– ಸಂಗಕ್ಕಾರ, ಮಹೇಲಾ ಜಯವರ್ಧನೆ ತಿರುಗೇಟು
ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವೆ ನಡೆದಿದ್ದ 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಮೇಲಿನ ಫಿಕ್ಸಿಂಗ್ ಆರೋಪ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಆರೋಪಿಸಿದ್ದ ಶ್ರೀಲಂಕಾ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಳುತಗಾಮೆಗೆ ತಮ್ಮ ಹೇಳಿಕೆಗಳ ಕುರಿತು ಸ್ಪಷ್ಟನೆ ನೀಡಿ ಸಮರ್ಥಿಸಿಕೊಂಡಿದ್ದಾರೆ.
ಫಿಕ್ಸಿಂಗ್ ಆರೋಪದಲ್ಲಿ ನಾನು ಯಾವುದೇ ಆಟಗಾರರ ಹೆಸರನ್ನು ಉಲ್ಲೇಖ ಮಾಡಿಲ್ಲ. ಆದರೆ ಮಾಜಿ ಆಟಗಾರರಾದ ಸಂಗಕ್ಕಾರ, ಜಯವರ್ಧನೆ ಅವರು ಏಕೆ ಇಷ್ಟು ತೀಷ್ಣವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು ಮಹಿಂದಾನಂದ ಪ್ರಶ್ನಿಸಿದ್ದಾರೆ.
Advertisement
Advertisement
ಸರ್ಕಸ್ ಆರಂಭವಾಗಿದೆ ಎಂದು ಜಯವರ್ಧನೆ ಹೇಳುತ್ತಿದ್ದಾರೆ. ಆದರೆ ಈ ಇಬ್ಬರು ಆಟಗಾರರು ಏಕೆ ಇದಕ್ಕೆ ಹೆಚ್ಚು ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂಬುವುದು ತಿಳಿಯುತ್ತಿಲ್ಲ. ಅಲ್ಲದೇ ಫಿಕ್ಸಿಂಗ್ ಕುರಿತ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ ರಣತುಂಗಾ ಕೂಡ ಬಹಿರಂಗವಾಗಿಯೇ ಫಿಕ್ಸಿಂಗ್ ಕುರಿತು ಹೇಳಿದ್ದರು ಎಂದು ಮಹಿಂದಾನಂದ ಹೇಳಿದ್ದಾರೆ.
Advertisement
Former Sports Minister Mahindananda rather than making unsubstantiated wild allegations he should complain to ICC with evidence as I did when I was the Sports Minister on a different fixing approach.
— Harin Fernando (@fernandoharin) June 19, 2020
Advertisement
ಇತ್ತ ಮಹಿಂದಾನಂದ ಹೇಳಿಕೆಗಳ ಕುರಿತು ಮತ್ತೊಮ್ಮೆ ಪ್ರತಿಕ್ರಿಯೆ ನೀಡಿ ಅಸಮಾಧಾನ ಹೊರ ಹಾಕಿರುವ ಜಯವರ್ಧನೆ, ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಮಾಡುವುದು ಅಷ್ಟು ಸುಲಭದ ವಿಚಾರವಲ್ಲ. ಆದರೆ ಪಂದ್ಯದ ಆಡುವ 12ರ ಬಳಗದಲ್ಲಿರೋ ಆಟಗಾರರು ಫಿಕ್ಸಿಂಗ್‍ನಲ್ಲಿ ಭಾಗಿಯಾಗದೆ ಹೇಗೆ ಫಿಕ್ಸಿಂಗ್ ನಡೆಸುತ್ತಾರೆ ಎಂಬುವುದೇ ತಿಳಿಯುತ್ತಿಲ್ಲ. ವಿಶ್ವಕಪ್ ಟೂರ್ನಿ ನಡೆದ 9 ವರ್ಷಗಳ ಬಳಿಕ ಈಗ ಆದರೂ ನಮಗೆ ಜ್ಞಾನೋದಾಯ ಕಲ್ಪಿಸಿ ಎಂದು ಆರೋಪಗಳಿಗೆ ತಿರುಗೇಟು ನೀಡಿದ್ದರು. ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಂದು ತಂಡದಲ್ಲಿದ್ದ ಜಯವರ್ಧನೆ ಶತಕ (103 ರನ್) ಸಿಡಿಸಿದ್ದರು.
ಇತ್ತ ಮಾಜಿ ಕ್ರೀಡಾ ಸಚಿವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಶ್ರೀಲಂಕಾ ಸರ್ಕಾರ ಆರೋಪಗಳ ಕುರಿತು ತನಿಗೆ ಆದೇಶಿಸಿತ್ತು. ಫಿಕ್ಸಿಂಗ್‍ನಲ್ಲಿ ಆಟಗಾರ ಆಟಗಾರರ ಪಾತ್ರವಿಲ್ಲ. ಆದರೆ ಕೆಲ ಪಾರ್ಟಿಗಳು ಈ ಫಿಕ್ಸಿಂಗ್‍ನಲ್ಲಿ ಭಾಗಿಯಾಗಿವೆ ಎಂದು ಮಹಿಂದಾನಂದ ಮಾಡಿದ್ದ ಆರೋಪಗಳ ಸತ್ಯಾಸತ್ಯತೆ ಅರಿಯಲು ಶ್ರೀಲಂಕಾ ಸರ್ಕಾರ ತನಿಖೆಗೆ ಆದೇಶಸಿದೆ. ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಬೀಸಿ 275 ರನ್ ಗುರಿ ನೀಡಿತ್ತು. ಸವಾಲಿನ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ ಗೌತಮ್ ಗಂಭಿರ್ 97 ರನ್, ಧೋನಿ 91 ರನ್‍ಗಳ ಬ್ಯಾಟಿಂಗ್ ನೆರವಿನಿಂದ ಭಾರತ ಗೆಲುವು ಪಡೆದಿತ್ತು.