ಬೆಂಗಳೂರು: ಚಾಮುಂಡೇಶ್ವರಿ, ವರುಣಾ, ಚನ್ನಪಟ್ಟಣದ ಬಳಿಕ ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿರುವ ಬಾಗಲಕೋಟೆಯ ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿಯ ಶ್ರೀರಾಮುಲು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಇಂದು ಕಾಂಗ್ರೆಸ್‍ನಿಂದ ಸಿಎಂ ಸಿದ್ದರಾಮಯ್ಯನವರು ನವರು ಸಾವಿರಾರು ಬೆಂಬಲಿಗರ ಜೊತೆ ರ್‍ಯಾಲಿ ನಡೆಸಿ ಬಾದಾಮಿಯಿಂದ ನಾಮಪತ್ರ ಸಲ್ಲಿಸಿದರು. ಡಾ.ದೇವರಾಜ್ ಪಾಟೀಲ್, ಚಿಮ್ಮನಕಟ್ಟಿ, ಉಸ್ತುವಾರಿ ಸಚಿವ ತಿಮ್ಮಾಪೂರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್ ಜೊತೆಗಿದ್ದರು.
Advertisement
ನಾಮಪತ್ರ ಸಲ್ಲಿಕೆಗೆ ಮುನ್ನ ಬನಶಂಕರಿ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ, ಈ ಭಾಗದ ಜನರ ಪ್ರೀತಿಯ ಒತ್ತಡಕ್ಕೆ ಮಣಿದು ಹೈಕಮಾಂಡ್ ಸೂಚನೆಯಂತೆ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು.
Advertisement
ಇದಕ್ಕೂ ಮೊದಲು, ಆಂಜನೇಯ, ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಶ್ರೀರಾಮುಲು, ಅಪಾರ ಬೆಂಬಲಿಗರ ಜೊತೆ ರೋಡ್ ಶೋ ನಡೆಸಿ, ನಾಮಪತ್ರ ಸಲ್ಲಿಸಿದ್ರು. ಬಿಜೆಪಿಯಲ್ಲಿ ಅಚ್ಚರಿ ಎಂಬಂತೆ ರಾಮುಲು ಜೊತೆಗೆ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಮಹಾಂತೇಶ್ ಮಮದಾಪುರ್ ಸಹ ನಾಮಪತ್ರ ಸಲ್ಲಿಕೆ ಮಾಡಿದ್ದು. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಂಸದ ಗದ್ದಿಗೌಡರ್ ಜೊತೆಗಿದ್ದರು.
Advertisement
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಶ್ರೀರಾಮುಲು ಬಾದಾಮಿ ಮಹಾಭಾರತದಲ್ಲಿ ಗೆಲ್ಲೋದು ನಾವೇ ಅಂತ ಹೇಳಿದರು. ಸಿದ್ದರಾಮಯ್ಯಗೆ ಚಾಮುಂಡೇಶ್ವರಿ, ಬನಶಂಕರಿ ಇಬ್ಬರ ಆಶೀರ್ವಾದ ಸಿಗಲ್ಲ ಅಂತ ಯಡಿಯೂರಪ್ಪ ಹೇಳಿದರು.
Advertisement
ರಾಮುಲು ನಾಮಪತ್ರ ಸಲ್ಲಿಸಿ ವಾಪಸ್ ಬರುವಾಗ ಸಿಎಂ ನಾಮಪತ್ರ ಸಲ್ಲಿಕೆಗೆ ತೆರಳಿದ್ರು. ಈ ವೇಳೆ, ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು ಮುಖಾಮುಖಿಯಾದ್ರು. ಎರಡೂ ಕಡೆ ಕಾರ್ಯಕರ್ತರ ಜೈಕಾರ, ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಸಿಎಂ ಪ್ಲಸ್, ಮೈನಸ್ ಏನು?
ಬಾದಾಮಿಯಲ್ಲಿ ಕುರುಬ ಸಮುದಾಯದ 46 ಸಾವಿರ ಮತದಾರರು ಇದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಸಹಾಯ ಆಗಬಹುದು. ಸಿದ್ದರಾಮಯ್ಯ ಕಾಂಗ್ರೆಸ್‍ನ ನೇತೃತ್ವ ವಹಿಸಿ ಮುಖ್ಯಮಂತ್ರಿ ಅಭ್ಯರ್ಥಿ ಆಗಿರುವುದು.
ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದ ಮತಗಳು ಕೂಡ ನಿರ್ಣಾಯಕವಾಗಿವೆ. ಕಾಂಗ್ರೆಸ್‍ನಲ್ಲಿ ಇಬ್ಬರು ಟಿಕೆಟ್ ಆಕಾಂಕ್ಷಿಗಳ ಆಂತರಿಕ ಕಲಹ. ಬಾದಾಮಿ ಸ್ಪರ್ಧೆ ಬಗ್ಗೆ ಕಡೆ ಕ್ಷಣದವರೆಗೂ ಗೊಂದಲ ಸೃಷ್ಟಿಯಾಗಿದ್ದು ಸ್ವಲ್ಪ ಹಿನ್ನಡೆಯಾಗಬಹುದು.
ಶ್ರೀರಾಮುಲು ಪ್ಲಸ್, ಮೈನಸ್ ಏನು?
ವಾಲ್ಮೀಕಿ ಸಮುದಾಯದ 13 ಸಾವಿರ ಮತಗಳು, ಎಸ್ಟಿ ಸಮುದಾಯದ 25,000 ಮತಗಳು ನಿರ್ಣಾಯಕವಾಗಿವೆ. ಪ್ರತ್ಯೇಕ ಲಿಂಗಾಯತ ಧರ್ಮ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಪ್ರಬಲವಾಗಿರುವ ಕಾರಣ ಶ್ರೀರಾಮುಲು ಅವರಿಗೆ ಸಹಾಯವಾಗಬಹುದು.
ಸಿದ್ದರಾಮಯ್ಯ ಮುಖ್ಯಮಂತ್ರಿ ಅಭ್ಯರ್ಥಿ ಜೊತೆಗೆ ಕುರುಬ ಸಮುದಾಯದ ಮತದಾರರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಜೆಪಿಯಲ್ಲಿ ಕಡೆ ಕ್ಷಣದವರೆಗೂ ಆಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಮೂಡಿದ್ದು ಹಿನ್ನಡೆಯಾಗಬಹುದು.