– ಪೆಟ್ರೋಲ್ ಬಂಕ್, ಹೋಟೆಲ್‌ಗಳಲ್ಲೂ ದೊಡ್ನೋಟು ಹವಾ
ಬೆಂಗಳೂರು: ಮೇ 23ರಿಂದ 2,000 ರೂ. ಮುಖಬೆಲೆಯ ನೋಟುಗಳ (2000 Rupees Note) ವಿನಿಮಯ ಪ್ರಕ್ರಿಯೆ ಆರಂಭವಾಗಿದೆ.
ಬೆಂಗಳೂರು ಸೇರಿ ಎಲ್ಲ ಕಡೆಯ ಬ್ಯಾಂಕ್‌ಗಳಲ್ಲಿ (Bank) ಪ್ರತಿ ಬಾರಿ 2 ಸಾವಿರ ರೂ. ಮುಖಬೆಲೆಯ 10 ನೋಟುಗಳ ವಿನಿಮಯಕ್ಕೆ ಅವಕಾಶ ನೀಡಲಾಗಿದೆ. RBI ನಿರ್ದೇಶನದ ಪ್ರಕಾರ ಯಾವುದೇ ಬ್ಯಾಂಕ್ ಸಿಬ್ಬಂದಿ, ನೋಟುಗಳ ವಿವಿಮಯ ವೇಳೆ ಯಾವುದೇ ದಾಖಲೆಗಳನ್ನು ಕೇಳಿಲ್ಲ. ಕೆಲವರು ಎರಡು-ಮೂರು ಬಾರಿ ಸರತಿ ಸಾಲಿನಲ್ಲಿ ನಿಂತು ನೋಟ್‌ಗಳನ್ನು ಎಕ್ಸ್ಚೇಂಜ್ ಮಾಡಿಕೊಂಡಿದ್ದು ಕಂಡುಬಂದಿದೆ. ಇದನ್ನೂ ಓದಿ: ಭಾರೀ ಏರಿಕೆ ಕಂಡ Adani Enterprises ಷೇರು – ಮತ್ತಷ್ಟು ಹೂಡಿಕೆ ಮಾಡಿದ GQG
Advertisement
Advertisement
ಇನ್ನೂ ಬೆಂಗಳೂರಿನ ಪೆಟ್ರೋಲ್ ಬಂಕ್‌ಗಳಲ್ಲಿ (Petrol Bunk) 100 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡವರು ಕೂಡ 2,000 ರೂಪಾಯಿ ನೋಟ್ ನೀಡ್ತಿದ್ದಾರೆ. ಚಿಲ್ಲರೆ ಸಮಸ್ಯೆಯಿಂದ ಬಳಲುತ್ತಿರುವ ಪೆಟ್ರೋಲ್ ಬಂಕ್ ಮಾಲೀಕರು, 1,500 ರೂ. ತೈಲ ಹಾಕಿಸಿಕೊಂಡಲ್ಲಿ ಮಾತ್ರ 2,000 ರೂ. ನೋಟ್ ಸ್ವೀಕರಿಸ್ತೇವೆ ಎಂದು ಬೋರ್ಡ್ ಹಾಕಿದ್ದಾರೆ. ಇದನ್ನೂ ಓದಿ: ಇಂದಿನಿಂದ 2,000 ಮುಖಬೆಲೆ ನೋಟು ವಿನಿಮಯ ಪ್ರಕ್ರಿಯೆ ಆರಂಭ
Advertisement
Advertisement
ಗೊರಗುಂಟೆಪಾಳ್ಯದ ಪೆಟ್ರೋಲ್ ಬಂಕ್‌ಗೆ ಸೋಮವಾರ ಒಂದೇ ದಿನ 180 ಪಿಂಕ್ ನೋಟ್‌ಗಳು ಸಂದಿವೆ. ಬೃಹತ್ ಹೋಟೆಲ್, ರೆಸ್ಟೋರೆಂಟ್, ಬಾರ್‌ಗಳಲ್ಲಿಯೂ ಪಿಂಕ್‌ನೋಟ್ ಸದ್ದು ಮಾಡುತ್ತಿದೆ. ಈ ಮಧ್ಯೆ, ಯಾವುದೇ ಗುರುತಿನ ಚೀಟಿ ಪಡೆಯದೇ 2,000 ರೂ. ನೊಟುಗಳ ವಿನಿಮಯಕ್ಕೆ ಅವಕಾಶ ನೀಡಿರೋದನ್ನು ಪ್ರಶ್ನಿಸಿ ಬಿಜೆಪಿ ಮುಖಂಡ ಅಶ್ವಿನಿ ಉಪಧ್ಯಾಯ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಬ್ಯಾಂಕುಗಳಲ್ಲಿ ಹಣ ವಿನಿಮಯ ಮಾಡಿಕೊಳ್ಳುವಾಗ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಪರಿಗಣಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಪ್ಯಾನ್ ಕಡ್ಡಾಯ: 50 ಸಾವಿರಕ್ಕಿಂತ ಹೆಚ್ಚು ಮೊತ್ತದ 2000 ರೂ. ಮುಖಬೆಲೆಯ ನೋಟುಗಳನ್ನು ಠೇವಣಿ ಇಡುವಾಗ ಪ್ಯಾನ್ ನಂಬರ್ ನೀಡುವುದು ಕಡ್ಡಾಯ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸ್ಪಷ್ಟಪಡಿಸಿದ್ದಾರೆ.