ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಎಲ್ಲಾ ಕಡೆ ಅದರ ಬಿಸಿ ತಟ್ಟಿದೆ. ಈಗ ಈ ಚುನಾವಣೆಯ ಪರಿಣಾಮ ರಕ್ತ ನಿಧಿಗಳಿಗೂ ತಟ್ಟಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಪರಿಣಾಮದಿಂದಾಗಿ ರಕ್ತದ ಕೊರತೆ ಉಂಟಾಗಿದ್ದು, ರಾಜ್ಯದಲ್ಲಿ ರಕ್ತ ನಿಧಿಗಳಲ್ಲಿ ರಕ್ತವೇ ಸಿಗುತ್ತಿಲ್ಲ. ಇದರಿಂದ ರಾಜ್ಯಾದ್ಯಂತ ಶೇಕಡಾ 80% ಜನ ರಕ್ತದ ಸಿಗದೇ ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
ಚುನಾವಣೆಯಿಂದ ರಾಜಕೀಯ ನಾಯಕರು, ಗಣ್ಯರು, ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಗಣ್ಯರು ತಮ್ಮ ಹುಟ್ಟುಹಬ್ಬದ ಹೆಸರಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡುತ್ತಿದ್ದರು. ಈಗ ಈ ನೀತಿ ಸಂಹಿತೆಯಿಂದ ಗಣ್ಯರ ಹುಟ್ಟು ಹಬ್ಬಕ್ಕೂ ತಡೆಬಿದ್ದಿದ್ದು, ರಕ್ತದಾನ ಶಿಬಿರ ಆಯೋಜನೆಗೆ ನೀತಿ ಸಂಹಿತೆ ಅಡ್ಡಿ ಪಡಿಸಿದೆ. ಇದರಿಂದ ರೋಗಿಗಳು ರಕ್ತ ಸಿಗದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
ಇನ್ನು ಸಿನಿಮಾ ನಟ-ನಟಿಯರು ಕೂಡ ಚುನಾವಣಾ ಪ್ರಚಾರಕ್ಕಾಗಿ ತೊಡಗಿದ್ದಾರೆ. ಅಷ್ಟೇ ಅಲ್ಲದೇ ಸಂಘ ಸಂಸ್ಥೆಗಳು ಹಾಗೂ ಕಾರ್ಯಕರ್ತರು ಕೂಡ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಆದ್ದರಿಂದ ರಕ್ತದಾನ ಶಿಬಿರ ಆಯೋಜನೆಯಾಗುತ್ತಿಲ್ಲ. ರಾಷ್ಟ್ರೋತ್ಥಾನ ರಕ್ತ ನಿಧಿಯಲ್ಲಿ ತಿಂಗಳಿಗೆ ಸರಾಸರಿ 7 ಸಾವಿರಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹವಾಗುತ್ತಿತ್ತು. ಆದರೆ ಏಪ್ರಿಲ್‍ನಲ್ಲಿ ಕೇವಲ 2 ಸಾವಿರ ಯೂನಿಟ್ ರಕ್ತ ಸಂಗ್ರಹವಾಗಿದೆ.
Advertisement