ಕೊಡಗು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಡಿಕೇರಿ ತಾಲೂಕಿನ ಬದಿಗೆರೆ ಗ್ರಾಮಸ್ಥರು ಅಪಾಯದಲ್ಲಿ ಸಿಲುಕಿದ್ದಾರೆ.
ಬದಿಗೆರೆ ಗ್ರಾಮಕ್ಕೆ ನದಿ ನೀರು ನುಗ್ಗಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರಾಣ ಉಳಿಸಿಕೊಳ್ಳಲು ಗುಡ್ಡವನ್ನೇರಿ ಕುಳಿತಿದ್ದಾರೆ. ಆದರೆ ಮಳೆ ಹೆಚ್ಚುತ್ತಿರುವುದರಿಂದ ಗುಡ್ಡವೂ ಸಹ ಕುಸಿಯುವ ಭೀತಿ ಎದುರಾಗಿದೆ. ಗುಡ್ಡದಲ್ಲಿರುವ ಸುಮಾರು 200ಕ್ಕೂ ಹೆಚ್ಚು ಮಂದಿ ರಕ್ಷಣೆಗಾಗಿ ಗೋಗರೆಯುತ್ತಿದ್ದು, ನೆರವಿನ ನಿರೀಕ್ಷೆಯಲ್ಲಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾಡಳಿತವು ಸಂತ್ರಸ್ಥರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲು ಮುಂದಾಗಿದೆ. ಜಿಲ್ಲಾಡಳಿತ ಮನವಿ ಮೇರೆಗೆ ಸೇನಾ ಹೆಲಿಕಾಪ್ಟರ್ ಗಳು ರಕ್ಷಣೆಗೆ ಆಗಮಿಸಲಿವೆ. ಜಿಲ್ಲಾಡಳಿತ ಈಗಾಗಲೇ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಅಪಾಯದಮಟ್ಟ ಮೀರಿ ಹರಿಯುತ್ತಿರುವ ಕಾವೇರಿ ಹಾಗೂ ಹಾರಂಗಿ ನದಿಯಿಂದಾಗಿ ಹಾರಂಗಿ ಜಲಾಶಯವು ಸಂಪೂರ್ಣ ತುಂಬಿದೆ.
ಈಗಾಗಲೇ ಜಲಾಶಯದಿಂದ ಹೆಚ್ಚುವರಿಯಾದ 77 ಸಾವಿರ ಕ್ಯೂಸೆಕ್ ನೀರನ್ನು ಹೋರಕ್ಕೆ ಬೀಡಲಾಗಿದೆ. ಜಿಲ್ಲಾಡಳಿತ ನದಿಪಾತ್ರದ ಜನರಿಗೆ ಎಚ್ಚರಿಕೆಯನ್ನು ನೀಡಿದ್ದು, ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಕಾರ್ಯಪ್ರವೃತ್ತವಾಗಿದೆ. ಇದನ್ನೂ ಓದಿ: ಭೂ ಕುಸಿತದಿಂದ ಕಾಡಿನಲ್ಲಿ ಸಿಲುಕಿದ್ದ 50 ಪ್ರಯಾಣಿಕರ ರಕ್ಷಣೆ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv