ಅಂದು ಭಾರತಕ್ಕೆ ವಿಶ್ವಕಪ್‌ ಗೆದ್ದುಕೊಟ್ಟ ಹೀರೋ, ಈಗ ನೆರೆ ಸಂತ್ರಸ್ತರ ಪಾಲಿನ ಆಪದ್ಬಾಂಧವ!

Public TV
2 Min Read
Jogindar Sharma

ಮುಂಬೈ: ಅಂದು ಭಾರತ ಎಂ.ಎಸ್‌ ಧೋನಿ (MS Dhoni) ನಾಯಕತ್ವದಲ್ಲಿ ಟಿ20 ವಿಶ್ವಕಪ್‌ ಗೆದ್ದಾಗ ಟೀಂ ಇಂಡಿಯಾ (Team India) ಪ್ರಮುಖ‌ ರೂವಾರಿಯಾಗಿದ್ದ ವೇಗಿ ಜೋಗಿಂದರ್‌ ಶರ್ಮಾ (Joginder Sharma) ಇದೀಗ ಡಿಎಸ್‌ಪಿ ಆಗಿ ನೆರೆ ಸಂತ್ರಸ್ತರ ಆಪದ್ಬಾಂಧವನಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಟಿ20 ವಿಶ್ವಕಪ್‌ ಚೊಚ್ಚಲ ಆವೃತ್ತಿಯಲ್ಲೇ (2007 T20 World Cup) ಟೀಂ ಇಂಡಿಯಾ ರೋಚಕ ಗೆಲುವು ದಾಖಲಿಸಿದ್ದನ್ನು ಪ್ರತಿಯೊಬ್ಬ ಭಾರತೀಯನೂ ಮರೆಯುವಂತಿಲ್ಲ. ಅಂದಿನ ಟೀಂ ಇಂಡಿಯಾ ನಾಯಕ ಎಂ.ಎಸ್‌ ಧೋನಿ ಅವರ ಶ್ರೇಷ್ಠ ಪಯಣದ ಆರಂಭವು ಇದಾಗಿತ್ತು. ಸಾಂಪ್ರದಾಯಿಕ ಎದುರಾಳಿ ಪಾಕ್‌ ತಂಡವನ್ನ ಬಗ್ಗು ಬಡಿದು ಭಾರತ ರೋಚಕ ಜಯ ಸಾಧಿಸಿತ್ತು. ಇದನ್ನೂ ಓದಿ: Wimbledon 2023ː ಮಹಿಳಾ ಸಿಂಗಲ್ಸ್‌ ಗೆದ್ದು ಇತಿಹಾಸ ಬರೆದ ವಾಂಡ್ರೊಸೊವಾ

Jogindar Sharma 2

20 ಓವರ್‌ಗಳಲ್ಲಿ 157 ರನ್‌ ಗಳಿಸಿದ್ದ ಭಾರತ ಪಾಕ್‌ಗೆ 158 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿತ್ತು. ಡೆತ್‌ ಓವರ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದ ಪಾಕ್‌ ಗೆಲ್ಲುವ ಸನಿಹಕ್ಕೆ ಬಂದಿತ್ತು. ಕೊನೆಯ ಓವರ್‌ನಲ್ಲಿ 13 ರನ್‌ಗಳ ಅಗತ್ಯವಿದ್ದಾಗ ಜೋಗಿಂದರ್‌ ಶರ್ಮಾ ಬೌಲಿಂಗ್‌ಗೆ ಬಂದರು. ಕ್ರೀಸ್‌ನಲ್ಲಿದ್ದ ಪಾಕ್‌ ಬ್ಯಾಟ್ಸ್‌ಮ್ಯಾನ್‌ ಮಿಸ್ಬಾ ಉಲ್‌ ಹಕ್‌ ಮೊದಲ ಎಸೆತದಲ್ಲಿ 2 ರನ್‌ ತೆಗೆದುಕೊಂಡರೆ 2ನೇ ಎಸೆತವನ್ನು ಸಿಕ್ಸರ್‌ ಬಾರಿಸಿದರು. ಕೊನೆಯ 4 ಎಸೆತಗಳಲ್ಲಿ 5 ರನ್‌ ಬೇಕಿತ್ತು. ಇದರಿಂದ ಭಾರತ ಸೋಲುವುದು ಖಚಿತವೆಂದೇ ಭಾವಿಸಲಾಗಿತ್ತು. ಇದನ್ನೂ ಓದಿ: Asian Games 2023ಗೆ ಟೀಂ ಇಂಡಿಯಾ ರೆಡಿ – ರಿಂಕುಗೆ ಕೊನೆಗೂ ಸಿಕ್ತು ಚಾನ್ಸ್, ಫಸ್ಟ್ ರಿಯಾಕ್ಷನ್ ಏನು?

Jogindar Sharma 3

ಈ ವೇಳೆ 3ನೇ ಎಸೆತವನ್ನ ಬ್ಯಾಕ್‌ ಬೌಂಡರಿಗೆ ತಳ್ಳಲು ಯತ್ನಿಸಿದಾಗ ಮಿಸ್ಬಾ ಕ್ಯಾಚ್‌ ಆಗಿ ಔಟಾದರು. ಟೀಂ ಇಂಡಿಯಾ ಜೊತೆಗೆ ಅಂದು ಇಡೀ ದೇಶವೇ ಕ್ರಿಕೆಟಿಗರನ್ನ ಕೊಂಡಾಡಿತ್ತು. ಅಂದು ಕೊನೆಯ ಓವರ್‌ ಬೌಲಿಂಗ್‌ ಮಾಡಿ ಟೀಂ ಇಂಡಿಯಾ ಪಾಲಿಗೆ ಗೆಲುವು ತಂದುಕೊಟ್ಟಿದ್ದ ಹೀರೋ ಇಂದು ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ.

ಜೋಗಿಂದರ್‌ ಶರ್ಮಾ ಇದೀಗ ಹರಿಯಾಣದಲ್ಲಿ ಡಿಎಸ್ಪಿ ಆಗಿದ್ದಾರೆ. ಇತ್ತೀಚೆಗೆ ಅಂಬಾಲಾದಲ್ಲಿ ಪ್ರವಾಹ ಸಂಭವಿಸಿದ ವೇಳೆ ಸಹಾಯಕ್ಕೆ ಧಾವಿಸಿದ್ದರು. ಈ ಕುರಿತ ಚಿತ್ರಗಳನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಭಾರತದಲ್ಲಿ ಕಳೆದ ಕೆಲವು ದಿನಗಳಲ್ಲಿ ಪ್ರವಾಹದೋಪಾದಿಯಲ್ಲಿ ಮಳೆಯಾಗುತ್ತಿದ್ದು, ಡಿಎಸ್‌ಪಿ ಆಗಿರುವ ಜೋಗಿಂದರ್‌ ಶರ್ಮಾ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

2007ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. 2008ರಲ್ಲಿ ಐಪಿಎಲ್‌ ಟೂರ್ನಿ ಆರಂಭಗೊಂಡ ನಂತರ ಭಾರತ ಐಸಿಸಿ ಟ್ರೋಫಿಗಳನ್ನ ಗೆಲ್ಲುವಲ್ಲಿ ಹಿಂದುಳಿದಿದೆ. ಕೊನೆಯದ್ದಾಗಿ ಎಂ.ಎಸ್‌ ಧೋನಿ ನಾಯಕತ್ವದಲ್ಲಿ 2011ರಲ್ಲಿ ಏಕದಿನ ವಿಶ್ವಕಪ್‌ ಹಾಗೂ 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದೇ ಭಾರತಕ್ಕೆ ಹೆಮ್ಮೆ.

Web Stories

Share This Article