ಕೊಪ್ಪಳ: ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ 2000 ರೂ. ಮುಖಬೆಲೆಯ ನಕಲಿ ನೋಟು ಓಡಾಡುತ್ತಿವೆ. ಈ ನಕಲಿ ನೋಟುಗಳು ದಿನವೆಲ್ಲ ದುಡಿದ ಕೂಲಿ ಕಾರ್ಮಿಕರ ಕೈ ಸೇರುತ್ತಿವೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ 2000 ರೂ. ಮುಖಬೆಲೆಯ ಪಿಂಕ್ ನೋಟ್ ಓಡಾಡುತ್ತಿವೆ. ನಗರದ 22ನೇ ವಾರ್ಡ್ ನಿವಾಸಿಯೊಬ್ಬರು ಗಾರೆ ಕೆಲಸ ಮಾಡಿದ ಕಾರ್ಮಿಕರಿಗೆ ವೇತನ ನೀಡುವ ವೇಳೆ 2000ರೂ. ಮುಖ ಬೆಲೆಯ ಖೋಟಾ ನೋಟು ಪತ್ತೆಯಾಗಿದೆ. ಥೇಟ್ ಆರ್ ಬಿಐ ಮುದ್ರಿಸಿರುವ ಮಾದರಿಯಲ್ಲಿರುವ ಈ ನೋಟಿನ ಮಧ್ಯದಲ್ಲಿರುವ ಬಿಳಿ ಬಣ್ಣದ ಜಾಗದಲ್ಲಿ ಗಾಂಧೀಜಿ ಭಾವಚಿತ್ರದಲ್ಲಿ ವ್ಯತ್ಯಾಸ ಕಂಡುಬಂದಿದೆ.
Advertisement
Advertisement
ಅನುಮಾನಗೊಂಡ ಸ್ಥಳೀಯರು ಕೂಡಲೇ ಪರಿಶೀಲನೆ ನೆಡೆಸಿದಾಗ 2 ಸಾವಿರ ಮುಖಬೆಲೆಯ ನೋಟು ನಕಲಿ ಎಂದು ದೃಢಪಡಿಸಿದ್ದಾರೆ. ಹೊಸ ನೋಟು ಮುದ್ರಣಕ್ಕೆ ಬಳಸಿರುವ ನಾನಾ ರೀತಿಯ ಬಣ್ಣ ನೋಟಿನ ಗಾತ್ರ, ವಿನ್ಯಾಸ, ಸೀರಿಯಲ್ ನಂಬರ್, ಅಂಕಿ, ಸಂಖ್ಯೆ, ಆರ್ ಬಿಐ, ಗೌವರ್ನರ್ ರುಜು ಭದ್ರತಾ ಧಾರ ಮಂಗಳಯಾನ ಚಿತ್ರ, ಮೈಕ್ರೋ ಲೇಟರ್ಸ್ ಸೇರಿದಂತೆ ಇತರೆ ಮಾಹಿತಿಗಳು ಯಥಾವತ್ತಾಗಿವೆ.
Advertisement
Advertisement
ಆದರೆ ಸೂರ್ಯನ ಕಿರಣದ ಬೆಳಕಿಗೆ ನೋಟು ಹಿಡಿದಾಗ ಗಾಂಧೀಜಿ ಭಾವಚಿತ್ರ ಮುದ್ರಣದಲ್ಲಿ ವ್ಯತ್ಯಾಸ ಕಂಡು ಬರುವುದು. ಬಿಟ್ಟರೆ ಉಳಿದಂತೆ ಪಿಂಕ್ ನೋಟನ್ನು ನಾಚಿಸುವಂತೆ ಇದೆ. ಏನೇ ಆಗಲಿ ಹೊಸ 2000 ರೂ. ನೋಟ್ ಜನರಲ್ಲಿ ಗೊಂದಲ ಮೂಡಿಸಿರುವುದಂತೂ ಸತ್ಯ.