ಬೆಂಗಳೂರು: 2011ನೇ ಸಾಲಿನ ಕೆಪಿಎಸ್‍ಸಿ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ಭವಿಷ್ಯ ಇವತ್ತು ಕ್ಯಾಬಿನೆಟ್‍ನಲ್ಲಿ ನಿರ್ಧಾರವಾಗಲಿದೆ.
362 ಮಂದಿ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ರದ್ದತಿಗೆ ತಡೆಯಾಜ್ಞೆ ನೀಡಿದ್ದ ಕೆಎಟಿ(ಕರ್ನಾಟಕ ಅಡ್ಮಿನಿಸ್ಟ್ರೇಷನ್ ಟ್ರಿಬ್ಯುನಲ್), ಸಂಶಯ ಇರುವ 46 ಮಂದಿಯ ನೇಮಕಾತಿಯನ್ನು ಪರಾಮರ್ಶೆ ನಡೆಸಿ, ಉಳಿದವರನ್ನ ನೇಮಕಾತಿಗೊಳಿಸುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಇವತ್ತು ಮಹತ್ವದ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.
Advertisement
ಕೆಎಟಿ ಆದೇಶವನ್ನೇ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರುವುದು, ಸಂಶಯ ಇರುವ 46 ಮಂದಿ ಹೊರತುಪಡಿಸಿ ಉಳಿದವರನ್ನು ಷರತ್ತುಬದ್ಧವಾಗಿ ನೇಮಕಾತಿಗೊಳಿಸಿ ಆದೇಶ ಹೊರಡಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ. ಕೆಎಟಿ ಆದೇಶವನ್ನು ಪ್ರಶ್ನಿಸಲು ಕೆಲ ಸಚಿವರ ವಿರೋಧವಿದ್ದು, 46 ಮಂದಿ ಹೊರತುಪಡಿಸಿ ಉಳಿದವರಿಗೆ ನೇಮಕಾತಿಗೊಳಿಸುವ ನಿರ್ಧಾರವನ್ನು ಕ್ಯಾಬಿಬೆಟ್ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಸಂಶಯ ಇರುವ 46 ಮಂದಿ ನೇಮಕಾತಿ ಪರಾಮರ್ಶೆಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವ ಸಾಧ್ಯತೆಯಿದೆ.
Advertisement
ಹೀಗಾಗಿ ಇವತ್ತಿನ ಕ್ಯಾಬಿನೆಟ್ ಕುತೂಹಲ ಮೂಡಿಸಿದ್ದು, 362 ಮಂದಿ ಭವಿಷ್ಯ ನಿರ್ಧಾರವಾಗಲಿದೆ.