ನವದೆಹಲಿ: ಇಡೀ ದೇಶದ ಕುತೂಹಲ ಕೆರಳಿಸಿದ್ದ ಗುಜರಾತ್ ಫಲಿತಾಂಶ ಹೊರಹೊಮ್ಮಿದೆ. ಗುಜರಾತ್‍ನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರಿದೆ. ಆದ್ರೆ, ಕಳೆದ ಬಾರಿಗೆ ಹೋಲಿಸಿದ್ರೆ ಈ ಬಾರಿಯ ಗೆಲುವು ಭರ್ಜರಿಯಾಗಿಲ್ಲ.
182 ಕ್ಷೇತ್ರಗಳಲ್ಲಿ 99 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಸರ್ಕಾರ ರಚನೆಗೆ ಯಾವುದೇ ಸಮಸ್ಯೆ ಇಲ್ಲ. ಹಾಗಂದ ಮಾತ್ರಕ್ಕೆ ಬಿಜೆಪಿ ಖುಷಿ ಪಡುವಂತ್ತಿಲ್ಲ. ಯಾಕಂದ್ರೆ, ಕಾಂಗ್ರೆಸ್ ಭಾರೀ ಪೈಪೋಟಿಯನ್ನೇ ನೀಡಿದೆ. ಕಳೆದ ಮೂರು ದಶಕಗಳಲ್ಲಿಯೇ ಈ ಬಾರಿಯ ಫಲಿತಾಂಶ ಕಾಂಗ್ರೆಸ್‍ಗೆ ಅದ್ವಿತೀಯ ಸಾಧನೆಯೇ ಸರಿ.
Advertisement
ಒಟ್ಟು ಕ್ಷೇತ್ರ – 182
ಸರಳ ಬಹುಮತ – 92
ಪಕ್ಷ 2017 2012 ವ್ಯತ್ಯಾಸ
ಬಿಜೆಪಿ 99 115 – 16
ಕಾಂಗ್ರೆಸ್ 80 61 + 19
ಇತರೆ 03 06 – 03
Advertisement
ಗುಜರಾತ್‍ನ ವಲಯವಾರು ಫಲಿತಾಂಶ ಹೇಗಿದೆ?
* ಉತ್ತರ ಗುಜರಾತ್ – 53 ಸ್ಥಾನ ಬಿಜೆಪಿ- 30, ಕಾಂಗ್ರೆಸ್- 23
* ಸೌರಾಷ್ಟ್ರ-ಕಚ್ – 54 ಸ್ಥಾನ ಬಿಜೆಪಿ- 23, ಕಾಂಗ್ರೆಸ್ – 30, ಇತರೆ – 01
* ದಕ್ಷಿಣ ಗುಜರಾತ್ – 35 ಸ್ಥಾನ ಬಿಜೆಪಿ- 24, ಕಾಂಗ್ರೆಸ್- 11
* ಮಧ್ಯ ಗುಜರಾತ್ – 40 ಸ್ಥಾನ ಬಿಜೆಪಿ- 22, ಕಾಂಗ್ರೆಸ್- 16, ಇತರೆ – 02
Advertisement
ಗುಜರಾತ್ ನಗರ:
ನಗರವಾರು ಫಲಿತಾಂಶ – 55 ಸ್ಥಾನ ಬಿಜೆಪಿ- 46 , ಕಾಂಗ್ರೆಸ್ – 09
ಅಹಮದಾಬಾದ್: ಬಿಜೆಪಿ – 16, ಕಾಂಗ್ರೆಸ್ – 05
ರಾಜ್‍ಕೋಟ್ : ಬಿಜೆಪಿ – 06, ಕಾಂಗ್ರೆಸ್ – 02
ಸೂರತ್ : ಬಿಜೆಪಿ – 15, ಕಾಂಗ್ರೆಸ್ – 01
ವಡೋದರ : ಬಿಜೆಪಿ – 09, ಕಾಂಗ್ರೆಸ್ – 01
Advertisement
ಗುಜರಾತ್ ಗ್ರಾಮೀಣ
ಗ್ರಾಮೀಣ ಭಾಗ ಒಟ್ಟು 127 ಸ್ಥಾನ ಬಿಜೆಪಿ 56, ಕಾಂಗ್ರೆಸ್ – 71
ಜಯಗಳಿಸಿದ ನಾಯಕರು:
ವಿಜಯರೂಪಾನಿ, ಬಿಜೆಪಿ – ರಾಜ್‍ಕೋಟ್ ಪಶ್ಚಿಮ
ನಿತಿನ್ ಪಟೇಲ್, ಬಿಜೆಪಿ – ಮಹೆಸಾನ
ಜಿಗ್ನೇಶ್ ಮೇವಾನಿ, ಪಕ್ಷೇತರ – ವಡಗಾಂವ್ (ಕಾಂಗ್ರೆಸ್ ಬೆಂಬಲಿತ)
ಅಲ್ಪೇಶ್ ಠಾಕೂರ್, ಕಾಂಗ್ರೆಸ್ – ರಾಧನ್‍ಪುರ
ಸೋತ ನಾಯಕರು:
ಅರ್ಜುನ್ ಮೊಧ್ವಾಡಿಯಾ, ಕಾಂಗ್ರೆಸ್ – ಪೋರ್‍ಬಂದರ್
ಶಕ್ತಿಸಿಂಘ್ ಗೋಯಲ್, ಕಾಂಗ್ರೆಸ್ – ಮಾಂಡ್ವಿ
ಸಿದ್ದಾರ್ಥ್ ಪಟೇಲ್, ಕಾಂಗ್ರೆಸ್ – ದಾಬೋಯ್
ಇಂದ್ರನೀಲ್ ರಾಜಗುರು, ಕಾಂಗ್ರೆಸ್ – ರಾಜ್‍ಕೋಟ್ ಪಶ್ಚಿಮ
ಯಾವ ವರ್ಷ ಬಿಜೆಪಿ ಎಷ್ಟು ಸ್ಥಾನ ಗೆದ್ದಿದೆ?
1995 – 121
2002 – 127
2007 – 117
2012 – 115
ಕೈಗೆ ಮುಖಭಂಗ:
ಹಿಮಾಚಲ ಪ್ರದೇಶದಲ್ಲಿ ಆಡಳಿತರೂಢ ಕಾಂಗ್ರೆಸ್‍ಗೆ ಭಾರೀ ಮುಖಭಂಗವಾಗಿದೆ. ಜನಾಕ್ರೋಶಕ್ಕೆ ಕಾಂಗ್ರೆಸ್ ಬಲಿಯಾಗಿದ್ದು, ಬಿಜೆಪಿ ಅಧಿಕಾರಕ್ಕೇರಿದೆ. ಈ ಮೂಲಕ, ಬಿಜೆಪಿ ಮತ್ತು ಎನ್‍ಡಿಎ ಮಿತ್ರಕೂಟ ಇರೋ ರಾಜ್ಯಗಳ ಸಾಲಿಗೆ 19ನೇ ರಾಜ್ಯವಾಗಿ ಹಿಮಾಚಲ ಪ್ರದೇಶ ಸೇರಿದೆ. ಬಿಜೆಪಿ ಸಿಎಂ ಅಭ್ಯರ್ಥಿ ಪ್ರೇಮ್‍ಕುಮಾರ್ ಧುಮಾಲ್ ಸೋಲನ್ನ ಕಂಡಿದ್ರೆ, ಕಾಂಗ್ರೆಸ್‍ನ ವೀರಭದ್ರ ಸಿಂಗ್ ಜಯ ಸಾಧಿಸಿದ್ದಾರೆ. ಇನ್ನು
ಒಟ್ಟು ಕ್ಷೇತ್ರ – 68
ಸರಳ ಬಹುಮತ – 35
ಪಕ್ಷ 2017 2012 ವ್ಯತ್ಯಾಸ
ಬಿಜೆಪಿ 44 26 + 17
ಕಾಂಗ್ರೆಸ್ 21 36 – 15
ಇತರೆ 03 06 – 2