2019ರ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಇದೇ ತಿಂಗಳ 18 ಮತ್ತು 23ರಂದು ಚುನಾವಣೆ ನಡೆಯಲಿದೆ. 2014ರಲ್ಲಿ ಕರ್ನಾಟಕದ ಲೋಕ ಅಖಾಡದಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಹತ್ತು ಅಭ್ಯರ್ಥಿಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
1. ಬಿ.ಎಸ್.ಯಡಿಯೂರಪ್ಪ: 2014 ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು, ಬರೋಬ್ಬರಿ 6,06,216 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದರು. ಎದುರಾಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಜುನಾಥ್ ಭಂಡಾರಿ 2,42,911 ಮತ ಪಡೆದಿದ್ದರು. ಈ ಮೂಲಕ 3,63,305(ಶೇ.32.38) ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
Advertisement
2. ಅನಂತ್ ಕುಮಾರ್: ಬೆಂಗಳೂರು ದಕ್ಷಿಣ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅವರು 6,33,816 ಮತಗಳನ್ನು ಪಡೆದಿದ್ದರು. ಇವರ ಎದುರಾಳಿ ಕಾಂಗ್ರೆಸ್ ಪಕ್ಷದ ನಂದನ್ ನಿಲೇಕಣಿ 4,05,241 ಮತ ಪಡೆದಿದ್ದರು. ಅನಂತ್ ಕುಮಾರ್ 2,28,515(ಶೇ.20.66) ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ಪಡೆದಿದ್ದರು.
Advertisement
Advertisement
3. ಡಿ.ವಿ.ಸದಾನಂದ ಗೌಡ:ಬೆಂಗಳೂರು ಉತ್ತರ ಸಾಮಾನ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಡಿ.ವಿ.ಸದಾನಂದ ಗೌಡ ಅವರು 7,18,326 ಮತಗಳನ್ನು ಪಡೆದು ಜಯ ಪಡೆದರೆ, ಕಾಂಗ್ರೆಸ್ ಪಕ್ಷದ ಸಿ.ನಾರಾಯಣಸ್ವಾಮಿ 4,88,562 ಮತ ಪಡೆದು 2,29,764 (16.9%) ಮತಗಳ ಅಂತರದಿಂದ ಸೋಲುಂಡಿದ್ದರು.
Advertisement
4. ಶೋಭಾ ಕರಂದ್ಲಾಜೆ:ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಶೋಭಾ ಕರಂದ್ಲಾಜೆ 5,81,168 ಪಡೆದು ಗೆಲುವು ಪಡೆದಿದ್ದರು. ಕಾಂಗ್ರೆಸ್ ಪಕ್ಷದ ಎದುರಾಳಿ ಜಯಪ್ರಕಾಶ್ ಹೆಗ್ಡೆ 3,99,525 ಮತ ಬಿದ್ದಿತ್ತು. ಈ ಮೂಲಕ ಕರಂದ್ಲಾಜೆ ಅವರು 1,81,643(ಶೇ.17.70) ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
5. ಅನಂತಕುಮಾರ್ ಹೆಗ್ಡೆ: ಉತ್ತರ ಕನ್ನಡ-ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಬಿಜೆಪಿಯ ಅನಂತಕುಮಾರ್ ಹೆಗ್ಡೆ 5,46,939 ಮತ ಪಡೆದು ಗೆಲುವು ಪಡೆದಿದ್ದರು. ಕಾಂಗ್ರೆಸ್ ಪಕ್ಷದ ಪ್ರಶಾಂತ್ ಆರ್. ದೇಶಪಾಂಡೆ 4,06,239 ಮತ ಗಳಿಸಿ 1,40,700(ಶೇ.14.29) ಮತಗಳ ಅಂತರದಲ್ಲಿ ಸೋತಿದ್ದರು.
6. ಪಿ.ಸಿ.ಮೋಹನ್: ಬೆಂಗಳೂರು ಸೆಂಟ್ರಲ್-ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಪಿಸಿ ಮೋಹನ್ 5,57,130 ಮತ ಪಡೆದು ಕಾಂಗ್ರೆಸ್ ಪಕ್ಷದ ರಿಜ್ವಾನ್ ಅರ್ಷದ್ ವಿರುದ್ಧ ಗೆಲುವು ಪಡೆದಿದ್ದರು. ಪರಿಣಾಮ 4,19,630 ಮತ ಪಡೆದಿದ್ದ ರಿಜ್ವಾನ್ 1,37,500(ಶೇ.12.90) ಮತಗಳ ಅಂತರದಿಂದ ಸೋಲುಂಡಿದ್ದಾರೆ.
7. ಧ್ರುವ ನಾರಾಯಣ್: ಚಾಮರಾಜನಗರ ಎಸ್‍ಸಿ ಮೀಸಲು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ 5,67,782 ಮತ ಪಡೆದಿದ್ದು, ಬಿಜೆಪಿ ಎ.ಆರ್.ಕೃಷ್ಣಮೂರ್ತಿ ಅವರ ವಿರುದ್ಧ 1,41,182 ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಬಿಜೆಪಿಯ ಅಭ್ಯರ್ಥಿ 4,26,600(ಶೇ.12.60) ಮತಗಳಿಂದ ಸೋತಿದ್ದರು.
8. ನಳಿನ್ ಕುಮಾರ್ ಕಟೀಲ್: ದಕ್ಷಿಣ ಕನ್ನಡ (ಮಂಗಳೂರು) ಸಾಮಾನ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ 6,42,739 ಮತ ಪಡೆದು ಜಯ ಪಡೆದರೆ, ಕಾಂಗ್ರೆಸ್‍ನ ಜನಾರ್ದನ ಪೂಜಾರಿ 4,99,030 ಮತ ಪಡೆದು ಸೋಲುಂಡಿದ್ದರು. ಕಟೀಲ್ ಅವರಿಗೆ 1,43,709(ಶೇ.11.97) ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
9. ಪ್ರಹ್ಲಾದ್ ಜೋಶಿ: ಧಾರವಾಡ-ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಬಿಜೆಪಿ ಪಕ್ಷದ ಪ್ರಹ್ಲಾದ್ ಜೋಶಿ 5,45,395 ಮತ ಪಡೆದು ಜಯಗಳಿಸಿದ್ದರು. ಇವರ ಎದುರಾಳಿ ವಿನಯ್ ಕುಲಕರ್ಣಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ 4,31,738 ಮತ ಪಡೆದಿದ್ದರು. ಪರಿಣಾಮ 1,13,657(ಶೇ.11.05) ಮತಗಳ ಅಂತರದ ಜಯ ಜೋಶಿ ಅವರಿಗೆ ಲಭಿಸಿತ್ತು.
10. ಪಿ.ಸಿ.ಗದ್ದಿಗೌಡರ್: ಬಾಗಲಕೋಟ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್ 5,71,548 ಮತ ಪಡೆದು ಕಾಂಗ್ರೆಸ್ ನ ಅಜಯ್ ಕುಮಾರ್ ಸರ್ ನಾಯ್ಕ್ ಅವರನ್ನು ಸೋಲಿಸಿದ್ದರು. ಅಜಯ್ ಕುಮಾರ್ ಸರ್ ನಾಯ್ಕ್ 4,54,988 ಮತಗಳನ್ನು ಪಡೆದಿದ್ದರು. ಗದ್ದಿಗೌಡರು 1,16,560(ಶೇ.10.91) ಮತಗಳ ಅಂತರದಿಂದ ಜಯಿಸುವ ಮೂಲಕ ಗೆಲುವನ್ನು ತಮ್ಮದಾಗಿಸಿಕೊಂಡಿದ್ದರು.