ಮುಂಬೈ: ಏಕನಾಥ್ ಶಿಂಧೆ (Eknath Shinde) ಬಣಕ್ಕೆ ಶಿವಸೇನೆ (Shiv Sena) ಹೆಸರು ಮತ್ತು ಚಿಹ್ನೆಯನ್ನು ಚುನಾವಣಾ ಆಯೋಗ (Election Commission) ನೀಡಿದ ಬೆನ್ನಲ್ಲೇ 2000 ಕೋಟಿ ರೂ.ಗಳ ಡೀಲ್ ನಡೆದಿದೆ ಎಂದು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಗಂಭೀರ ಆರೋಪ ಮಾಡಿದ್ದಾರೆ.
ಹೆಸರು ಮತ್ತು ಚಿಹ್ನೆ ಖರೀದಿಸಲು 2000 ಕೋಟಿ ರೂ.ಗಳ ಒಳಒಪ್ಪಂದ ನಡೆದಿದೆ ಎಂದು ಸಂಜಯ್ ರಾವತ್ (Sanjay Raut) ಸರಣಿ ಟ್ವಿಟ್‍ಗಳ ಮೂಲಕ ಆರೋಪಿಸಿದ್ದಾರೆ. 2000 ಕೋಟಿ ರೂ. ಇದು ಪ್ರಾಥಮಿಕ ಅಂಕಿ ಅಂಶವಾಗಿದೆ. ಆರೋಪಕ್ಕೆ ಸೂಕ್ತ ದಾಖಲೆಗಳಿದ್ದು ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಟರ್ಕಿ, ಸಿರಿಯಾ ಭೂಕಂಪ- ಸಾವಿನ ಸಂಖ್ಯೆ 41 ಸಾವಿರಕ್ಕೆ ಏರಿಕೆ
ಇತ್ತೀಚೆಗೆ ಚುನಾವಣಾ ಆಯೋಗವು ಏಕ್‍ನಾಥ್ ಶಿಂಧೆ ಬಣವನ್ನು ಶಿವಸೇನೆ ಎಂದು ಗುರುತಿಸಿ ಅದಕ್ಕೆ ಬಿಲ್ಲು ಬಾಣವನ್ನು ಗುರುತಾಗಿ ಸೂಚಿಸಿ ಆದೇಶಿಸಿತ್ತು.
2019ರಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳುವ ಭರವಸೆಯನ್ನು ತಳ್ಳಿಹಾಕಿ ಶಿವಸೇನೆ, ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಂಡಿತ್ತು. ನಂತರ ನ್ಯಾಷಲಿಸ್ಟ್ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಮಹಾ ವಿಕಾಸ್ ಅಘಾಡಿ (Maha Vikas Aghadi) ಸರ್ಕಾರ ಬಂದಿತ್ತು. ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಏಕನಾಥ್ ಶಿಂಧೆ ಬಣದ ಬಂಡಾಯದಿಂದ ಎನ್‍ಡಿಎ ಸರ್ಕಾರದ ಅಧಿಕಾರ ಹಿಡಿದಿತ್ತು. ಇದನ್ನೂ ಓದಿ: ನನ್ನ ಮೇಲೆ ಹಬ್ಬಿಸ್ತಿರೊ ಸುಳ್ಳು ಆಪಾದನೆಗಳೆಲ್ಲ ವ್ಯವಸ್ಥಿತ ಪಿತೂರಿ: ರೂಪಾಗೆ ರೋಹಿಣಿ ತಿರುಗೇಟು
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k