ಕಾರವಾರ: ಕಾಂಗ್ರೆಸ್ (Congress) ಸರ್ಕಾರ ಬರುತ್ತಿದ್ದಂತೆ 200 ಯೂನಿಟ್ ವಿದ್ಯುತ್ (200 Unit Electricity) ಫ್ರೀ ನೀಡುವುದಾಗಿ ಘೋಷಣೆ ಮಾಡಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada) ವಿದ್ಯುತ್ ಉಕರಣಗಳಿಗೆ (Electrical Equipment) ಬೇಡಿಕೆ ಹೆಚ್ಚಾಗಿದ್ದು ಮನೆಗೆ ಬೇಕಾದ ಫ್ರಿಜ್, ಎಸಿ, ಎಲೆಕ್ಟ್ರಿಕ್ ಒಲೆ, ಫ್ಯಾನ್‌ಗಳ ಖರೀದಿ ಭರಾಟೆ ಜೋರಾಗಿದೆ.
Advertisement
Advertisement
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿಗಳನ್ನು (Guarantee) ಘೋಷಣೆ ಮಾಡಿತ್ತು. ಇದರ ಫಲವಾಗಿ ಅಧಿಕಾರದ ಚುಕ್ಕಾಣಿ ಸಹ ಹಿಡಿದಿದ್ದು ತಾನು ಘೋಷಣೆ ಮಾಡಿದ 5 ಗ್ಯಾರಂಟಿಗಳನ್ನು ಜಾರಿಗೆ ತರಲು ಮುಂದಾಗಿದೆ. ಹೀಗಾಗಿ ಪಕ್ಷ ನೀಡಿದ್ದ ಗ್ಯಾರಂಟಿಗಳನ್ನು ನಂಬಿ ಮತಹಾಕಿದ ಜನ ಈಗ ಅವುಗಳ ಪ್ರಯೋಜನ ಪಡೆಯಲು ಹಾತೊರೆಯುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ 200 ಯೂನಿಟ್ ಉಚಿತ ವಿದ್ಯುತ್ ಸದ್ಬಳಕೆಗೆ ಜನ ಮುಂದಾಗಿದ್ದಾರೆ.
Advertisement
Advertisement
ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಮತ್ತು ನಗರ ಪ್ರದೇಶದ ಜನ ಕಳೆದ ತಿಂಗಳಿಗಿಂತ ಈ ತಿಂಗಳು ಅತಿ ಹೆಚ್ಚು ವಿದ್ಯುತ್ ಬಳಕೆ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಪ್ರತಿ ಮನೆಗಳಲ್ಲಿ ತಿಂಗಳಿಗೆ ಅಂದಾಜು 35 ರಿಂದ 50 ಯೂನಿಟ್ ಒಳಗೆ ವಿದ್ಯುತ್ ಉಪಯೋಗವಾಗುತ್ತದೆ. ಆದರೆ ಕಾಂಗ್ರೆಸ್ ಪಕ್ಷ 200 ಯೂನಿಟ್‌ಗಳ ಉಚಿತ ವಿದ್ಯುತ್ ಘೋಷಣೆ ಮಾಡಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಲು ಜನ ಮುಂದಾಗಿದ್ದಾರೆ. ಇದನ್ನೂ ಓದಿ: ಹಾಪ್‌ಕಾಮ್ಸ್‌ನಲ್ಲಿ ಮೇ 26 ರಿಂದ ಮಾವು, ಹಲಸು ಮೇಳ
ಹಳ್ಳಿ ಪ್ರದೇಶದ ಜನ ವಿದ್ಯುತ್ ಬಳಕೆ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಕಳೆದ 10 ದಿನಗಳಲ್ಲಿ ಎಲೆಕ್ಟ್ರಿಕ್ ಉತ್ಪನ್ನಗಳ ಖರೀದಿ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸತ್ ಭವನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಿಪಕ್ಷಗಳ ಬಹಿಷ್ಕಾರ – ಭಾಗವಹಿಸುತ್ತೇವೆ ಎಂದ 2 ಪಕ್ಷಗಳು