– ಧೋನಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ಯಾಕೆ?
– ಎಲ್ಲವನ್ನೂ ರಿವಿಲ್ ಮಾಡಿದ ಭಾರತ ಕ್ರಿಕೆಟ್ ದಂತಕಥೆ
ಮುಂಬೈ: ಟೀಂ ಇಂಡಿಯಾ 9 ವರ್ಷಗಳ ಹಿಂದೆ ಎರಡನೇ ಬಾರಿಗೆ ವಿಶ್ವಕಪ್ ಚಾಂಪಿಯನ್ ಆಗಿತ್ತು. ಏಪ್ರಿಲ್ 2ರಿಂದ ಈ ಬಗ್ಗೆ ಅನೇಕ ಚರ್ಚೆಗಳಾಗಿದ್ದವು. ಈ ವಾರವೂ ಮತ್ತೊಮ್ಮೆ ಫೈನಲ್ ಪಂದ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ.
ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಶ್ರೀಲಂಕಾವನ್ನು ಸೋಲಿಸುವ ಮೂಲಕ ಎರಡನೇ ಬಾರಿ ಏಕದಿನ ವಿಶ್ವಕಪ್ ಗೆದ್ದಿತ್ತು. ಅಂದಿನ ನಾಯಕ ಎಂ.ಎಸ್.ಧೋನಿ ಅಜೇಯ 91 ರನ್, ಅದರಲ್ಲೂ ವಿಶೇಷವಾಗಿ ಫಿನಿಶಿಂಗ್ ಶಾಟ್ ಸಿಕ್ಸರ್ ಅನ್ನು ಸಿಡಿಸಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚಳಿಯದಂತೆ ಉಳಿದಿದೆ. ಈ ಪಂದ್ಯದಲ್ಲಿ ಗೌತಮ್ ಗಂಭೀರ್ 97 ರನ್ ಗಳಿಸಿದ್ದರು. ಯುವರಾಜ್ ಸಿಂಗ್ ಟೂರ್ನಿಯುದ್ದಕ್ಕೂ ಉತ್ತಮ ಆಲ್‍ರೌಂಡರ್ ಪ್ರದರ್ಶನ ನೀಡುತ್ತಲೇ ಬಂದಿದ್ದರೂ ಧೋನಿ ಯುವರಾಜ್ ಸಿಂಗ್ ಅವರಿಗಿಂತ ಹೆಚ್ಚು ಕೀರ್ತಿಯನ್ನು ಪಡೆದಿದ್ದು ಯಾಕೆ ಎಂಬ ಚರ್ಚೆ ಭಾರೀ ಸದ್ದು ಮಾಡುತ್ತಿದೆ.
Advertisement
Advertisement
ಈ ಎಲ್ಲಾ ಪ್ರಶ್ನೆಗಳಿಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಮಾಧ್ಯಮವೊಂದರ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಸಚಿನ್, ಯುವರಾಜ್ ಸಿಂಗ್ ಟೂರ್ನಿಯುದ್ದಕ್ಕೂ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಕ್ವಾರ್ಟರ್ ಫೈನಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದ್ದರಿಂದ ಅವರು 5ನೇ ಕ್ರಮಾಂಕ, ನಾಯಕ ಧೋನಿ 6ನೇ ಕ್ರಮಾಂಕ ಮತ್ತು ಸುರೇಶ್ ರೈನಾ 7ನೇ ಕ್ರಮಾಂಕದಲ್ಲಿ ಬ್ಯಾಂಟಿಗ್ ಮಾಡಿದ್ದರು ಎಂದು ತಿಳಿಸಿದ್ದಾರೆ.
Advertisement
ಟೀಂ ಇಂಡಿಯಾ ವೇಗದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಫೈನಲ್ ಪಂದ್ಯದಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದ್ದರು. ವಿರೇಂದ್ರ ಸೆಹ್ವಾಗ್ ಉಪುಲ್ ತರಂಗ ಅವರ ಅದ್ಭುತ ಕ್ಯಾಚ್ ಪಡೆದಿದ್ದರು. ಈ ಮೂಲಕ ನಾವು ಶ್ರೀಲಂಕಾವನ್ನು 274 ರನ್‍ಗಳಿಗೆ ಕಟ್ಟಿ ಹಾಕಿದ್ದೆವು. ಆದರೆ ಏಕಾಂಗಿ ಹೋರಾಟ ನಡೆಸಿದ್ದ ಮಹೇಲಾ ಜಯವರ್ಧನೆ 103 ರನ್ ಚಚ್ಚಿದ್ದರು ಎಂದು ನೆನೆದ್ದಾರೆ.
Advertisement
ಕ್ವಾರ್ಟರ್-ಫೈನಲ್ ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ನನ್ನ ಮತ್ತು ವೀರು ಜೊತೆಯಾಟದ ನಂತರ ನಾನು ಡ್ರೆಸ್ಸಿಂಗ್ ಕೋಣೆಗೆ ಮರಳಿದೆ. ಆಗ ಫಿಸಿಯೋ ಟೇಬಲ್‍ನಲ್ಲಿ ಮಲಗಿದೆ. ವೀರು ನನ್ನ ಪಕ್ಕದಲ್ಲಿದ್ದರು. ಆಸೀಸ್ ವಿರುದ್ಧ ಗೆಲವು ಸಾಧಿಸಿ ಫೈನಲ್‍ಗೆ ಲಗ್ಗೆ ಇಟ್ಟಾಗ ಸಂತೋಷ ಇಮ್ಮಡಿಯಾಗಿತ್ತು. ಆಗ ನೀವು ನನ್ನ ಪಕ್ಕದಲ್ಲಿ ಕುಳಿತುಕೊಳ್ಳಿ ಎಲ್ಲೂ ಹೋಗಬೇಡಿ ಅಂತ ಸೆಹ್ವಾಗ್ ಅವರಿಗೆ ನಾನು ಹೇಳಿದ್ದೆ ಎಂದು ಸಚಿನ್ ನೆನಪನ್ನು ಬಿಚ್ಚಿಟ್ಟರು.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೌತಮ್ ಮತ್ತು ವಿರಾಟ್ ಉತ್ತಮ ಜೊತೆಯಾಟ ನಡೆದಿತ್ತು. ಎದುರಾಳಿ ತಂಡಕ್ಕಿಂತ ಕೆಲವು ಹೆಜ್ಜೆ ಮುಂದಿಡಲು ನಾವು ಬಯಸಿದ್ದೇವೆ. ಈ ವೇಳೆ ನಾನು ವೀರೂಗೆ, ‘ಎಡಗೈ ಬ್ಯಾಟ್ಸ್‌ಮನ್ ಗೌತಮ್ ವಿಕೆಟ್ ಒಪ್ಪಿಸಿ ಹೊರ ಬಂದರೆ ಎಡಗೈ ಬ್ಯಾಟ್ಸ್‌ಮನ್ ಯುವಿ ಒಳಗೆ ಹೋಗಬೇಕು. ಒಂದು ವೇಳೆ ಬಲಗೈ ಬ್ಯಾಟ್ಸ್‌ಮನ್ ವಿರಾಟ್ ಹೊರಬಂದರೆ ಬಲಗೈ ಬ್ಯಾಟ್ಸ್‌ಮನ್ ಧೋನಿ ಬ್ಯಾಟಿಂಗ್‍ಗೆ ಇಳಿಯಬೇಕು’ ಎಂದು ಸಲಹೆ ನೀಡಿದ್ದೆ. ಹೀಗಾಗಿ ವಿರಾಟ್ ವಿಕೆಟ್ ಒಪ್ಪಿಸಿ ಹೊರ ಬಂದಿದ್ದರಿಂದ ಯುವಿಯನ್ನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಡ್ರಾಫ್ಟ್ ಮಾಡಲಾಯಿತು. ಏಕೆಂದರೆ ಬಲಗೈ, ಎಡಗೈ ಬ್ಯಾಟಿಂಗ್ ಸಂಯೋಜನೆ ಇರುವುದು ಮುಖ್ಯವಾಗಿತ್ತು. ಯುವಿ ಪ್ರಚಂಡ ರೂಪದಲ್ಲಿದ್ದರು. ಆದರೆ ಶ್ರೀಲಂಕಾದಲ್ಲಿ ಇಬ್ಬರು ಆಫ್ ಸ್ಪಿನ್ನರ್‌ಗಳು ಇದ್ದರು. ಆದ್ದರಿಂದ ಕಾರ್ಯತಂತ್ರದಲ್ಲಿ ಬದಲಾವಣೆ ಇರುತ್ತದೆ ಎಂದು ನಾನು ಭಾವಿಸಿದ್ದೆ ಎಂದು ಸಚಿನ್ ತಂತ್ರಗಾರಿಕೆ ರಿವೀಲ್ ಮಾಡಿದ್ದಾರೆ.
ಈ ತಂತ್ರವನ್ನು ಅನುಸರಿಸುವಂತೆ ಸಲಹೆ ನೀಡಲು ಗ್ಯಾರಿ ಹೊರಗೆ ಕುಳಿತಿದ್ದ ಎಂ.ಎಸ್.ಧೋನಿ ಕಡೆಗೆ ತಿರುಗಿ ನೋಡಿದೆ. ಆಗ ಧೋನಿ ನನ್ನ ಬಳಿಗೆ ಬಂದಾಗ ವೀರು, ಕೋಚ್ ಗ್ಯಾರಿ ಕಸ್ಟರ್ನ್ ಹಾಗೂ ನಾನು ಅದರ ಬಗ್ಗೆ ಮಾತನಾಡಿದ್ದೆವು. ಗ್ಯಾರಿ ಸಹ ಒಪ್ಪಿದ್ದರು. ಆಗ ಮೈದಾನಕ್ಕಿಳಿಯಲು ಧೋನಿ ಸಿದ್ಧರಾದರು ಎಂದು ತಿಳಿಸಿದ್ದಾರೆ.
ಇದೇ ವೇಳೆ ವಿರೇಂದ್ರ ಸೆಹ್ವಾಗ್ ಮಾತನಾಡಿ, ನಮ್ಮ ಮೂಲಭೂತ ಅಂಶಗಳನ್ನು ಸರಿಯಾಗಿ ಪಡೆದರೆ, ನಾವು ಯಾವಾಗಲೂ ನಿಯಂತ್ರಣದಲ್ಲಿರುತ್ತೇವೆ ಎಂದು ನಮಗೆ ತಿಳಿದಿತ್ತು. ನಾನು ಆರಂಭದಲ್ಲಿ ತುಂಬಾ ನಿರಾಶೆಗೊಂಡಿದ್ದೆ. ಸಚಿನ್ ಯಾವಾಗ ವಿಕೆಟ್ ಒಪ್ಪಿಸಿ ಹೊರ ಬಂದರೋ ನಾನು ಮೌನಕ್ಕೆ ಜಾರಿಬಿಟ್ಟಿದ್ದೆ ಎಂದು ನೆನೆದರು.
‘ಗೌತಮ್ ಗಂಭೀರ್ ಅವರ 97 ರನ್‍ಗಳ ಅಮೂಲ್ಯವಾದ ಇನ್ನಿಂಗ್ಸ್ ಗುರಿಯನ್ನು ಬೆನ್ನಟ್ಟುವಲ್ಲಿ ಅಡಿಪಾಯ ಹಾಕಿತು. ಜೊತೆಗೆ ಧೋನಿ ಅಜೇಯ 91 ರನ್ ಗಳಿಸಿ ಗುರಿ ತಲುಪಿದ್ದರು. ಧೋನಿ ಫಿನಿಶಿಂಗ್ ಸಿಕ್ಸರ್ ಸಿಡಿಸಿದ್ದು ಸ್ಮರಣೀಯವಾಗಿಸಿದೆ ಎಂದು ಸಚಿನ್ ಹೇಳಿದ್ದಾರೆ.