ಹೈದರಾಬಾದ್: ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಪಶುವೈದ್ಯಕೀಯ ಔಷಧಿ ಕಂಪನಿಯಲ್ಲಿ ಅನಿಲ ಸೋರಿಕೆಯಾದ ಪರಿಣಾಮ ಪಕ್ಕದ ಕಂಪನಿ ಅಪ್ಯಾರಲ್ಸ್ ಸಂಸ್ಥೆಯ ಸುಮಾರು 200 ಮಹಿಳಾ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ.
Advertisement
ಪೋರಸ್ ಲ್ಯಾಬೊರೇಟರೀಸ್‍ನಲ್ಲಿ ಅನಿಲ ಸೋರಿಕೆಯಾಗಿದೆ. ಇದರಿಂದಾಗಿ ಅಚ್ಚುತಪುರಂ ಪ್ರದೇಶದಲ್ಲಿನ ವಿಶೇಷ ಆರ್ಥಿಕ ವಲಯದ (SEZ) ಪಕ್ಕದ ಸಂಸ್ಥೆಯ ಸಿಬ್ಬಂದಿ ಮೇಲೆ ಪರಿಣಾಮ ಬೀರಿದೆ. ಅಪ್ಯಾರಲ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 200ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ವಾಂತಿ, ತಲೆನೋವು ಮತ್ತು ಕಣ್ಣುರಿ ಕಾಣಿಸಿಕೊಂಡ ಪರಿಣಾಮ ಎಲ್ಲ ಕಾರ್ಮಿಕರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವೀಸಾ ಹಗರಣ – ಕಾರ್ತಿ ಚಿದಂಬರಂಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್
Advertisement
ಪೋರಸ್ ಪಕ್ಕದಲ್ಲಿರುವ ಬ್ರಾಂಡಿಕ್ಸ್ ಎಂಬ ಕಂಪನಿ 1,000 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಬ್ರಾಂಡಿಕ್ಸ್ ಕ್ಯಾಂಪಸ್ ಸೀಡ್ಸ್ ಅಪರೆಲ್ ಇಂಡಿಯಾ ಎಂಬ ಇನ್ನೊಂದು ಕಂಪನಿಯನ್ನು ಹೊಂದಿದೆ. ಕಂಪನಿಯಲ್ಲಿ 1,800 ಮಂದಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ಬಳಿಕ ಅಕ್ಕಪಕ್ಕದ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ತಕ್ಷಣ ಸ್ಥಳಾಂತರಿಸಿದ ಪರಿಣಾಮ ಹೆಚ್ಚಿನ ಅಪಾಯ ತಪ್ಪಿದಂತಾಗಿದೆ. ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ – ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಬಿಜೆಪಿ ಆಗ್ರಹ
Advertisement
#BREAKING#Gasleak?
Information that something inside the Seeds Company inside the #Brandix Company was vomiting due to a gas leak.#Visakhapatnam #AndhraPradesh pic.twitter.com/kjCePJU4aV
— Ur'sGirivsk (@girivsk) June 3, 2022
Advertisement
ಅಸ್ವಸ್ಥಗೊಂಡ ಮಹಿಳಾ ಕಾರ್ಮಿಕರನ್ನು ಅಚ್ಯುತಪುರಂನ ಎರಡು ಖಾಸಗಿ ಆಸ್ಪತ್ರೆಗಳು ಮತ್ತು ಅನಕಪಲ್ಲಿಯ ಎನ್‍ಟಿಆರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 1,800ಕ್ಕೂ ಅಧಿಕ ಕಾರ್ಮಿಕರನ್ನು ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ಡಿಸ್ಚಾರ್ಚ್ ಮಾಡಲಾಗಿದೆ.