ಬೆಂಗಳೂರು: ಕೊರೊನಾ ಸಂಕಷ್ಟದ ಸಮಯಲ್ಲೂ ಇಡೀ ವಿಶ್ವದಲ್ಲಿ ಭಾರತದ(India) ವಿಭಿನ್ನವಾಗಿ ನಿಂತಿದೆ. ಇದಕ್ಕೆ ಬೆಂಗಳೂರು(Bengaluru) ಕೊಡುಗೆಯಿದೆ. ಈ ಮೂಲಕ ಡಬಲ್ ಇಂಜಿನ್(Double Engine) ಸರ್ಕಾರ ತಾಕತ್ತಿನಲ್ಲಿ ಚಲಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೆಂಪೇಗೌಡ ಟರ್ಮಿನಲ್ 2 ಮತ್ತು ಕೆಂಪೇಗೌಡರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ ಬಳಿಕ ನಂತರ ದೇವನಹಳ್ಳಿ ತಾಲೂಕಿನ ಭುವನಹಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಮೋದಿ ಮಾತನಾಡಿದರು.
Advertisement
Advertisement
ಆರಂಭದಲ್ಲಿ ಕನ್ನಡದಲ್ಲಿ ಮಾತನಾಡಿದ ಮೋದಿ ಕನಕದಾಸ, ಓಬವ್ವ ಅವರನ್ನು ಸ್ಮರಿಸಿದರು. ಕನಕದಾಸರ ಕುಲ ಕುಲ ಎಂದು ಹೊಡೆದಾಡಬೇಡಿ ಕೀರ್ತನೆಯನ್ನು ಭಾಷಣದಲ್ಲಿ ಪ್ರಸ್ತಾಪಿಸಿ ಕೆಂಪೇಗೌಡರ ಕೆಲಸವನ್ನು ನೆನಪಿಸಿಕೊಂಡರು. ಭಾಷಣದಲ್ಲಿ ಹಿಂದೆ ಹೇಗಿತ್ತು? ಈಗ ಸರ್ಕಾರ ಯಾವ ರೀತಿ ಕೆಲಸ ಮಾಡುತ್ತಿದೆ? ಕೇಂದ್ರ ಸರ್ಕಾರದ ಯೋಜನೆ, ರಾಜ್ಯದಲ್ಲಿ ಅದರ ಫಲಾನುಭವಿಗಳ ವಿವರಗಳ ಸಂಖ್ಯೆಯನ್ನು ಮುಂದಿಟ್ಟರು. ಕೇಂದ್ರದ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತರುವ ಮೂಲಕ ಡಬಲ್ ಎಂಜಿನ್ ಸರ್ಕಾರಗಳು ಉತ್ತಮ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ಆರ್ಥಿಕ ಪ್ರಗತಿಯಲ್ಲಿ ಬೆಂಗಳೂರಿನ ಕೊಡುಗೆಯನ್ನು ಪ್ರಸ್ತಾಪಿಸಿ ಹಾಡಿ ಹೊಗಳಿದರು. ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ
Advertisement
2014ಕ್ಕೆ ಮೊದಲು ದೇಶದಲ್ಲಿ ಒಟ್ಟು 70 ವಿಮಾನ ನಿಲ್ದಾಣಗಳು ಇದ್ದವು. ಆದರೆ ಈಗ ಇದು 140ಕ್ಕೆ ಏರಿಕೆಯಾಗಿದೆ. ಭಾರತದ ಅಭಿವೃದ್ಧಿಯಲ್ಲಿ ಸಂಪರ್ಕವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ವಾಯು ಸಂಪರ್ಕ ಮತ್ತು ಹೊಸ ವಿಮಾನ ನಿಲ್ದಾಣಗಳನ್ನು ರಚಿಸುವುದು ಈ ಸಮಯದ ಅಗತ್ಯವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಸೌಲಭ್ಯಗಳನ್ನು ಹೆಚ್ಚಿಸಲಿದೆ. ಬೆಳವಣಿಗೆಯನ್ನು ಸಾಧಿಸಲು ನಾವು ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು ಎಂದು ಕರೆ ನೀಡಿದರು.
Advertisement
ಬೆಂಗಳೂರು ‘ಸ್ಟಾರ್ಟ್-ಅಪ್’ ಮನೋಭಾವವನ್ನು ಪ್ರತಿನಿಧಿಸುತ್ತದೆ. ಪ್ರಪಂಚದಾದ್ಯಂತ, ಭಾರತವು ತನ್ನ ಸ್ಟಾರ್ಟ್‌ಅಪ್‌ಗಳಿಗೆ ಹೆಸರುವಾಸಿಯಾಗಿದೆ. ದೇಶದಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆಯಿಂದ ಕರ್ನಾಟಕಕ್ಕೂ ಲಾಭವಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲೂ ಸುಮಾರು 4 ಲಕ್ಷ ಕೋಟಿ ಹೂಡಿಕೆ ಕರ್ನಾಟಕದಲ್ಲಿ ಆಗಿದೆ. ಇದು ಅಭಿವೃದ್ಧಿಯ ಸಂಕೇತ ಎಂದರು. ಇದನ್ನೂ ಓದಿ: ಮೋದಿಯಿಂದ ಏಷ್ಯಾದ ಮೊದಲ ಗಾರ್ಡನ್ ಟರ್ಮಿನಲ್ ಉದ್ಘಾಟನೆ –ವಿಶೇಷತೆ ಏನು?
ಇಂದು ಕರ್ನಾಟಕಕ್ಕೆ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಿಕ್ಕಿದೆ. ಅದರೊಂದಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಉದ್ಘಾಟನೆಯಾಯಿತು ಇದು ಬೆಂಗಳೂರಿನ ಜನರ ಅಗತ್ಯವಾಗಿತ್ತು. ಒಂದೇ ಭಾರತ್ ಕೇವಲ ರೈಲು ಅಲ್ಲ. ಇಂದು ಮೇಡ್ ಇಂಡಿಯಾದ ನವ ಭಾರತದ ರೈಲು. ಇದು ಅಭಿವೃದ್ಧಿಯ ರೈಲು. ಭಾರತ ಅಭಿವೃದ್ಧಿ ಹೊಂದುತ್ತಿದೆ ಎನ್ನುವುದು ತೋರಿಸುವ ರೈಲು. ನಮ್ಮ ಸರ್ಕಾರ ರೈಲ್ವೇಗೆ ಕಾಯಕಲ್ಪ ನೀಡಲು ಆರಂಭಿಸಿದ್ದು ವಿಸ್ಟಾಡೋಮ್ ಪರಿಚಯಿಸಿದ್ದೇವೆ. ನಮ್ಮ ಸರ್ಕಾರದ ಅವಧಿಯಲ್ಲಿ ರೈಲುಗಳು ಮಾತ್ರವಲ್ಲ ನಿಲ್ದಾಣಗಳನ್ನು ಹೈಟೆಕ್ ಆಗುತ್ತಿದೆ. ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣವನ್ನು ವಿಶ್ವದರ್ಜೆಗೆ ಏರಿಸಿದ್ದೇವೆ. ಯಶವಂತಪುರ ರೈಲು ನಿಲ್ದಾಣ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು.
ಭಾರತದ ಅಭಿವೃದ್ಧಿಗೆ ಬೆಂಗಳೂರು ಕೊಡುಗೆಯಿದೆ. ವಿಮಾನ, ಹೆಲಿಕಾಪ್ಟರ್‌ಗಳು ಇಲ್ಲಿ ತಯಾರಾಗುತ್ತಿದೆ. ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಕರ್ನಾಟಕದಲ್ಲಿ ಮುಂಚೂಣಿಯಲ್ಲಿದೆ. ಇಡೀ ವಿಶ್ವ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರೆ ಭಾರತದಲ್ಲಿ ಯುಪಿಐ ಕ್ರಾಂತಿ ನಡೆಯುತ್ತಿದೆ. ಮೇಡ್ ಇನ್ ಇಂಡಿಯಾ 5 ಜಿ ಟೆಕ್ನಾಲಜಿ ಬಂದಿದೆ. ಇಡೀ ವಿಶ್ವದಲ್ಲಿ ಭಾರತ ವಿಭಿನ್ನವಾಗಿ ನಿಂತಿದೆ. ಇದಕ್ಕೆ ಬೆಂಗಳೂರು ಕೊಡುಗೆ ಇದೆ ಎಂದು ಬೆಂಗಳೂರನ್ನು ಹಾಡಿ ಹೊಗಳಿದರು.