ಪುಣೆ: ಟ್ರಾಫಿಕ್ ಪೊಲೀಸ್ 200 ರೂಪಾಯಿ ದಂಡ ಹಾಕಿದಾಗ ತನ್ನ ತಪ್ಪಿಲ್ಲ ಎಂದು ಸಾಬೀತು ಪಡಿಸಿ ಕೇಸ್ ಗೆಲ್ಲಲು 10,000 ರೂಪಾಯಿ ಖರ್ಚು ಮಾಡಿ ಉದ್ಯಮಿಯೊಬ್ಬರು ಸುದ್ದಿಯಾಗಿದ್ದಾರೆ.
ಪುಣೆಯ ಉದ್ಯಮಿ ಬಿನೋಯ್ ಗೋಪಾಲನ್(45) ಅವರಿಗೆ ಪಿಂಪ್ರಿ-ಚಿಂಚಿವಾಡ್ ಠಾಣಾ ಪೊಲೀಸರು ನೋ ಪಾಕಿರ್ಂಗ್ ಸ್ಥಳದಲ್ಲಿ ಬೈಕ್ ಪಾರ್ಕ್ ಮಾಡಿದ್ದಕ್ಕೆ 200 ರೂಪಾಯಿ ದಂಡ ಹಾಕಿದ್ದರು.
Advertisement
ಪೊಲೀಸರು ಎಲ್ಲರಿಗೂ ದಂಡ ಹಾಕಿದ್ದಾರೆ. ಆದರೆ ಬಿನೋಯ್ ಮಾತ್ರ ದಂಡವನ್ನು ಕಟ್ಟಲು ನಿರಾಕರಿಸಿದ್ದಾರೆ. ನೋ ಪಾಕಿರ್ಂಗ್ ಝೋನ್ ಎಂಬ ಬೋರ್ಡ್ ಸರಿಯಾಗಿ ಕಾಣುತ್ತಿಲ್ಲ. ನೋ ಪಾಕಿರ್ಂಗ್ ಬದಲು ಇದು ಇತ್ತ ಕಡೆ ಪಾರ್ಕ್ ಮಾಡಬಹುದು ಎಂದು ಸೂಚಿಸುವಂತಿದೆ. ಹೀಗಾಗಿ ನಾನು ದಂಡ ಪಾವತಿಸುವುದಿಲ್ಲ ಎಂದು ವಾದಿಸಿದ್ದರು.
Advertisement
Advertisement
ಪಾರ್ಕಿಂಗ್ ಬೋರ್ಡ್ ಡ್ಯಾಮೇಜ್ ಆಗಿರುವುದು ತನ್ನ ತಪ್ಪಲ್ಲ, ಹೀಗಾಗಿ ಈ ಚಲನ್ ರದ್ದು ಮಾಡಬೇಕು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಪೊಲೀಸರ ಪ್ರತಿಕ್ರಿಯೆ ಬಿನೋಯ್ ಗೋಪಾಲನ್ ಅವರಿಗೆ ಬೇಸರವಾಗಿದೆ. ಹೀಗಾಗಿ ಇದಕ್ಕೆ ಸರಿಯಾದ ಉತ್ತರವನ್ನು ನೀಡಬೆಕು ಎಂದು ತೀರ್ಮಾನಿಸಿ ಕೇಸ್ ಗೆದ್ದಿದ್ದಾರೆ.
Advertisement
ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿಕೊಂಡು ದೂರು ಸಲ್ಲಿಸಿದೆ. ವಕೀಲರನ್ನು ನೇಮಿಸಿ ಪ್ರಕರಣಕ್ಕೆ ಅಂತ್ಯ ಕಾಣಿಸಲು ಪಣ ತೊಟ್ಟೆ. 2 ತಿಂಗಳ ವಿಚಾರಣೆ ಬಳಿಕ ನನ್ನ ತಪ್ಪಿಲ್ಲ ಚಲನ್ ರದ್ದು ಮಾಡಬೆಕು ಎಂದು ಕೋರ್ಟ್ ಸೂಚಿಸಿತ್ತು. ನಾನು 200 ರೂಪಾಯಿ ದಂಡವನ್ನು ಕಟ್ಟಿ ಸುಮ್ಮನಾಗ ಬಹುದಿತ್ತು. ಆದರೆ ಪೊಲೀಸರ ವರ್ತನೆ ನನ್ನನ್ನೇ ತಪ್ಪಿತಸ್ಥನ ಸ್ಥಾನದಲ್ಲಿ ಕೂರಿಸುತ್ತಿತ್ತು. ಹೀಗಾಗಿ ನಾನು ಹಣ ಖರ್ಚು ಆದರೂ ಹೋರಾಟ ಮಾಡಿ ಕೇಸ್ ಗೆದ್ದಿದ್ದೇನೆ ಎಂದು ಬಿನೋಯ್ ಹೇಳಿದ್ದಾರೆ.