ಬೆಂಗಳೂರು: ಅದೊಂದು ತುಂಬಾ ರೋಮಾಂಚನಕಾರಿ ಪಂದ್ಯ. ಪ್ರತಿಕ್ಷಣಕ್ಕೂ ಎದೆ ಬಡಿತ ಹೆಚ್ಚುತ್ತಿತ್ತು. ಕಳೆದ ಎರಡು ವರ್ಷಗಳಿಂದ ಉತ್ತಮ ಪದರ್ಶನ ನೀಡಿ, ಚಿನ್ನಕ್ಕೆ ಕೊರಳೊಡ್ಡಿದ್ದೇವು. ಆದರೆ ಈ ಬಾರಿ ಬೆಳ್ಳಿ ಪಡೆದಿದ್ದು ಸ್ವಲ್ಪ ಬೇಸರ ತಂದಿದೆ ಎಂದು ಏಷ್ಯನ್ ಗೇಮ್ಸ್ 2018ರ ಬೆಳ್ಳಿ ಪದಕ ವಿಜೇತ ಭಾರತದ ಕಬಡ್ಡಿ ಟೀಂನ ಉಷಾರಾಣಿ ಹೇಳಿದ್ದಾರೆ.
ಇಂದು ಉಷಾರಾಣಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಪೊಲೀಸ್ ಪಡೆ, ಕುಟುಂಬಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಷಾರಾಣಿ ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ತಮ್ಮ ಸಾಧನೆಯ ಹೆಜ್ಜೆಗಳನ್ನು ಹಂಚಿಕೊಂಡರು.
ನಾನು ಕ್ರೀಡಾ ಕೋಟಾದಲ್ಲಿ ಪೊಲೀಸ್ ವೃತ್ತಿಗೆ ಸೇರಿದ್ದೆ, ಹೀಗಾಗಿ ಬೆಳಗ್ಗೆ ಹಾಗೂ ಸಂಜೆ ಅಭ್ಯಾಸ ಮಾಡಲು ಸಮಯ ಸಿಗುತ್ತಿತ್ತು. ಏಷ್ಯನ್ ಗೇಮ್ಸ್ 2018ರಲ್ಲಿ ಆಡಲು ನನ್ನನ್ನು ಕಬಡ್ಡಿ ಫೆಡರೇಷನ್ ಕರೆಸಿಕೊಂಡಿತ್ತು. ಅಲ್ಲಿ ಕಳೆದ ಆರು ತಿಂಗಳಿನಿಂದ ಅಭ್ಯಾಸ ಮಾಡುತ್ತಿದ್ದೇವು. ಗೇಮ್ಸ್‍ನ ಪ್ರತಿ ಪಂದ್ಯವೂ ರೋಮಾಚಕವಾಗಿತ್ತು. ಭಾರತ ಕಬಡ್ಡಿ ಟೀಂ ಕಳೆದ ಎರಡು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತ್ತು. ಹೀಗಾಗಿ ಈ ಬಾರಿ ಚಿನ್ನದ ಪದಕ ಗೆಲ್ಲುವುದು ಖಚಿತ ಎಂದುಕೊಂಡಿದ್ದೇವು. ಆದರೆ ಬೆಳ್ಳಿಯನ್ನು ಪಡೆಯಬೇಕಾಯಿತು ಎಂದು ಉಷಾ ತಮ್ಮ ಸಾಧನೆಯನ್ನು ತೆರೆದಿಟ್ಟರು. ಇದನ್ನು ಓದಿ: ಏಷ್ಯನ್ ಗೇಮ್ಸ್ 2018: ಕಬ್ಬಡ್ಡಿಯಲ್ಲಿ ಬೆಳ್ಳಿ ಪದಕ ಪಡೆದ ಕನ್ನಡತಿ
ಉಷಾರಾಣಿ ಕಬಡ್ಡಿಗೆ ಸೇರುವುದಾಗಿ ಕೇಳಿಕೊಂಡಿದ್ದಳು. ನಾನು ಕೂಡಾ ಕಬಡ್ಡಿ ಆಟಗಾರನಾಗಿದ್ದರಿಂದ ಪುತ್ರಿಗೆ ತರಬೇತಿ ನೀಡಲು ಪ್ರಾರಂಭಿಸಿದೆ. ನನ್ನ ಐದು ಜನ ಮಕ್ಕಳು ಕಬಡ್ಡಿ ಆಟಗಾರರು. ಮಗಳು ಬೆಳ್ಳಿ ಪದಕ ತಂದಿದ್ದು ತುಂಬಾ ಖುಷಿ ತಂದಿದೆ ಎಂದು ಉಷಾರಾಣಿ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv