದೆ. ಉಳಿದಂತೆ 10 ಕ್ಷೇತ್ರಗಳು ಇತರೆ ಪಾಲಾಗಲಿದೆ ಎಂದು ತಿಳಿಸಿದೆ. 2013 ರಲ್ಲಿ ಚುನಾವಣೆಯಲ್ಲಿ ಬಿಜೆಪಿ 49, ಕಾಂಗ್ರೆಸ್ 39 ಹಾಗೂ 2 ಸ್ಥಾನಗಳು ಇತರೇ ಪಡೆದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv