2,000 ರೂ. ಮುಖಬೆಲೆಯ ನೋಟ್‌ ಬ್ಯಾನ್‌ ಮಾಡಿದ RBI

Public TV
1 Min Read
2000 rupees note

– ಸೆ.30 ರೊಳಗೆ ಬದಲಾಯಿಸಿಕೊಳ್ಳಿ ಅಂತ ಗ್ರಾಹಕರಿಗೆ ಸೂಚನೆ

ನವದೆಹಲಿ: 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) ವಾಪಸ್‌ ಪಡೆದಿದೆ. ಇನ್ಮುಂದೆ ಗ್ರಾಹಕರಿಗೆ 2,000 ರೂ. ಮುಖಬೆಲೆಯ ನೋಟುಗಳನ್ನು ನೀಡದಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ.

note ban

2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಬೇಕು. ಅವುಗಳನ್ನು 2023ರ ಸೆಪ್ಟೆಂಬರ್ 30 ರೊಳಗೆ ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಿ ಎಂದು ಆರ್‌ಬಿಐ ಪ್ರಕಟಣೆ ಮೂಲಕ ಸೂಚಿಸಿದೆ. ಇದನ್ನೂ ಓದಿ: RBI ಅನುಮೋದನೆಗೂ ಮೊದಲೇ ಮೋದಿಯಿಂದ ನೋಟ್ ನಿಷೇಧ ಘೋಷಣೆ

2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಬೇಕು. ಅವುಗಳನ್ನು 2023ರ ಸೆಪ್ಟೆಂಬರ್ 30 ರೊಳಗೆ ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಿ ಎಂದು ಆರ್‌ಬಿಐ ಪ್ರಕಟಣೆ ಮೂಲಕ ಸೂಚಿಸಿದೆ.

RBI

ಭಾರತೀಯ ರಿಸರ್ವ್ ಬ್ಯಾಂಕ್ (RBI) 19 ಪ್ರಾದೇಶಿಕ ಕಚೇರಿಗಳು ಮತ್ತು ಇತರ ಬ್ಯಾಂಕುಗಳು ಮೇ 23 ರಿಂದ 2,000 ರೂ. ನೋಟುಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತವೆ. ಅವು ಕಾನೂನುಬದ್ಧವಾದ ಟೆಂಡರ್ ಆಗಿರುತ್ತವೆ ಎಂದು RBI ತಿಳಿಸಿದೆ.

2016ರ ನ.9 ರಂದು ರಾತ್ರೋರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚಿನ ಮೌಲ್ಯದ 1,000 ಮತ್ತು 500 ನೋಟುಗಳನ್ನು ಬ್ಯಾನ್‌ ಮಾಡಲಾಗಿದೆ ಎಂದು ಘೋಷಿಸಿದ್ದರು. ನಂತರ 2,000 ನೋಟು ಮುದ್ರಿಸಲು ಪ್ರಾರಂಭಿಸಲಾಗಿತ್ತು. ಇದನ್ನೂ ಓದಿ: ಇಂಥದ್ದು ಬೇಕು ಅಂದ್ರೆ ಪಡೆಯಲೇಬೇಕು ಎನ್ನೋ ಹಠ: ಡಿಕೆಶಿ ಬಗ್ಗೆ ಸೋದರತ್ತೆ ಮಾತು

ವಿನಿಮಯ ಮಾಡಿಕೊಳ್ಳಬಹುದಾದ 2,000 ರೂ. ನೋಟುಗಳ ಮೊತ್ತಕ್ಕೆ ಮಿತಿ ಇದೆ. ಜನರು ಒಂದು ಬಾರಿಗೆ 20,000 ರೂ. ಮಿತಿಯಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಶೀಘ್ರದಲ್ಲೇ ಸ್ಥಗಿತಗೊಳ್ಳಲಿರುವ ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳಲು ವ್ಯಕ್ತಿ ಬ್ಯಾಂಕ್‌ನ ಗ್ರಾಹಕರಾಗಿರಬೇಕೆಂದೇನಿಲ್ಲ. ಖಾತೆದಾರರಲ್ಲದವರು ಸಹ 2,000 ರೂ. ಮುಖಬೆಲೆ ನೋಟುಗಳನ್ನು ಯಾವುದೇ ಬ್ಯಾಂಕ್ ಶಾಖೆಯಲ್ಲಿ ಒಮ್ಮೆಗೆ 20,000 ರೂ. ಮಿತಿಯವರೆಗೆ ಬದಲಾಯಿಸಬಹುದು.

Share This Article