ಮುಂಬೈ: ಟೀಂ ಇಂಡಿಯಾ ಆಲ್‍ರೌಂಡರ್ ಇರ್ಫಾನ್ ಪಠಾಣ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ತಕ್ಷಣದಿಂದ ಅನ್ವಯವಾಗುವಂತೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
2003ರಲ್ಲಿ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ಇರ್ಫಾನ್, 16 ವರ್ಷಗಳ ಕಾಲ ತಂಡದ ಪರ ಆಡಿದ್ದರು. 2012ರಲ್ಲಿ ಇರ್ಫಾನ್ ತಮ್ಮ ಅಂತಿಮ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದು, 2019ರ ಫೆಬ್ರವರಿವರೆಗೂ ದೇಶಿಯ ಕ್ರಿಕೆಟ್ ಪಂದ್ಯದಲ್ಲಿ ಆಡಿದ್ದರು.
Advertisement
Indian cricketer Irfan Pathan announces retirement from all formats of cricket. (File pic) pic.twitter.com/X6NiBVhbCU
— ANI (@ANI) January 4, 2020
Advertisement
2019ರ ಫೆ.27ರಂದು ಸೈಯದ್ ಅಲಿ ಮುಷ್ತಾಕ್ ಟ್ರೋಫಿಯ ಭಾಗವಾಗಿ ನಡೆದ ಕೇರಳ ವಿರುದ್ಧ ಟಿ20 ಪಂದ್ಯದಲ್ಲಿ ಇರ್ಫಾನ್, ಜಮ್ಮು ಕಾಶ್ಮೀರ ತಂಡದ ಪರ ಆಡಿದ್ದರು. ಕ್ರಿಕೆಟ್‍ನಿಂದ ದೂರವಾದ ಬಳಿಕ ಕ್ರಿಕೆಟ್ ವಿಶ್ಲೇಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ವರ್ಷದ ಏಪ್ರಿಲ್‍ನಲ್ಲಿ ಜಮ್ಮು ಕಾಶ್ಮೀರದ ರಣಜಿ ಟ್ರೋಫಿ ಟೂರ್ನಿಯ ಸಂದರ್ಭದಲ್ಲಿ ತಂಡಕ್ಕೆ ಕೋಚ್ ಹಾಗೂ ಮೆಂಟರ್ ಸೇರಿಕೊಂಡಿದ್ದರು.
Advertisement
2007ರ ಮೊದಲ ಟಿ-20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ತಂಡದಲ್ಲಿ ಇರ್ಫಾನ್ ಆಡಿದ್ದರು. ಟೂರ್ನಿಯಲ್ಲಿ ಪಾಕ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದುವರೆಗೂ ಇರ್ಫಾನ್ 29 ಟೆಸ್ಟ್ ಗಳಲ್ಲಿ 100 ವಿಕೆಟ್, 120 ಏಕದಿನಗಳಿಂದ 173 ವಿಕೆಟ್ ಹಾಗೂ 24 ಟಿ20 ಪಂದ್ಯಗಳಿಂದ 172 ವಿಕೆಟ್ ಗಳನ್ನು ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಇರ್ಫಾನ್ ಒಟ್ಟಾರೆ 301 ವಿಕೆಟ್ ಪಡೆದಿರುವ ಇರ್ಫಾನ್ 2,821 ರನ್ ಗಳಿಸಿದ್ದಾರೆ.