ಬೆಂಗಳೂರು: ಕರ್ನಾಟಕ ಕುರುಕ್ಷೇತ್ರಕ್ಕೆ ನಾಡಿದ್ದೇ ನಿರ್ಣಾಯಕ ದಿನ. ಶನಿವಾರ ರಾಜ್ಯದ 223 ಕ್ಷೇತ್ರಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಲಿದೆ. ಮತದಾರರ ಅನುಕೂಲಕ್ಕಾಗಿ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಹೀಗಾಗಿ, ಇವತ್ತು ಸಂಜೆ 6 ಗಂಟೆಗೇ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ.
ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶ ಇದೆ. ಅಷ್ಟೇ ಅಲ್ಲದೇ ಕ್ಷೇತ್ರಕ್ಕೆ ಸಂಬಂಧ ಇಲ್ಲದವರು ಕ್ಷೇತ್ರ ಬಿಟ್ಟು ಹೊರ ನಡೆಯಬೇಕಿದೆ. ಹೀಗಾಗಿ ರಾಹುಲ್ ಗಾಂಧಿ ಸೇನೆ, ಅಮಿತ್ ಶಾ ಬ್ರಿಗೇಡ್ ಸೇರಿದಂತೆ ಪ್ರಚಾರಕ್ಕೆ ಬಂದಿದ್ದ ಕೇಂದ್ರ ನಾಯಕರು ಕರ್ನಾಟಕವನ್ನು ತೊರೆದಿದ್ದಾರೆ.
Advertisement
ಅಮಿತ್ ಶಾ, ಬಿಎಸ್ ಯಡಿಯೂರಪ್ಪ ಬಾದಾಮಿಯಲ್ಲಿ ಪ್ರಚಾರ ನಡೆಸಿದರೆ, ರಾಹುಲ್ ಗಾಂಧಿ ಬೆಂಗಳೂರಿನ ಸುದ್ದಿಗೋಷ್ಠಿ ನಡೆಸಿದರು. ಎಚ್‍ಡಿಕೆ ಬೆಂಗಳೂರಿನಲ್ಲಿ ಪ್ರಚಾರ ನಡೆಸಿದರು. ಅಮಿತ್ ಶಾ ಬೆಂಗಳೂರಿನಿಂದ ತಿರುಪತಿಗೆ ತೆರಳಿದರು.
Advertisement
ಮೇ 12ರ ಮಧ್ಯರಾತ್ರಿವರೆಗೆ ರಾಜ್ಯಾದ್ಯಂತ ನಿಷೇಧಾಜ್ಞೆ ವಿಧಿಸಲಾಗಿದೆ. ಮದ್ಯಕ್ಕೆ ಬ್ರೇಕ್ ಹಾಕಲಾಗಿದ್ದು, ಸಭೆ ಸಮಾರಂಭ ನಡೆಸುವಂತಿಲ್ಲ. ಮತದಾರರ ಮೇಲೆ ಒತ್ತಡ ಮಾಡುವಂತಿಲ್ಲ. ಇನ್ನು, ಬೆಂಗಳೂರು ಸುತ್ತಮುತ್ತ ಮೇ 13ರ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ. ಜೊತೆಗೆ, ರಾಜಕೀಯ ಚರ್ಚೆ, ಚುನಾವಣಾ ಸಮೀಕ್ಷೆ ಪ್ರಸಾರ ಮಾಡುವಂತಿಲ್ಲ ಅಂತ ಮಾಧ್ಯಮಕ್ಕೂ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ. ಇನ್ನು, ಇಲ್ಲಿವರಗೆ 80.91 ಕೋಟಿ ಹಣ ಸೀಜ್ ಮಾಡಿಕೊಂಡಿರೋದಾಗಿ ಎಲೆಕ್ಷನ್ ಕಮಿಷನ್ ಹೇಳಿದೆ.
Advertisement
ರಾಜ್ಯದಲ್ಲಿ ಮತದಾನದ ಜಾಗೃತಿಗೆ ಚುನಾವಣಾ ಆಯೋಗ ಹಲವು ಕ್ರಮ ಕೈಗೊಂಡಿದೆ. ಅದರಂತೆ, ಮುಖ್ಯವಾಗಿ ವೋಟರ್ ಐಡಿ ಇಲ್ಲವಾದಲ್ಲಿ ಏನ್ ಮಾಡೋದು ಅಂತ ತಲೆ ಮೇಲೆ ಕೈ ಹೊತ್ತು ಕೂರುವಂತಿಲ್ಲ. ಯಾಕಂದ್ರೆ, ಓಟರ್ ಐಡಿ ಇಲ್ಲದಿದ್ದರೂ ವೋಟ್ ಮಾಡಬಹುದು. ಅದಕ್ಕೆ ನಿಮ್ಮ ಬಳಿ ಈ ಕೆಳಗಿನ ದಾಖಲೆಗಳು ಇದ್ದರೆ ಸಾಕು. ಈ 12 ದಾಖಲೆಗಳ ಪೈಕಿ ಒಂದನ್ನು ತೋರಿಸಿ ಮತದಾನ ಮಾಡಬಹುದು
Advertisement
12 ದಾಖಲೆಗಳು
1. ಚುನಾವಣಾ ಆಯೋಗದ ವತಿಯಿಂದ ನೀಡುವ ದೃಢೀಕೃತ ಫೋಟೋ ಓಟರ್ ಸ್ಲಿಪ್ಸ್
3. ಡ್ರೈವಿಂಗ್ ಲೈಸೆನ್ಸ್
3. ಪಾನ್ ಕಾರ್ಡ್
4. ಆಧಾರ್ ಕಾರ್ಡ್
5. ಪಾಸ್‍ಪೋರ್ಟ್
6. ಫೋಟೋವುಳ್ಳ ಪಿಂಚಣಿ ದಾಖಲೆ
7. ಬ್ಯಾಂಕ್/ಪೋಸ್ಟ್ ಆಫೀಸ್‍ನ ಫೋಟೋ ಇರುವ ಪಾಸ್‍ಬುಕ್
8. ಎಂನರೇಗಾ ಜಾಬ್ ಕಾರ್ಡ್
9. ಆರೋಗ್ಯವಿಮಾ ಸ್ಮಾರ್ಟ್ ಕಾರ್ಡ್ (ಕಾರ್ಮಿಕರ ಸಚಿವಾಲಯದ ಯೋಜನೆಯಡಿ ನೀಡಿರುವುದು)
10. ಎನ್‍ಪಿಆರ್ ಅಡಿ ಆರ್‍ಜಿಐ ನೀಡಿರುವ ಸ್ಮಾರ್ಟ್ ಕಾರ್ಡ್
11. ಕೇಂದ್ರ/ರಾಜ್ಯ ಸರ್ಕಾರದ ಹಾಗೂ ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಪಿಎಸ್ಯು/ಪಬ್ಲಿಕ್ ಲಿಮಿಟೆಡ್ ಕಂಪನಿಗಳು ತಮ್ಮ ಸಿಬ್ಬಂದಿಗೆ ನೀಡಿರುವ ಫೋಟೋ ಗುರುತಿನ ಚೀಟಿ
12. ಸಂಸದರು/ವಿಧಾನಸಭಾ/ವಿಧಾನ ಪರಿಷತ್ತಿನ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ