Connect with us

Bengaluru City

ಟಾರ್ಗೆಟ್ ಕರ್ನಾಟಕ: ಹೇಗಿದೆ ಕರ್ನಾಟಕದ ಜನ.. ಮನ?

Published

on

ಬೆಂಗಳೂರು: ಇಡೀ ದೇಶದ ಗಮನ ಸೆಳೆದಿದ್ದ ಗುಜರಾತ್ ಫಲಿತಾಂಶ ಬಂದಾಯ್ತು. ಬಿಜೆಪಿ ಗೆದ್ದು ಮತ್ತೆ ಸರ್ಕಾರ ರಚಿಸುತ್ತಿದೆ. ಇದರ ನಂತರ ಮುಂದೇನು? ಅದುವೇ ಕರ್ನಾಟಕ. ರಾಷ್ಟ್ರಮಟ್ಟದಲ್ಲಿ ಈಗ ಕರ್ನಾಟಕ ಚುನಾವಣೆಯದ್ದೇ ಚರ್ಚೆ. ಮೂರು/ ನಾಲ್ಕು ತಿಂಗಳಿನಲ್ಲಿ ನಡೆಯಲಿರುವ ಚುನಾವಣೆಗೆ ಮೂರು ಪಕ್ಷಗಳಿಂದ ಭರ್ಜರಿ ತಯಾರಿ ನಡೆಯುತ್ತಿದೆ.

ಈ ಎಲ್ಲ ಕಾರಣಕ್ಕಾಗಿ ಗುಜರಾತ್ ಚುನಾವಣೆ ಬೆನ್ನಲ್ಲಿ `ಎಲೆಕ್ಷನ್ ಮೂಡ್ ಆಫ್ ಕರ್ನಾಟಕ’ ಹೇಗಿದೆ..? ಅನ್ನೋದು ಎಲ್ಲರ ಕುತೂಹಲ. ಇದನ್ನ ಅರಿಯೋ ಸಲುವಾಗಿ ನಿಮ್ಮ ಪಬ್ಲಿಕ್‍ಟಿವಿ ಫೇಸ್‍ಬುಕ್ ನಲ್ಲಿ ಮೆಗಾ ಆನ್‍ಲೈನ್ ಸಮೀಕ್ಷೆ ನಡೆಸಿದೆ. ಈ ಸರ್ವೇಯಲ್ಲಿ ಏನಿದೆ..? ಮೋದಿ ಹವಾ ವರ್ಕೌಟ್ ಆಗುತ್ತಾ? ಸಿದ್ದರಾಮಯ್ಯ-ಯಡಿಯೂರಪ್ಪ-ಕುಮಾರಸ್ವಾಮಿ ಅವರಿಗೆ ರಾಜ್ಯದ ಜನತೆಯ ಬೆಂಬಲ ಹೇಗಿದೆ? ಈ ಎಲ್ಲ ಮಾಹಿತಿಗಳನ್ನು  ನೀಡಲಾಗಿದೆ. ಸಂಜೆ 6 ಗಂಟೆಯ ವರೆಗೆ ಲಭ್ಯವಾದ ಮಾಹಿತಿ ಇಲ್ಲಿ ಪ್ರಕಟವಾಗಿದೆ.

1. ಕರ್ನಾಟಕದಲ್ಲಿ ಮೋದಿ ಹವಾ ವರ್ಕ್ ಔಟ್ ಆಗುತ್ತಾ..?
ಹೌದು – 63%
ಇಲ್ಲ – 37%

1 (ಎ). ಕರ್ನಾಟಕದಲ್ಲಿ ಮೋದಿ ಹವಾ ವರ್ಕ್ ಔಟ್ ಆಗುತ್ತಾ..? (ಎಸ್‍ಎಂಎಸ್ ರಿಸಲ್ಟ್)
ಹೌದು – 86%
ಇಲ್ಲ – 14%

2. ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರುತ್ತಾ..?
ಹೌದು – 56%
ಇಲ್ಲ – 44%

3. ಮೋದಿ ಅಶ್ವಮೇಧ ಕುದುರೆನಾ ಸಿದ್ದರಾಮಯ್ಯ ಕುಮಾರಸ್ವಾಮಿ ಕಟ್ಟಿ ಹಾಕ್ತಾರಾ..?
ಹೌದು – 42%
ಇಲ್ಲ – 58%

4. ಜನಿವಾರಧಾರಿ ರಾಹುಲ್ ಗಾಂಧಿ ಕರ್ನಾಟಕದಲ್ಲೂ ಮಂದಿರ ಸುತ್ತಿದ್ರೆ ವರ್ಕ್ ಔಟ್ ಆಗುತ್ತಾ..?
ಹೌದು – 17%
ಇಲ್ಲ – 83%

5. ಕರ್ನಾಟಕದಲ್ಲೂ ಮೋದಿಗೆ ರಾಹುಲ್ ಗಾಂಧಿ ಟಫ್ ಫೈಟ್ ಕೊಡ್ತಾರಾ..!?
ಹೌದು – 58%
ಇಲ್ಲ – 42%

6. ಕರ್ನಾಟಕದಲ್ಲಿ ನಡೆಯೋ ಚುನಾವಣೆ ಅಭಿವೃದ್ಧಿ ಆಧಾರಿತವೋ ಜಾತಿ ಆಧಾರಿತವೋ..?
ಅಭಿವೃದ್ಧಿ ಆಧಾರಿತ – 53%
ಜಾತಿ ಆಧಾರಿತ – 47%

7. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕಾ..?
ಹೌದು – 22%
ಇಲ್ಲ – 78%

8. ಹೆಚ್.ಡಿ. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲು ನಿಮ್ಮ ಬೆಂಬಲ ಇದೆಯಾ..?
ಹೌದು – 59%
ಇಲ್ಲ – 41%

9. ಬಿ.ಎಸ್. ಯಡಿಯೂರಪ್ಪ ಮತ್ತೆ ಸಿಎಂ ಆಗೋಕೆ ನಿಮ್ಮ ಸಹಮತ ಇದ್ಯಾ..?
ಹೌದು – 48%
ಇಲ್ಲ – 52%

10. ಸಿದ್ದರಾಮಯ್ಯ, ಬಿಎಸ್‍ವೈ, ಹೆಚ್‍ಡಿಕೆ ಬಿಟ್ಟು ಹೊಸಬರು ಸಿಎಂ ಆಗಬೇಕಾ..?
ಹೌದು – 62%
ಇಲ್ಲ – 38%

11. ಅತಂತ್ರ ಸ್ಥಿತಿ ನಿರ್ಮಾಣವಾದ್ರೆ ಹೆಚ್‍ಡಿಕೆ ಮನೆ ಬಾಗಿಲು ತಟ್ಟಬೇಕಾ ಮೋದಿ..?
ಹೌದು – 53%
ಇಲ್ಲ – 47%

Click to comment

Leave a Reply

Your email address will not be published. Required fields are marked *