– 500ಕ್ಕೂ ಹೆಚ್ಚು ಜನರಿಗೆ ನಿರಾಸೆ ಮಾಡಿದ ಶೋ ರೂಂ
ದಾವಣಗೆರೆ: 200 ರೂ.ಗೆ ಬೇಸಿಕ್ ಮೊಬೈಲ್ ಎಂದರೆ ಯಾರು ಬಿಡಲ್ಲ. ಇಂದು ದಾವಣಗೆರೆಯಲ್ಲಿಯೂ ಅದೇ ರೀತಿಯಾಗಿದ್ದು, 500 ಜನರ ಸರತಿಯ ಪೈಕಿ ಕೇವಲ 100 ಜನರಿಗೆ ಮೊಬೈಲ್ ಸಿಕ್ಕಿದ್ದು, ಉಳಿದವರು ನಿರಾಸೆಯಿಂದ ಮನೆಗೆ ತೆರಳಿದ್ದಾರೆ.
ದಾವಣಗೆರೆಯಲ್ಲಿ ಸಂಗೀತಾ ಮೊಬೈಲ್ ಶೋ ರೂಮ್ ಉದ್ಘಾಟನೆ ಅಂಗವಾಗಿ 200 ರೂಪಾಯಿಗೆ ಬೇಸಿಕ್ ಮಾಡಲ್ ಮೊಬೈಲ್ ವಿತರಣೆ ಮಾಡಲಾಗುತ್ತಿತ್ತು. ಈ ವೇಳೆ ನೂಕು ನುಗ್ಗಲು ಸಂಭವಿಸಿ ಜನರನ್ನು ನಿರ್ವಹಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
Advertisement
Advertisement
200 ರೂಪಾಯಿಗೆ ಮೊಬೈಲ್ ಸಿಗುತ್ತೆ ಎಂದು ಪ್ರಕಟಣೆ ಹೊರಡಿಸಲಾಗಿತ್ತು. ಪ್ರಕಟಣೆ ನೋಡಿದ ಜನರು ಮೊಬೈಲ್ ಖರೀದಿಗೆ ದೌಡಾಯಿಸಿದ್ದಾರೆ. ಕೇವಲ ದಾವಣಗೆರೆ ಅಷ್ಟೆ ಅಲ್ಲದೇ, ಹರಿಹರ ಮತ್ತು ಸುತ್ತಲಿನ ಭಾಗಗಳ ಜನರು ಬಂದಿದ್ದು, ಜಾತ್ರೆಯಲ್ಲಿ ಉಂಡವನೇ ಜಾಣ ಅಂದುಕೊಂಡು ಮೊಬೈಲ್ ಪಡೆಯಲು ಜನರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು.
Advertisement
Advertisement
ಈ ಸುದ್ದಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ಕಡಿಮೆ ಬೆಲೆಗೆ ಮೊಬೈಲ್ ಸಿಗುತ್ತೆ ಅಂದುಕೊಂಡು ಸಾವಿರಾರು ಜನರು ಆಗಮಿಸಿದ್ದರು. ಹೀಗಾಗಿ, ಅಂಗಡಿ ಮುಂದೆ ಭಾರೀ ಗದ್ದಲ ನೂಕು ನುಗ್ಗಲು ಉಂಟಾಗಿ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿತ್ತು. ಪರಿಸ್ಥಿತಿ ಅರಿತ ಬಡಾವಣೆ ಠಾಣೆ ಪೊಲೀಸರು ಕಡೆಗೂ ಹರಸಾಹಸ ಪಟ್ಟು ಜನಸಂದಣಿಯನ್ನು ನಿಯಂತ್ರಿಸಿದ್ದು, ಬ್ಯಾರಿಕೇಡ್‍ಗಳನ್ನು ಹಾಕಿ ಪರಿಸ್ಥಿತಿಯನ್ನು ಹತೊಟಿಗೆ ತಂದರು.
ಮೊದಲು ಬಂದ ಕೇವಲ 100 ಜನರಿಗೆ ಮಾತ್ರ ಮೊಬೈಲ್ ನೀಡಿದ್ದು, ಸರತಿ ಸಾಲಿನಲ್ಲಿ ನಿಂತಿದ್ದ ಐನೂರಕ್ಕೂ ಹೆಚ್ಚು ಮಂದಿಗೆ ಮೊಬೈಲ್ ಸಿಗಲಿಲ್ಲ. ಹೀಗಾಗಿ, ಶೋ ರೂಂ ವಿರುದ್ಧವೂ ಜನರ ಬೇಸರ ಕೇಳಿ ಬಂದಿತು. ಮೊದಲು ಬಂದವರು ಮೊಬೈಲ್ ತೆಗೆದುಕೊಂಡು ಸಂತಸ ಪಟ್ಟರೆ ನಂತರ ಬಂದವರು ಮೊಬೈಲ್ ಸಿಗದೆ ನಿರಾಸೆ ಅನುಭವಿಸುವಂತಾಯಿತು.