Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 2000 ರೂ.ಗೆ ಗುಡ್‌ಬೈ – ಗೊಂದಲ ಬೇಡ, ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | 2000 ರೂ.ಗೆ ಗುಡ್‌ಬೈ – ಗೊಂದಲ ಬೇಡ, ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Latest

2000 ರೂ.ಗೆ ಗುಡ್‌ಬೈ – ಗೊಂದಲ ಬೇಡ, ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Public TV
Last updated: May 20, 2023 11:12 am
Public TV
Share
3 Min Read
rs 2000 note
SHARE

ನೋಟು ನಿಷೇಧದ (Note Ban) ಬಳಿಕ ಹುಟ್ಟು ಪಡೆದಿದ್ದ 2000 ರೂ. ಮುಖ ಬೆಲೆಯ ನೋಟು (Rs 2,000 Currency Note) ಈಗ ಹೆಚ್ಚು ಕಡಿಮೆ ಅಂತ್ಯ ಕಾಣುತ್ತಿದೆ. ಮಹತ್ವದ ಬೆಳವಣಿಗೆಯಲ್ಲಿ ʼಕ್ಲೀನ್ ನೋಟ್ʼ ನೀತಿಯ ಅಡಿ 2000 ರೂ. ನೋಟುಗಳ ಚಲಾವಣೆಯನ್ನು ಅಕ್ಟೋಬರ್ 1ರಿಂದ ಸಂಪೂರ್ಣವಾಗಿ ಸ್ಥಗಿತ ಮಾಡುವುದಾಗಿ ಆರ್‌ಬಿಐ (RBI) ಪ್ರಕಟಿಸಿದೆ. 2019-20ರ ಆರ್ಥಿಕ ವರ್ಷದಿಂದ 2000 ರೂ.ನೋಟು ಮುದ್ರಣ ಸಂಪೂರ್ಣ ಸ್ಥಗಿತವಾಗಿತ್ತು. ಅಷ್ಟೇ ಅಲ್ಲದೇ ಎಟಿಎಂಗಳಲ್ಲೂ (ATM) ಈ ನೋಟು ಲಭ್ಯವಿರುತ್ತಿರಲಿಲ್ಲ. ಈಗ ಆರ್‌ಬಿಯ 2 ಸಾವಿರ ರೂ. ಹಿಂದಕ್ಕೆ ಪಡೆದ ನಿರ್ಧಾರದ ಬಗ್ಗೆ ಜನರಲ್ಲಿ ಹಲವು ಪ್ರಶ್ನೆಗಳು ಏಳುವುದು ಸಹಜ. ಈ ಹಿನ್ನೆಲೆಯಲ್ಲಿ ಗೊಂದಲಗಳನ್ನು ಕಡಿಮೆ ಮಾಡಲು ಇಲ್ಲಿ ಪ್ರಶ್ನೋತ್ತರ ಮಾದರಿಯಲ್ಲಿ ಮಾಹಿತಿಗಳನ್ನು ನೀಡಲಾಗಿದೆ.

2000 ರೂ.ಗೆ ಕಾನೂನು ಮಾನ್ಯತೆ ಇದೆಯೇ?
ಸೆಪ್ಟೆಂಬರ್‌ 30ರವರೆಗೂ ಈ ನೋಟುಗಳು ಕಾನೂನು ಮಾನ್ಯತೆ ಹೊಂದಿರಲಿವೆ.

ಈಗಲೂ ವ್ಯವಹಾರಗಳಿಗೆ ಬಳಸಬಹುದೇ?
2000 ರೂ. ನೋಟು ಬಳಕೆಗೆ ಸಂಪೂರ್ಣ ನಿಷೇಧ ಹೇರಿಲ್ಲ. ಪಾವತಿ ಮಾಡಲು, ಹಣವನ್ನು ಸ್ವೀಕರಿಸಲು ಬಳಕೆ ಮಾಡಬಹುದು.


ಒಂದು ದಿನದಲ್ಲಿ ಎಷ್ಟು ರೂಪಾಯಿ ಬದಲಾಯಿಸಬಹುದು?
ದಿನವೊಂದಕ್ಕೆ ಗರಿಷ್ಠ 20 ಸಾವಿರ ರೂ. ಹಣವನ್ನು ಯಾವುದೇ ಬ್ಯಾಂಕಿನಲ್ಲಿ ಬದಲಾಯಿಸಬಹುದು.

ಅಕೌಂಟ್‌ ಇಲ್ಲದೇ ಇದ್ದರೂ ಬದಲಿಸಬಹುದೇ?
ಹೌದು. ಅಕೌಂಟ್‌ ಇಲ್ಲದೇ ಇದ್ದರೂ ಯಾವುದೇ ಬ್ಯಾಂಕಿನಲ್ಲಿ ಗರಿಷ್ಠ ಒಂದು ದಿನದಲ್ಲಿ 20 ಸಾವಿರ ರೂ. ಹಣವನ್ನು ಬದಲಿಸಿಕೊಳ್ಳಬಹುದು. ಆರ್‌ಬಿಐ 19 ಪ್ರಾದೇಶಿಕ ಕಚೇರಿಗಳಲ್ಲಿ ನೋಟ್ ಬದಲಾವಣೆಗೆ ಅವಕಾಶವಿದೆ.

20 ಸಾವಿರಕ್ಕಿಂತಲೂ ಜಾಸ್ತಿ ಹಣ ಇದ್ದರೆ ಏನು?
20 ಸಾವಿರ ರೂ.ಗಿಂತಲೂ ಜಾಸ್ತಿ ಹಣ ಇದ್ದರೂ ಯಾವುದೇ ಸಮಸ್ಯೆ ಇಲ್ಲ. ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯಲ್ಲಿ ಠೇವಣಿ ಇಡಬಹುದು. ಠೇವಣಿಗೆ ಯಾವುದೇ ಮಿತಿಯನ್ನು ಹೇರಿಲ್ಲ. ಆದರೆ ಕೆವೈಸಿ ಮತ್ತು ಇತರೇ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಯಾವಾಗ ಬದಲಾಯಿಸಬಹುದು? ಕೊನೆಯ ದಿನಾಂಕ ಯಾವುದು?
ಮೇ 23 ರಿಂದ ಆರಂಭಗೊಂಡು ಸೆ. 30ರವರೆಗೆ ಬದಲಾವಣೆಗೆ ಸಮಯಾವಕಾಶ ಇದೆ.

rbi 2000 note 1

ಶುಲ್ಕ ಪಾವತಿಸಬೇಕೇ?
ಹಣ ಬದಲಾವಣೆಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಉಚಿತವಾಗಿಯೇ ಸೌಲಭ್ಯ ಪಡೆದುಕೊಳ್ಳಬಹುದು.

2000 ರೂ. ನೋಟು ವಾಪಸ್ ಯಾಕೆ?
ಆರ್‌ಬಿಐ 2 ಸಾವಿರ ರೂ. ನೋಟನ್ನು ವಾಪಸ್‌ ಪಡೆದಿದೆಯೇ ಹೊರತು ನಿಷೇಧ ಮಾಡಿಲ್ಲ. ಭಾರೀ ಹಗರಣ ಮತ್ತು ನಕಲಿ ನೋಟುಗಳ ಹಾವಳಿ ತಡೆಯಲು ಈ ನಿರ್ಧಾರ ಮಾಡಲಾಗಿದೆ. ಬಡವರು, ಶ್ರೀಸಾಮಾನ್ಯರು ಹೆಚ್ಚಾಗಿ ಈ ಹಣವನ್ನು ಬಳಸುತ್ತಿಲ್ಲ.

ನೋಟು ನಿಷೇಧಕ್ಕೂ, ಹಿಂತೆಗೆದುಕೊಳ್ಳುವುದಕ್ಕೂ ವ್ಯತ್ಯಾಸ ಏನು?
2016ರ ಸೆ.8 ರಂದು 500, 1000 ರೂ. ನೋಟುಗಳ ಬಳಕೆಗೆ ನಿಷೇಧ ಹೇರಲಾಗಿತ್ತು. ಅಂದರೆ 1000, 500 ರೂ. ಕಾನೂನಿನ ಮಾನ್ಯತೆ ರದ್ದಾಗಿತ್ತು. ಆದರೆ ಇಲ್ಲಿ ದಿಢೀರ್‌ 2000 ರೂ. ರದ್ದಾಗಿಲ್ಲ. ಸೆ.30ರವರೆಗೂ ಬದಲಾಯಿಸಿಕೊಳ್ಳಲು ಅವಕಾಶವಿದೆ.  ಇದನ್ನೂ ಓದಿ: ಷೇರು ವಿವಾದ; ಅದಾನಿ ಗ್ರೂಪ್‌ಗೆ ಸುಪ್ರೀಂ ಕೋರ್ಟ್ ಸಮಿತಿ ಕ್ಲೀನ್ ಚಿಟ್

500 1000

ಯಾವ ವರ್ಷದಲ್ಲಿ ಎಷ್ಟೆಷ್ಟು 2000 ರೂ.ನೋಟು ಮುದ್ರಣ?
* 2016-17ರ ಆರ್ಥಿಕ ವರ್ಷ – 353.29 ಕೋಟಿ ರೂ.ಮೌಲ್ಯದ ನೋಟು
* 2017-18ರ ಆರ್ಥಿಕ ವರ್ಷ – 11.15 ಕೋಟಿ ರೂ.ಮೌಲ್ಯದ ನೋಟು
* 2018-19ರ ಆರ್ಥಿಕ ವರ್ಷ – 4.66 ಕೋಟಿ ರೂ.ಮೌಲ್ಯದ ನೋಟು
* 2019-20ರ ಆರ್ಥಿಕ ವರ್ಷದಿಂದ ನೋಟು ಮುದ್ರಣ ಸ್ಥಗಿತ

ಚಲಾವಣೆ ಇಳಿಕೆ:
2018ರ ಮಾರ್ಚ್ ಅಂತ್ಯಕ್ಕೆ ದೇಶದಲ್ಲಿ 2 ಸಾವಿರ ರೂ. ಮುಖಬೆಲೆಯ 33,632 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದರೆ 2019ರ ಮಾರ್ಚ್‌ ಅಂತ್ಯಕ್ಕೆ ಈ ಸಂಖ್ಯೆ 32,910 ಲಕ್ಷಕ್ಕೆ ಇಳಿಕೆಯಾಗಿತ್ತು. 2020ರ ಮಾರ್ಚ್‌ ಅಂತ್ಯಕ್ಕೆ ಇದು 27,398 ಲಕ್ಷಕ್ಕೆ ಇಳಿಕೆಯಾಗಿತ್ತು.

ಹಿಂದೆಯೇ ಹೇಳಿತ್ತು:
ದೇಶದಲ್ಲಿನ ಕಪ್ಪುಹಣ ಮತ್ತು ಭಯೋತ್ಪಾದನೆಗೆ ಬ್ರೇಕ್ ಹಾಕುವ ಉದ್ದೇಶದಿಂದ, ನೋಟು ನಿಷೇಧ ನಿರ್ಧಾರದ ಸಮಯದಲ್ಲಿ ಚಲಾವಣೆಗೆ ತಂದಿದ್ದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ಹಂತ ಹಂತವಾಗಿ ಕಡಿಮೆ ಮಾಡಲಿದೆ ಎಂದು ಹಣಕಾಸು ಸಚಿವಾಲಯ 2019ರ ಜನವರಿಯಲ್ಲಿ ಮಾಹಿತಿ ನೀಡಿತ್ತು. ನವೆಂಬರ್ 8, 2016ರಲ್ಲಿ ನೋಟ್ ನಿಷೇಧ ಸಂದರ್ಭದಲ್ಲಿ ಆರ್‌ಬಿಐ 2 ಸಾವಿರ ರೂ.ನಷ್ಟು ದೊಡ್ಡ ಮೊತ್ತದ ನೋಟುಗಳನ್ನು ಹಣಕಾಸು ಕೊರತೆಯನ್ನು ಭರಿಸುವ ಉದ್ದೇಶದಿಂದ 2000 ರೂ. ಚಲಾವಣೆಗೆ ತಂದಿತ್ತು.

TAGGED:2000 ರೂbankindianarendra modinote banrbiಆರ್‍ಬಿಐನೋಟು ನಿಷೇಧಬ್ಯಾಂಕ್
Share This Article
Facebook Whatsapp Whatsapp Telegram

Cinema news

Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories

You Might Also Like

Iranian Crude Oil
Latest

ಭಾರತದತ್ತ ಹೊರಟಿದ್ದ ಇರಾನ್ ಕಚ್ಚಾ ತೈಲ ಹೊತ್ತ ಹಡಗು ಚೀನಾದತ್ತ ಪ್ರಯಾಣ

Public TV
By Public TV
12 minutes ago
Raw Bitumen Karwar
Latest

ಕಾರವಾರ| ಮಧ್ಯಪ್ರಾಚ್ಯದಿಂದ ಬರುತ್ತಿದ್ದ ಕಚ್ಚಾ ಡಾಂಬರ್ ಸಂಪೂರ್ಣ ಬಂದ್

Public TV
By Public TV
32 minutes ago
Induction Stove
Bengaluru City

ಇಂಡಕ್ಷನ್‌ ಸ್ಟವ್‌ ಖರೀದಿ ಮುನ್ನ ಈ ಅಂಶಗಳನ್ನು ತಿಳಿದುಕೊಳ್ಳಿ

Public TV
By Public TV
33 minutes ago
Hubli Love Jihad
Dharwad

ಜ್ಯೂಸ್‌ನಲ್ಲಿ ಮತ್ತಿನ ಔಷಧ ಬೆರಸಿಕೊಟ್ಟು ಸಮೀರ್‌ ಅತ್ಯಾಚಾರ ಮಾಡಿದ್ದಾನೆ – ಸಂತ್ರಸ್ತೆ ಸ್ಫೋಟಕ ಹೇಳಿಕೆ

Public TV
By Public TV
38 minutes ago
Sameer
Latest

ಹುಬ್ಬಳ್ಳಿ ಲವ್ ಜಿಹಾದ್ ಕೇಸ್‌ | ಸಮೀರ್ ನನ್ನ ಮಗಳ ತಲೆ ಕೆಡಿಸಿದ್ದಾನೆ: ಯುವತಿ ತಾಯಿ ಆಕ್ರೋಶ

Public TV
By Public TV
43 minutes ago
pralhad joshi
Latest

ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ವಿನಾಯಿತಿ ಹಿಂಪಡೆದಿದ್ದು ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನದ ಸೂಚಕ: ಜೋಶಿ ಟೀಕೆ

Public TV
By Public TV
45 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?